ಮನೆಗೆ ಮರಬಿದ್ದು ಮನೆಯಲ್ಲಿದ್ದವರಿಗೆ ಗಾಯ

ಶೇರ್ ಮಾಡಿ

ಸುಳ್ಯ: ಮನೆಗೆ ಮರಬಿದ್ದು ಮನೆಯಲ್ಲಿದ್ದವರು ಗಾಯಗೊಂಡ ಘಟನೆ ಸುಳ್ಯ ತಾಲೂಕಿನ ಕೇರ್ಪಡ ಪಲ್ಲತಡ್ಕದಲ್ಲಿ ರಾತ್ರಿ ಸಂಭವಿಸಿದೆ.

ಕೇರ್ಪಡ ಪಲ್ಲತಡ್ಕದ ಮೊಗೇರ್ಕಳ ಸೇವಾ ಸಮಿತಿ ಅಧ್ಯಕ್ಷ ರಮೇಶ್‌ ಅವರ ಮನೆಗೆ ರಾತ್ರಿ, ಬಿದ್ದು ಮನೆಗೆ ಹಾಗೂ ಮನೆಯವರಿಗೆ ಹಾನಿಯಾಗಿದೆ. ಮನೆಗೆ ಮರ ಬಿದ್ದ ಪರಿಣಾಮ ಮನೆ ಮೇಲ್ಛಾವಣಿಯ ಹಂಚು ಮನೆಯಲ್ಲಿದ್ದವರ ತಲೆಗೆ ಬಿದ್ದು ಗಾಯಗಳಾಗಿದೆ.
ತಕ್ಷಣ ಗಾಯಾಳುಗಳನ್ನು ಕಾಣೆಯೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಮನೆಯ ಹಂಚುಗಳು, ರೀಪ್‌ ತುಂಡಾಗಿ ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

See also  ಬೆಳ್ತಂಗಡಿ ಠಾಣೆಯ ವೃತ್ತ ನಿರೀಕ್ಷಕರಾದ ಶಿವಕುಮಾರ್ ನೇತೃತ್ವದಲ್ಲಿ ಸಿ.ಆರ್.ಪಿ.ಎಫ್ ತುಕಡಿ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಪಥ ಸಂಚಲನ

Leave a Reply

Your email address will not be published. Required fields are marked *

error: Content is protected !!