ನೇಸರ: ವಿಡಿಯೋ ಶೇರಿಂಗ್ ಜಾಲತಾಣ ಯೂಟ್ಯೂಬ್ ಗೆ ಇದೀಗ ನೂತನ ಸಿಇಓ ಆಗಿ ಭಾರತೀಯ ಅಮೆರಿಕನ್ ನೀಲ್ ಮೋಹನ್ ಅವರ ನೇಮಕವಾಗಿದೆ.
ಯೂಟ್ಯೂಬ್ ಸಿಇಓ ಮತ್ತು ಮೊದಲ ಗೂಗಲ್ ಉದ್ಯೋಗಿಗಳಲ್ಲಿ ಒಬ್ಬರಾದ ಸುಸಾನ್ ವೊಜ್ಸಿಕಿ ಅವರು 25 ವರ್ಷಗಳ ಹಿಂದೆ ತನ್ನ ಗ್ಯಾರೇಜ್ ನಲ್ಲಿ ಪ್ರಾರಂಭವಾದ ಯೂಟ್ಯೂಬ್ ನ ಹುದ್ದೆಯಿಂದ ಕೆಳಗಿಳಿಯುತ್ತಿದ್ದಾರೆ.
ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಮಹಿಳೆಯರಲ್ಲಿ ಒಬ್ಬರಾದ 54 ವರ್ಷದ ವೊಜ್ಸಿಕಿ ಅವರು ಕುಟುಂಬ, ಆರೋಗ್ಯ ಮತ್ತು ವೈಯಕ್ತಿಕ ಯೋಜನೆಗಳ ಕಾರಣ ನೀಡಿ ಹುದ್ದೆ ತ್ಯಜಿಸುತ್ತಿದ್ದಾರೆ. ಅವರು ಈ ಹಿಂದೆ ಗೂಗಲ್ ನಲ್ಲಿ ಜಾಹೀರಾತು ಉತ್ಪನ್ನಗಳಿಗೆ ಹಿರಿಯ ಉಪಾಧ್ಯಕ್ಷರಾಗಿದ್ದರು ಮತ್ತು 2014 ರಲ್ಲಿ ಯೂಟ್ಯೂಬ್ ಸಿಇಓ ಆದರು.
ಸ್ಟ್ಯಾನ್‌ಫೋರ್ಡ್ ಪದವೀಧರ ಭಾರತೀಯ ನೀಲ್ ಮೋಹನ್ 2008 ರಲ್ಲಿ ಗೂಗಲ್ ಗೆ ಸೇರಿದರು ಮತ್ತು ಯೂಟ್ಯೂಬ್ ನಲ್ಲಿ ಮುಖ್ಯ ಉತ್ಪನ್ನ ಅಧಿಕಾರಿಯಾಗಿದ್ದಾರೆ, ಅಲ್ಲಿ ಅವರು ಯೂಟ್ಯೂಬ್ ಶಾರ್ಟ್ಸ್ ಮತ್ತು ಮ್ಯೂಸಿಕ್ ನಿರ್ಮಿಸುವ ಜವಾಬ್ದಾರಿ ಹೊತ್ತಿದ್ದರು. ಅಲ್ಲದೆ ಮೈಕ್ರೋಸಾಫ್ಟ್ ನೊಂದಿಗೆ ಕೂಡಾ ಕೆಲಸ ಮಾಡಿದ್ದಾರೆ.