ರಾಮಕುಂಜ ಪ.ಪೂ.ಕಾಲೇಜಿನಲ್ಲಿ ಹದಿ ಹರೆಯದವರ ಸಮಸ್ಯೆಗಳ ಕುರಿತ ಕಾರ್ಯಾಗಾರ

ಶೇರ್ ಮಾಡಿ

ನೇಸರ ನ18: ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಹದಿಹರೆಯದವರ ಸಮಸ್ಯೆಗಳ ಕುರಿತಾದ ಕಾರ್ಯಾಗಾರವು ಕಾಲೇಜಿನ ವಿದ್ಯಾರ್ಥಿನಿಯರಿಗೆ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಎಸ್.ಡಿ.ಯಂ ಕಾಲೇಜಿನ ಮನೋವಿಜ್ಞಾನ ವಿಭಾಗದ ಉಪನ್ಯಾಸಕಿ ಅಶ್ವಿನಿ ಶೆಟ್ಟಿಯವರು ಮಾತನಾಡಿ, ಮನುಷ್ಯನ ಬೆಳವಣಿಗೆಯ ಹಂತಗಳಲ್ಲಿ, ಹದಿಹರೆಯವು ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದೆ. ಮನೋದೈಹಿಕ ಬದಲಾವಣೆಗಳ ಬಗ್ಗೆ ಹದಿಹರೆಯದವರಲ್ಲಿ ಕುತೂಹಲ ಮತ್ತು ಭೀತಿಯೂ ಇರುತ್ತದೆ. ಈ ಅವಧಿಯಲ್ಲಿ ಸೂಕ್ತವಾದ ಮಾಹಿತಿ ಹದಿ ಹರೆಯದವರಲ್ಲಿ ಇದ್ದರೆ ಯಾವುದೇ ಗೊಂದಲಗಳನ್ನು ಅವರು ಇರಿಸಿಕೊಳ್ಳಬೇಕಾಗಿಲ್ಲ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ.,ರವರು ಸಂದರ್ಭೋಚಿತವಾಗಿ ಮಾತನಾಡಿದರು. ಕನ್ನಡ ಉಪನ್ಯಾಸಕಿ ಮಲ್ಲಿಕಾ ಎಂ.,ರವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿ ಪ್ರಮೀಳಾರವರು ವಂದಿಸಿದರು.
ಇದೇ ವೇಳೆಗೆ ಹುಡುಗರಿಗೆ ಕಾಲೇಜಿನ ಇತಿಹಾಸ ವಿಭಾಗದ ಉಪನ್ಯಾಸಕ ವಸಂತ ಕುಮಾರ್‌ರವರು ಭಾವನೆಗಳ ನಿರ್ವಹಣೆ, ಒತ್ತಡ ನಿರ್ವಹಣೆ ಮತ್ತು ವಯೋ ಸಹಜ ಬದಲಾವಣೆಗಳ ಕುರಿತಾಗಿ ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮಕ್ಕೆ ಕಾಲೇಜಿನ ಉಪನ್ಯಾಸಕರಾದ ಶಿವಪ್ರಸಾದ್ ಮತ್ತು ಚೇತನ್ ಎಂ. ಸಹಕರಿಸಿದರು.

Leave a Reply

error: Content is protected !!