ನೇಸರ ಜ.29: ಜೇಸಿಐ ಗಣೇಶಪುರದ 2022ನೇ ಸಾಲಿನ ನೂತನ ಅಧ್ಯಕ್ಷರಾಗಿ ಜೇಸಿ.ಚಂದನ್ ರಾಬಿನ್ಸನ್ ಡಿಸೋಜ ಹಾಗೂ ಅವರ ತಂಡದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚಿಗೆ ಕಾಟಿಪಳ್ಳದ ಇನ್ಫ್ಯಾಂಟ್ ಮೇರಿ ಸಿಲ್ವರ್ಜ್ಯುಬಿಲಿ ಸಭಾಂಗಣದಲ್ಲಿ ನೆರವೇರಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಂ ಆರ್ ಪಿ ಎಲ್ ನ ವಿಕ್ಟರ್ ರಾಜ್ ಮೆನೆಜೆಸ್ ರವರು,ವೃತ್ತಿಪರತೆಯ ಜೊತೆಗೆ ಮಾನವೀಯತೆಯುಕೂಡ ಬಹುಮುಖ್ಯ,ಜೇಸಿಐ ಗಣೇಶಪುರ ಘಟಕವು ಬಹಳಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ನೂತನ ಅಧ್ಯಕ್ಷರಿಗೆ ನಿಕಟ ಪೂರ್ವ ಅಧ್ಯಕ್ಷರಾದ ಜೇಸಿ.ಆದರ್ಶ್ ಶೆಟ್ಟಿ ಪ್ರಮಾಣ ವಚನ ಬೋಧಿಸಿದರು.ಜೇಸಿಐ ಭಾರತದ ವಲಯ 15ರ ವಲಯಾಧ್ಯಕ್ಷ ಜೇಸಿ ಸೆನೆಟರ್ ರೋಯನ್ ಉದಯ ಕ್ರಾಸ್ತ ಸಭೆಯನ್ನು ಉದ್ದೇಶಿಸಿ ರಾಷ್ಟ್ರೀಯ ಮಟ್ಟದಲ್ಲಿ ಜೇಸಿಐನಲ್ಲಿ ಹೊಸದಾದ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಿದರು.ನಂತರ ನೂತನ ಸದಸ್ಯರಿಗೆ ಪ್ರಮಾಣ ವಚನವನ್ನು ಬೋಧಿಸಿದರು. ವಲಯ ಉಪಾಧ್ಯಕ್ಷರಾದ ಜೆಎಫ್ ಡಿ.ರವಿಚಂದ್ರ ಪಟಾಲಿ ಶುಭ ಕೋರಿದರು.
ವಲಯ ಉಪಾಧ್ಯಕ್ಷರಾದ ಜೆಎಫ್ ಡಿ.ರವಿಚಂದ್ರ ಪಟಾಲಿ ಶುಭ ಕೋರಿದರು.
