ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಇದರ ವಾರ್ಷಿಕ ಮಹಾಸಭೆಯು ಸಂಘದ ಪ್ರದಾನ ಕಚೇರಿಯ ಕಲ್ಪವೃಕ್ಷ ಸಹಕಾರಿ ಸೌಧದ ಕಾಮಧೇನು ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಯಸ್ .ಉಮೇಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು . ಸಂಘದ ನಿರ್ದೇಶಕ ಜಯಾನಂದ. ಪಿ .ಬಂಟ್ರಿಯಾಲ್ ಸ್ವಾಗತಿಸಿದರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ .ಎಂ.ದಯಾಕರ ರೈ ಮಹಾಸಭೆಯ ನೋಟಿಸನ್ನು ದೃಡೀಕರಿಸಿ, 2020 -21 ನೇ ಸಾಲಿನ ವಾರ್ಷಿಕ ವರದಿಯನ್ನು ನೀಡಿದರು . ಸಂಘವು 62 ವರ್ಷಗಳನ್ನು ಪೂರೈಸಿದ್ದು, ಪ್ರಸ್ತುತ ರೂ. 6,22,10,650 ಪಾಲು ಬಂಡವಾಳ ಹೊಂದಿದ್ದು ರೂ.650 ಲಕ್ಷ ಪಾಲು ಬಂಡವಾಳದ ಗುರಿ ಹೊಂದಿದೆ ಎಂದರು . ಸದಸ್ಯರ ಸಹಕಾರದಿಂದ ನೆಲ್ಯಾಡಿಯ ಕೃಷಿಕರ “ರೈತ ಮಿತ್ರ” ನಾಗಿದ್ದು ಸಂಸ್ಥೆ ಪ್ರಸ್ತುತ ರೂ. 1,07,12,052 ಲಾಭದಲ್ಲಿದೆ , ವ್ಯಾವಹಾರಿಕವಾಗಿ ಗ್ರಾಹಕರಿಗೆ ಹಲವಾರು ರೀತಿಯ ಯೋಜನೆಗಳೊಂದಿಗೆ ಪ್ರಧಾನ ಕಚೇರಿ, ಗೋಳಿತ್ತೊಟ್ಟು ಮತ್ತು ಶೀರಾಡಿ ಶಾಖೆಗಳು ಗಣಕೀಕರಣಗೊಂಡಿದೆ . ಠೇವಣಿಗಳ ಮೇಲೆ ಆಕರ್ಷಕ ಬಡ್ಡಿ , ಅಲ್ಪಾವಧಿ, ಮಧ್ಯಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲಗಳು , ಅಡಿಕೆ , ರಬ್ಬರ್ ಖರೀದಿ , ರಸಗೊಬ್ಬರ ಮಾರಾಟ ಇತ್ಯಾದಿ ವ್ಯವಹಾರಗಳನ್ನು ನಡೆಸುತ್ತಿದೆ ಎಂದರು . ನಂತರ ಸಂಘದ ಸದಸ್ಯರು ಕೇಳಿದ ಹಲವಾರು ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಲಾಯಿತು ,ಬೆಳೆ ವಿಮೆ , ಗೋಳಿತ್ತೊಟ್ಟಿನ ಶಾಖೆಯನ್ನು ಇನ್ನಷ್ಟು ಉನ್ನತ ದರ್ಜೆಗೇರಿಸಬೇಕು , ಸೇಫ್ ಲಾಕರ್ ಬಗ್ಗೆ ಸಲಹೆಗಳು ಕೇಳಿಬಂದವು .
ಜೋಸೆಫ್ .ಪಿ .ಟಿ , ದಿನೇಶ್ ಶೆಟ್ಟಿ , ಅಗ್ರಾಳ ನಾರಾಯಣ ರೈ, ಜಯಪ್ರಕಾಶ್ ನೆಕ್ರಾಜೆ ಮೊದಲಾದವರು ಸಲಹೆ ನೀಡಿದರು . ಸಂಘದ ಅಧ್ಯಕ್ಷ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ನಿಮ್ಮ ಸಹಕಾರದಿಂದ ಸಂಘವು ಕಳೆದ ವರುಷ ಹಲವಾರು ಪ್ರಶಸ್ತಿಗಳನ್ನು ಪಡೆಯಲು ಸಾಧ್ಯವಾಯಿತು. , ಸಂಘದ ಉಪಾಧ್ಯಕ್ಷ ಕಮಲಾಕ್ಷ ಗೌಡ, ನಿರ್ದೇಶಕರಾದ ಜಯಾನಂದ. ಪಿ .ಬಂಟ್ರಿಯಾಲ್, ಬಾಲಕೃಷ್ಣ ಬಾಣಜಾಲು , ಸರ್ವೋತ್ತಮ ಗೌಡ , ಪ್ರಶಾಂತ್ ರೈ , ಸುದರ್ಶನ್ , ಉಷಾ ಅಂಚನ್ , ಸುಲೋಚನಾ .ಡಿ , ಅಣ್ಣು .ಬಿ , ಸುಮಿತ್ರ , ಗುರುರಾಜ್ ಭಟ್ , ವಲಯ ಮೇಲ್ವಿಚಾರಕ ವಸಂತ್. ಯಸ್ , ಸಂಘದ ಕಾನೂನು ಸಲಹೆಗಾರ ಶಿವಪ್ರಸಾದ್ ನೆಕ್ರಾಜೆ, ಸಿಬ್ಬಂದಿ ವರ್ಗ , ಸಂಘದ ಸದಸ್ಯರುಗಳು ಹಾಗೂ ಊರಿನ ಹಲವಾರು ಗಣ್ಯರು ಉಪಸ್ಥಿತರಿದ್ದರು.