ಸಾಮಾಜಿಕ ಕಳಕಳಿಯಿಂದ ತಕ್ಷಣ ಸ್ಪಂದಸಿದ ಅಧಿಕಾರಿಗಳು; ವ್ಯಾಪಕ ಮೆಚ್ಚುಗೆ

ಶೇರ್ ಮಾಡಿ

ಸ್ಪಂದಸಿದ ಅಧಿಕಾರಿಗಳು:

ಕೌಕ್ರಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಉದಯಕುಮಾರ್ ,  ಅರಣ್ಯ ಇಲಾಖೆಯ ಅರಣ್ಯ ರಕ್ಷಕ ರಾಜೇಶ್.ಕೆ ಹಾಗೂ ಮೆಸ್ಕಾಂ ಇಲಾಖೆ ಜೆ.ಇ ರಮೇಶ್  

ನೇಸರ ಜೂ.30: ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಪೇರಳಿಕೆ ಎಂಬಲ್ಲಿ ವ್ಯಕ್ತಿಯೊಬ್ಬರ ಪಟ್ಟ ಜಾಗದಲ್ಲಿ ಒಣಗಿ ನಿಂತಿರುವ ಮರ ರಸ್ತೆಗೆ ಬೀಳಲಿರುವ ಕಾರಣ ಸಾರ್ವಜನಿಕರು ಕೌಕ್ರಾಡಿ ಪಂಚಾಯಿತಿಗೆ ತೆರವು ಗೊಳಿಸುವಂತೆ ಮನವಿ ನೀಡಿದ್ದಾರೆ.
ಮನವಿ ನೀಡಿ ಮೂರು ತಿಂಗಳಾದರೂ ಪಂಚಾಯತ್ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ರಸ್ತೆಗೆ ಬಾಗಿಕೊಂಡು ಬೀಳುವ ಹಂತದಲ್ಲಿ ಒಣ ಮರವಿದ್ದು, ಇದೇ ರಸ್ತೆಯಲ್ಲಿ ಪ್ರತಿ ನಿತ್ಯ ನೂರಾರು ವಾಹನಗಳು, ಶಾಲಾ ಮಕ್ಕಳು, ಪಾದಚಾರಿಗಳು ಓಡಾಡುತ್ತಿರುತ್ತಾರೆ.

ಈ ಮರದಿಂದ ಅಪಾಯ ಸಂಭವಿಸಿದರೆ ಯಾರು ಹೊಣೆ? ಅವಘಡ ಸಂಭವಿಸಿದ ಮೇಲೆ ಎಚ್ಚೆತ್ತುಕೊಂಡರೆ ಪ್ರಯೋಜನವಿದೆಯೇ ? ಸ್ಥಳೀಯ ಕೌಕ್ರಾಡಿ ಪಂಚಾಯಿತ್ ಗಮನಕ್ಕೆ ತಂದರು ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಲಿ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ನೇಸರ ನ್ಯೂಸ್ ಗೆ ತಿಳಿಸಿದರು.
ನೇಸರ ನ್ಯೂಸ್ ಸಂಬಂಧಪಟ್ಟ ಅರಣ್ಯ ಇಲಾಖೆಯ ಅರಣ್ಯ ರಕ್ಷಕ ರಾಜೇಶ್, ಮೆಸ್ಕಾಂ ಇಲಾಖೆ ಜೆ.ಇ ರಮೇಶ್ ಹಾಗೂ ಈ ವಾರ್ಡಿಗೆ ಸಂಬಂಧಪಟ್ಟ ಪಂಚಾಯತ್ ಸದಸ್ಯರಾದ ಉದಯಕುಮಾರ್ ರನ್ನು ಸಂಪರ್ಕಿಸಲಾಯಿತು, ತಕ್ಷಣ ಸ್ಪಂದಿಸಿ ಕೇವಲ ಒಂದೇ ದಿನದಲ್ಲಿ ಈ ಮೂವರು ಖುದ್ದು ಸ್ಥಳದಲ್ಲಿ ಇದ್ದು ಮರವನ್ನು ತೆರವುಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ವ್ಯಾಪಕ ಮೆಚ್ಚುಗೆ:
ಸಾಮಾಜಿಕ ಕಳಕಳಿಯಿಂದ ತಕ್ಷಣ ಸ್ಪಂದಸಿದ ಕೌಕ್ರಾಡಿ ಪಂಚಾಯತ್ ಸದಸ್ಯ ಉದಯಕುಮಾರ್ ಹಾಗೆ ಮೆಸ್ಕಾಂ ಇಲಾಖೆಯ ಜೆ.ಇ ರಮೇಶ್ ಮತ್ತು ತಂಡಕ್ಕೆ ಹಾಗೂ ಅರಣ್ಯ ಇಲಾಖೆ ಅರಣ್ಯ ರಕ್ಷಕ ರಾಜೇಶ್ ಮತ್ತು ತಂಡಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.

Leave a Reply

error: Content is protected !!