ನೂತನ ಪದಾಧಿಕಾರಿಗಳಾದ ಮಹಿಳಾ ಜೇಸಿ ಸಂಯೋಜಕಿಯಾಗಿ ಜೇಸಿ ಮರಿಯಾ ರೇಶ್ಮ ಡಿಸೋಜಾ ಅವರಿಗೆ ಧನ್ಯ ಶೆಟ್ಟಿ ಅಧಿಕಾರ ಹಸ್ತಾಂತಿಸಿದರು,ಕಾರ್ಯದರ್ಶಿ ಜೇಸಿ .ವೇಣುಗೋಪಾಲ್.ಎಂ.ಎನ್,ಜಂಟಿ ಕಾರ್ಯದರ್ಶಿ ಜೇಸಿ.ಸನತ್ ಕುಮಾರ್ ನಾಯಕ್, ಉಪಾಧ್ಯಕ್ಷರಾಗಿ ಜೇಸಿ.ಶುಭಾ ಶರತ್, ಜೇಸಿ.ರಶ್ಮಿ, ಜೇಸಿ.ಜ್ಯೋತ್ಸ್ನಾ, ಜೇಸಿ.ಶ್ರೀನಿತ್ ಎಂ ಕುಲಾಲ್, ಜೇಸಿ.ಅಶ್ವಿನ್ ಶೇಕಾ,ಖಜಾಂಚಿಯಾಗಿ ಜೇಸಿ.ಶಶಿಕುಮಾರ್,ಜೇಜೆಸಿ ವಿಭಾಗದ ಅಧ್ಯಕ್ಷರಾಗಿ ಜೇಜೆಸಿ.ಭರತ್ ಎಸ್ ಯು ಶೆಟ್ಟಿ ಜೆಜೆಸಿ.ಆಶಿಶ್ ಅವರಿಂದ ಅಧಿಕಾರ ಸ್ವೀಕರಿಸಿದರು,ನಿರ್ದೇಶಕರಾಗಿ ಜೇಸಿ.ಹರ್ಷಪಾಲನ್, ಜೇಸಿ.ಜೋಸ್ವಿನ್ ಫರ್ನಾಂಡಿಸ್, ಜೇಸಿ.ಭರತ್,ಜೇಸಿ.ದೀಪಕ್,ಜೇಸಿ.ಸುದೇಶ್ ಶೆಟ್ಟಿ,ಜೇಸಿ.ಭಾರತಿ ಶ್ರೀಶ,ಜೇಸಿ.ಉಷಾ ಮಂದಾರ ಕಾಳೆ,ಜೇಸಿ.ಮೀನಾಕ್ಷಿ,ಜೇಸಿ.ಚೇತನಾ ಅನಿಲ್,ಜೇಸಿ.ಡಾ.ಆರತಿ ಸಂಪತ್, ಸಂಯೋಜಕರಾಗಿ ಜೇಸಿ.ಪ್ರಿಯಾ,ಜೇಸಿ.ಸಣ್ಣಮಾರೇಶ್,ಜೇಸಿ.ದೀಕ್ಷಿತ್,ಜೇಸಿ.ಲೋಕೇಶ್ ಕುಲಾಲ್,ಜೇಸಿ.ಪ್ರಶಾಂತ್ ನಾಯಕ್,ಜೇಸಿ.ಪ್ರಶಾಂತ್ ಕೆ ಎ,ಜೇಸಿ.ಲೋಹಿತ್ ಬಾಜಲ್, ಜೇಸಿ.ಪೃಥ್ವಿ ಆಳ್ವ,ಜೇಸಿ.ಪ್ರಕಾಶ್ ಸಾಲಿಯಾನ್,ಜೇಸಿ.ಸಚಿನ್,ಜೇಸಿ.ಚೈತ್ರ,ಜೇಸಿ.ನಿತಿನ್ ನಾಯಕ್,ಜೇಸಿ.ನಿಕಿತಾ ನಾಯಕ್,ಜೇಸಿ.ಅರುಣ್ ಕುಮಾರ್,ಜೇಸಿ.ವಿಶಾಲ್,ಜೇಸಿ .ಶುಭಶ್ರೀ ಅಧಿಕಾರ ಸ್ವೀಕರಿಸಿದರು.
ಸ್ಥಾಪಕ ಅಧ್ಯಕ್ಷೆ ಜೇಸಿ.ವನಿತಾ ಅಂಚನ್,ಪೂರ್ವಾಧ್ಯಕ್ಷರಾದ ಜೇಸಿ.ಲಕ್ಷ್ಮೀಶ ಅಂಚನ್, ಜೇಸಿ.ಶ್ರೀಶ ಕರ್ಮಾರನ್,ಜೇಸಿ.ಚೇತನ್ ಅಮೀನ್,ಜೇಸಿ.ಡಾ||ಸಂಪತ್ ಕುಮಾರ್,ಜೇಸಿ .ಸ್ಮಿತಾ ಪಿ ಹೊಳ್ಳ,ಜೇಸಿ.ಉದಯ ಕುಮಾರ್,ಜೇಸಿಐ.ಸೆನೆಟರ್ ಶರತ್ ಕುಮಾರ್ ಉಪಸ್ಥಿತರಿದ್ದರು.
ಜಾಹೀರಾತು