30ನೇಯ ವಿಜ್ಞಾನ ಸಮಾವೇಶದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಶೇರ್ ಮಾಡಿ

ಪುತ್ತೂರು: 30ನೇ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರು ಆಯೋಜಿಸಿರುವ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ ನವದೆಹಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಭಾರತ ಸರ್ಕಾರ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕರ್ನಾಟಕ ಸರಕಾರ ಕಲಬುರಗಿ ಜಿಲ್ಲಾಡಳಿತ ಸಹಯೋಗದೊಂದಿಗೆ ಶ್ರೀ ಗುರು ವಿದ್ಯಾ ವಸತಿ ಶಾಲೆ ಖಣದಾಳದ ಕಲಬುರಗಿಯಲ್ಲಿ ದಿನಾಂಕ 16-01-2023ರಿಂದ 18-01-2023ರ ವರೆಗೆ ರಾಷ್ಟ್ರೀಯ ವಿಜ್ಞಾನ ಸಮಾವೇಶ ((National Children’s Science Congress)) ನಡೆಯಿತು.

ಸೀನಿಯರ್ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲದ 2 ತಂಡಗಳು ಭಾಗವಹಿಸಿದ್ದು, ಇಲ್ಲಿನ ವಿದ್ಯಾರ್ಥಿನಿಯರಾದ ಸಾನ್ವಿ ಎಸ್.ಪಿ 9ನೇ ತರಗತಿ(ಸುಂದರ ಪೂಜಾರಿ ಹಾಗೂ ಶ್ರೀಮತಿ ಭವಿತಾ ಪಿ ದಂಪತಿಗಳ ಪುತ್ರಿ) ಹಾಗೂ ಜಿ.ಪ್ರತೀಕ್ಷಾ ಆಳ್ವ, 9 ನೇ ತರಗತಿ(ಎ ಸಿ ಚಂದ್ರಶೇಖರ ಆಳ್ವ ಹಾಗೂ ಶ್ರೀಮತಿ ಉಷಾ ಸಿ ಆಳ್ವ ದಂಪತಿಗಳ ಪುತ್ರಿ) ಅವರ ತಂಡ “MULTI PURPOSE SOLAR DRYER” ಎಂಬ ಶೀರ್ಷಿಕೆಯಡಿ ವಿಜ್ಞಾನ ಯೋಜನೆ ಮಂಡಿಸಿ ರಾಜ್ಯಮಟ್ಟದಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಇದೇ ತಿಂಗಳ 27ರಿಂದ 31ರವರೆಗೆ ಗುಜರಾತಿನ ಸೈನ್ಸ್ ಸಿಟಿ & ಪಾಲ್ ಎಜ್ಯುಕೇಶನ್ ಕ್ಯಾಂಪಸ್ ಅಹ್ಮದಾಬಾದ್‍ನಲ್ಲಿ ನಡೆಯಲಿದೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಸತೀಶ್ ಕುಮಾರ್ ರೈ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

error: Content is protected !!