ನೇಸರ ಜು.01: ಬೆಳ್ಳಾರೆ ಜೇಸಿ ಘಟಕದ ನೇತೃತ್ವದಲ್ಲಿ ಜೇಸಿಐ ವಲಯ 15ರ “ಕೆಸರ್ ದ ಪರ್ಬ” ನಡೆಯಿತು.
ವಲಯ 15 ರ ಅಧ್ಯಕ್ಷರಾದ ಜೇಸಿ ಸೇನೆಟರ್ ರೋಯನ್ ಉದಯ ಕ್ರಾಸ್ತಾ ದೀಪ ಬೆಳಗಿಸಿ, ತೆಂಗಿನ ಹಿಂಗಾರು ಅರಳಿಸಿ, ಕಾರ್ಯಕ್ರಮ ಉದ್ಘಾಟಿಸಿ, ತುಳು ಸಂಸ್ಕೃತಿಯ ಪರಂಪರೆಯನ್ನು ನೆನಪಿಸುವ ಕಾರ್ಯ ಜೇಸಿ ವಲಯದಿಂದ ಆಗಿದೆ. ಈ ಕಾರ್ಯಕ್ರಮದ ಯಶಸ್ಸಿಗೆ, ಸಹಕಾರ ಪ್ರೋತ್ಸಾಹ ನೀಡಿದವರನ್ನು ಸ್ಮರಿಸಿದರು. ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ದಿಕ್ಸೂಚಿ ಭಾಷಣ ಮಾಡಿ, ತುಳುನಾಡಿನ ಭಾಷೆ, ಸಂಸ್ಕೃತಿಯ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ. ಇಲ್ಲಿ ತುಳುವರ ಪರಂಪರೆಯನ್ನು ನೆನಪಿಸುವ ಕಾರ್ಯ ಜೇಸಿಐ ಸಂಸ್ಥೆಯಿಂದ ನಡೆದಿರುವುದು ಎಲ್ಲರೂ ಮೆಚ್ಚಲೇ ಬೇಕಾಗಿದೆ. ತುಳು ಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳ್ಳಬೇಕು. ತುಳು ಸಂಸ್ಕೃತಿ ಭಾಷೆಗೆ ಸಿಗಬೇಕಾದ ಗೌರವನ್ನು ಪಡೆಯಲು ತುಳುನಾಡಿನ ಜನರು ಜಾತಿ-ಮತ, ಪಂಥ, ಧರ್ಮ ಮೀರಿ ಪ್ರತಿಜ್ಞೆ ಕೈಗೊಳ್ಳಲು ಕರೆ ಕೊಟ್ಟರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಲಯ ಕ್ರೀಡಾ ಸಂಯೋಜಕ ಜೇಸಿ ಸಂತೋಷ ಕುಮಾರ್ ವಹಿಸಿದ್ದರು. ವಲಯ ಉಪಾಧ್ಯಕ್ಷರಾದ ಜೇಸಿ ಪ್ರಶಾಂತ್ ಲಾಯಿಲ, ಬೆಳ್ಳಾರೆ ಘಟಕದ ಅಧ್ಯಕ್ಷೆ ಜೇಸಿ.ನಿರ್ಮಲಾ ಜಯಾರಾಮ್, ಕಾರ್ಯಕ್ರಮದ ರಾಯಭಾರಿ ಜೇಸಿ.ಅಕ್ಷತಾ ಗಿರೀಶ್, ಸೀನಿಯರ್ ಜೇಸಿ ಅಧ್ಯಕ್ಷರಾದ ಜೇಸಿ.ಜಗನ್ನಾಥ ರೈ, ವಲಯದ ಲೇಡಿ ಜೇಸಿ ಮರಿಯಾ ರೋಡ್ರಿಗಸ್, ಉಪಾಧ್ಯಕ್ಷರಾದ ಜೇಸಿ ರವೀಂದ್ರ ಪಾಟಾಳಿ, ಜೇಸಿ ಸ್ವಾತಿ ರೈ, ಬೆಳ್ಳಾರೆ ಘಟಕದ ಜೇಸಿ ಪ್ರದೀಪ್ ಕುಮಾರ್ ಪನ್ನೆಗದ್ದೆ, ಪೂರ್ವ ವಲಯಾಧಿಕಾರಿ ಜೇಸಿ ಪ್ರೀತಂ ರೈ , ಜೇಸಿ ಜಯರಾಮ್, ಮಿಥುನ್ ಶೆಣೈ, ಸುರೇಶ ಪನ್ನೆ, ಗಿರಿಧರ ಪನ್ನೆ, ನಾಗೇಶ್ ಕುಲಾಲ್, ವಲಯ ಆಡಳಿತ ಮಂಡಳಿಯ ಜೇಸಿ.ಪುರುಷೋತ್ತಮ ಶೆಟ್ಟಿ, ಜೇಸಿ.ಉದಯ ಸೇರಿದಂತೆ ಇತರ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಲಯ ಉಪಾಧ್ಯಕ್ಷರುಗಳು , ವಲಯ ಅಧಿಕಾರಿಗಳು, ವಲಯ ವಿವಿಧ ಘಟಕಗಳ ಅಧ್ಯಕ್ಷಗಳಾದ ಜೇಸಿಐ ಬೆಳ್ತಂಗಡಿಯ ಘಟಕಾಧ್ಯಕ್ಷ ಜೇಸಿ ಪ್ರಸಾದ್, ಜೇಸಿಐ ಚಿತ್ತೂರು ಮಾರಣಕಟ್ಟೆ ಘಟಕಾಧ್ಯಕ್ಷ ಜೇಸಿ.ಗಿರೀಶ್ ಸಾಲಿಯಾನ್, ಜೇಸಿಐ ಮೂಡಬಿದ್ರೆ ತ್ರಿಭುವನ್ ಅಧ್ಯಕ್ಷರು ಜೇಸಿ ಶಾಂತಲ, ಸುಳ್ಯ ಸಿಟಿಯ ಅಧ್ಯಕ್ಷರಾದ ಬಶೀರ್ ಯು.ಪಿ, ಜೇಸಿಐ ಶಂಕರನಾರಾಯಣ ಘಟಕಾಧ್ಯಕ್ಷ ಜೇಸಿ.ಪ್ರಶಾಂತ್ ಶೆಟ್ಟಿ, ಜೇಸಿಐ ಕಡಬ ಅಧ್ಯಕ್ಷ ಜೇಸಿ ಕಾಶೀನಾಥ್, ಜೇಸಿಐ ಆಲಂಕಾರು ಘಟಕಾಧ್ಯಕ್ಷ ಜೇಸಿ. ಅಜಿತ್ ರೈ, ಜೇಸಿಐ ಹೆಬ್ರಿಯ ಘಟಕಾಧ್ಯಕ್ಷ ಜೇಸಿ.ರೂಪೇಶ್ ನಾಯ್ಕ್, ಜೇಸಿಐ ಕುಂದಾಪುರದ ಘಟಕಾಧ್ಯಕ್ಷೆ ಜೇಸಿ.ನಾಗರತ್ನ ಹೆರಳೆ, ಉಪ್ಪಿನಂಗಡಿ ಘಟಕಾಧ್ಯಕ್ಷ ಜೇಸಿ. ಮೋಹನ್ ಚಂದ್ರ ತೋಟದ ಮನೆ ಸೇರಿದಂತೆ ವಿವಿಧ ಹಿರಿಯ ಕಿರಿಯ ಜೇಸಿ ಸದಸ್ಯರು ಉಪಸ್ಥಿತರಿದ್ದರು.