ಕೆ ಎಸ್ ಎಸ್ ಪದವಿ ಕಾಲೇಜಿನ ರೋವರ್ಸ್ ರೇಂಜರ್ಸ್ ಘಟಕ ಮತ್ತು ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಸ್ವಚ್ಛತಾ ಕಾರ್ಯ

ಶೇರ್ ಮಾಡಿ

ಸುಬ್ರಹ್ಮಣ್ಯ: ಏಕಾದಶಿಯ ದಿನ ನಡೆದ ಸ್ವಚ್ಛ ಮಂದಿರ ಅಭಿಯಾನದಲ್ಲಿ ಕೆ ಎಸ್ ಎಸ್ ಪದವಿ ಕಾಲೇಜಿನ ರೋವರ್ಸ್ ರೇಂಜರ್ಸ್ ಘಟಕ ಮತ್ತು ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು.

ಮಹಾವಿದ್ಯಾಲಯದ ಸಮೀಪದ ವನದುರ್ಗ ದೇವಳದಿಂದ ಆರಂಭಿಸಿ ಸುಬ್ರಹ್ಮಣ್ಯದ ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್ ನವರೆಗೆ ನಡೆದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಸರಿ ಸುಮಾರು 115 ವಿದ್ಯಾರ್ಥಿಗಳ ಜೊತೆಗೆ ಕೆಎಸ್ಎಸ್ ಕಾಲೇಜಿನ ಸ್ವಚ್ಛ ಮಂದಿರ ಅಭಿಯಾನದ ಸಂಯೋಜಕರು ಮತ್ತು ರೋವರ್ಸ್ ಘಟಕದ ಮುಖ್ಯಸ್ಥರಾದ ರಾಮಪ್ರಸಾದ್ ಎಸ್, ರೇಂಜರ್ಸ್ ಘಟಕದ ಮುಖ್ಯಸ್ಥರಾದ ಪ್ರಮೀಳ ಎನ್, ಸ್ವಚ್ಛ ಮಂದಿರ ಅಭಿಯಾನದ ಸದಸ್ಯೆ, ಶಶಿ, ಭಕ್ತಿ ಶ್ರೀ, ಯುವ ರೆಡ್ ಕ್ರಾಸ್ ಮುಖ್ಯಸ್ಥರಾದ ವನಿತಾ ಯನ್ ಪಾಲ್ಗೊಂಡಿದ್ದರು. ಅಭಿಯಾನದ ಕೊನೆಯಲ್ಲಿ ಸುಬ್ರಹ್ಮಣ್ಯದ ನೈವೇದ್ಯ ಹೋಟೆಲ್ ನಾಗೇಶ್ ನಾಯಕ್ ಮತ್ತು ಶ್ರೀಮತಿ ಮಾನ್ಯ ಇವರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಎಲ್ಲರಿಗೂ ಪಾನೀಯ ವ್ಯವಸ್ಥೆಯನ್ನು ಮಾಡಿ ಸಹಕರಿಸಿದರು.

ಸ್ವಚ್ಛತಾ ಅಭಿಯಾನದ ಆರಂಭಕ್ಕೂ ಮುನ್ನ ದಿನಾಂಕ 3/11/2022ರಂದು ನಿಧನ ಹೊಂದಿದ ಸುಬ್ರಹ್ಮಣ್ಯ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಯು.ಡಿ ಶೇಖರ್ ಇವರಿಗೆ ರಾಜ್ಯಶಾಸ್ತ್ರ ಉಪನ್ಯಾಸಕಿಯಾದ ಸ್ವಾತಿ ಇವರು ನುಡಿ ನಮನ ಸಲ್ಲಿಸಿದರು.

Leave a Reply

error: Content is protected !!