ಮೈರೋಳ್ತಡ್ಕ: ಸೆ 28 ಬಂದಾರು ಗ್ರಾಮದ ಭಾರತೀಯ ಜನತಾ ಪಾರ್ಟಿ ಬೂತ್ ಸಮಿತಿ ಮೈರೋಳ್ತಡ್ಕ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಗುರುವಾಯನಕೆರೆ & ಸೇವಾ ಸಿಂಧು ಡಿಜಿಟಲ್ ಸೇವಾ ಕಾಮನ್ ಸರ್ವೀಸ್ ಸೆಂಟರ್ ಮೈರೋಳ್ತಡ್ಕ ಇದರ ಆಶ್ರಯದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ (AHBHA CARD) ನೋಂದಾವಣೆ ಹಾಗೂ ಮಾಹಿತಿ ಕಾರ್ಡ್ ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈರೋಳ್ತಡ್ಕದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಶಾಂತ ಗೌಡ ನಿಂರ್ಬುಡ ಆಧ್ಯಕ್ಷರು ಬೂತ್ ಸಮಿತಿ ಮೈರೋಳ್ತಡ್ಕ ಇವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಪರಮೇಶ್ವರಿ ಕೆ.ಗೌಡ
ಅಧ್ಯಕ್ಷರು ಗ್ರಾ.ಪಂ ಬಂದಾರು. ಕಣಿಯೂರು ವಲಯ ಮೇಲ್ವಿಚಾರಕಿ ಶ್ರೀಮತಿ ಪ್ರೇಮ, ಮೈರೋಳ್ತಡ್ಕ ಸೇವಾಪ್ರತಿನಿಧಿ ಚಂದ್ರಕಲಾ, ಜಯಾನಂದ ಕಲ್ಲಾಪು, ಅಧ್ಯಕ್ಷರು ಕಣಿಯೂರು ಮಹಾಶಕ್ತಿ ಕೇಂದ್ರ. ಬಾಲಕೃಷ್ಣ ಗೌಡ ಕಾರ್ಯದರ್ಶಿ ಕಣಿಯೂರು ಮಹಾಶಕ್ತಿ ಕೇಂದ್ರ. ಅಶೋಕ ಗೌಡ ಬಂದಾರು ಶಕ್ತಿ ಕೇಂದ್ರ ಪ್ರಮುಖ್, ಜನಾರ್ದನ ಗೌಡ ಕಾರ್ಯದರ್ಶಿ ಬೂತ್ ಸಮಿತಿ, ದಿನೇಶ್ ಗೌಡ ಖಂಡಿಗ.ಗ್ರಾ.ಪಂ ಸದಸ್ಯರು ಬಂದಾರು. ಶ್ರೀಮತಿ ಸುಚಿತ್ರಾ ಗ್ರಾ.ಪಂ ಸದಸ್ಯರು ಬಂದಾರು.ಕೃಷ್ಣಯ್ಯ ಆಚಾರ್ಯ
ಮಾಜಿ ತಾ.ಪಂ ಸದಸ್ಯರು. ಡೊಂಬಯ್ಯ ಗೌಡ ಖಂಡಿಗ ನಿರ್ದೇಶಕರು ಹಾ.ಉ.ಸ.ಸಂಘ(ನಿ.) ಪದ್ಮುಂಜ,ಗಿರೀಶ್ ಗೌಡ ಬಿ.ಕೆ ಸದಸ್ಯರು ಯುವಮೋರ್ಚಾ ಬೆಳ್ತಂಗಡಿ ಮಂಡಲ. ಶ್ರೀಧರ ಗೌಡ, ಚಂದಪ್ಪ ಗೌಡ, ರಾಮಣ್ಣ ಗೌಡ ಉಪಸ್ಥಿತರಿದ್ದರು. ಬಂದಾರು ಗ್ರಾ.ಪಂ ಸಿಬ್ಬಂದಿ ದಿನಕರ ಗೌಡ, ಮೈರೋಳ್ತಡ್ಕ ಹಾಗೂ ಮುರ ವಿ.ಎಲ್.ಇ ಗಳಾದ ಕು.ಮಧುಶ್ರೀ, ಕು.ಸುಶ್ಮೀತ ಇವರು ಸಹಕರಿಸಿದರು.
ಸುಮಾರು 100 ಕ್ಕಿಂತಲೂ ಹೆಚ್ಚು ಗ್ರಾಮಸ್ಥರು ಈ ನೋಂದಾವಣೆ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.