ಕಾಂಚನ: “ಸಮೃದ್ಧ ಕಾಡನ್ನು ಉಳಿಸೋಣ ಬೆಳೆಸೋಣ” -ಸೂರ್ಯ ಪ್ರಕಾಶ ಉಡುಪ

ಶೇರ್ ಮಾಡಿ

ನೇಸರ ಜೂ.05: “ಅರಣ್ಯ ಬೆಳೆಸುವ, ಪ್ರಕೃತಿ ಉಳಿಸೋಣ” ಅನ್ನುವ ಆಶಯದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೇಸಿಐ ಉಪ್ಪಿನಂಗಡಿ ಘಟಕ ಮತ್ತು ವಿಕ್ರಂ ಯುವಕ ಮಂಡಲ ಕಾಂಚನ ಆಶ್ರಯದಲ್ಲಿ ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿ ಶಾಲಾ ಮುಖ್ಯಗುರುಗಳಾದ ಸೂರ್ಯಪ್ರಕಾಶ್ ಉಡುಪ ಮಾತನಾಡಿ “ಸಮೃದ್ಧ ಕಾಡನ್ನು ಉಳಿಸೋಣ ಬೆಳೆಸೋಣ”. ಈ ಕುರಿತು ಬಾಲ್ಯದಿಂದಲೇ ಮಕ್ಕಳಿಗೆ ಮಾರ್ಗದರ್ಶನದ ಅಗತ್ಯ ಇದೆ. ಆ ಕಾರ್ಯವನ್ನು ಜೇಸಿಐ ಮತ್ತು ವಿಕ್ರಂ ಯುವಕ ಮಂಡಲ ಮಾಡಿದ್ದಾರೆ.

ಜೇಸಿಐ ಅಧ್ಯಕ್ಷರಾದ ಜೇಸಿ ಮೋಹನ್ ಚಂದ್ರ ತೋಟದಮನೆ ಮಾತನಾಡಿ ಜೀವಸಂಕುಲದ ಏಕೈಕ ಗ್ರಹ ಭೂಮಿ. ಈ ಭೂಮಿಯ ಪರಿಸರಕ್ಕೆ ಹಾನಿಯಾಗದಂತೆ ಬದುಕುವ ಪ್ರಯತ್ನ ಪ್ರತಿಯೊಬ್ಬರೂ ಮಾಡಬೇಕಾಗಿದೆ ಎಂದರು. ಆಂಗ್ಲ ಭಾಷಾ ಶಿಕ್ಷಕ ಜ್ಞಾನೇಶ್ ವಂದಿಸಿದರು. ಶಾಲಾ ಶಿಕ್ಷಕರು, ಶಿಕ್ಷಕೇತರ ವರ್ಗದವರು ಸಹಕರಿಸಿದರು. ಕಾರ್ಯಕ್ರಮದಲ್ಲಿ ಜೇಸಿ ಪುರುಷೋತ್ತಮ ತೋಟದ ಮನೆ, ಜೇಸಿ ಪ್ರವೀಣ್ ಪಿಂಟೊ ಪುಯಿಲ ಮತ್ತು ಜೇಸಿ ನಾಗೇಶ್ ಬಿದಿರಾಡಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 100 ಗಿಡಗಳನ್ನು ವಿದ್ಯಾರ್ಥಿಗಳಿಗೆ ಹಂಚಿ, ಅದನ್ನು ನೆಟ್ಟು ಬೆಳೆಸುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

Leave a Reply

error: Content is protected !!