ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆ ವಿದ್ಯಾರ್ಥಿ ಮಿಲನ್ ಗೆ ಇನ್ಸ್ಪೈರ್ ಪ್ರಶಸ್ತಿಯ ಹೆಗ್ಗಳಿಕೆ

ಶೇರ್ ಮಾಡಿ

ನೇಸರ ಜ.12: ನೆಲ್ಯಾಡಿ ಜ್ಞಾನೋದಯ ಬೆಥನಿ ಪದವಿಪೂರ್ವ ಕಾಲೇಜಿನ 8ನೇ ತರಗತಿಯ ವಿದ್ಯಾರ್ಥಿ ಮಿಲನ್.ಪಿ.ಎಂ.ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆಸುವ ಇನ್ಸ್ಪೈರ್ ಅವಾರ್ಡ್ ಗೆ ಆಯ್ಕೆಯಾಗಿದ್ದು.ಬಹುಮಾನವಾಗಿ 10 ಸಾವಿರ ನಗದು ಪಡೆದುಕೊಂಡಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ವಿದ್ಯಾರ್ಥಿಗಳಲ್ಲಿ ಉತ್ತಮ ಸಂಶೋಧನಾ ಗುಣಗಳನ್ನು ಬೆಳೆಸುವ ಹಾಗೂ ಯುವ ವಿಜ್ಞಾನಿಗಳನ್ನು ಸೃಷ್ಟಿಸಿ ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ ಕೌಶಲ್ಯವನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಪ್ರತಿವರ್ಷವೂ ಹಮ್ಮಿಕೊಳ್ಳಲಾಗುತ್ತಿದೆ.ಇಲಾಖೆಯ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಾಲೆಗಳಿಂದ ಆಯ್ಕೆಯಾದ 314 ವಿದ್ಯಾರ್ಥಿಗಳಲ್ಲಿ ಜ್ಞಾನೋದಯ ಬೆಥನಿಯ 8ನೇ ತರಗತಿಯ ವಿದ್ಯಾರ್ಥಿ ವಿದ್ಯುತ್ ಸರಬರಾಜು ಮಾಡುವಾಗ ತೊಂದರೆಯಾಗುವ ಕೊಂಬೆಗಳನ್ನು ಕಡಿಯಲು ಬಳಸಬಹುದಾದ “Tree Pruning Vehicle” ಎಂಬ ಯಂತ್ರಚಾಲಿತ ವಾಹನವನ್ನು ಅಭಿವೃದ್ಧಿಪಡಿಸಿದ್ದಾರೆ ಇವರಿಗೆ ವಿಜ್ಞಾನ ಶಿಕ್ಷಕಿ ವಿಶಾಖ ರವರು ಮಾರ್ಗದರ್ಶನವನ್ನು ನೀಡಿದ್ದಾರೆ.
ಸಂಸ್ಥೆಯ ಸಂಚಾಲಕರು,ಕಾಲೇಜಿನ ಪ್ರಾಂಶುಪಾಲರು,ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇವರ ಸಾಧನೆಯನ್ನು ಮೆಚ್ಚಿ ಪ್ರಶಂಸಿಸಿದ್ದಾರೆ.
ನೆಲ್ಯಾಡಿಯ ತೋಮ್ಸನ್ ಇಲೆಕ್ಟ್ರಾನ್ ನ ಮಾಲಕ ಮನೋಜ್.ಪಿ.ಜೆ ಹಾಗೂ ಬೆಥನಿ ಸಂಸ್ಥೆಯ ಶಿಕ್ಷಕಿ ಶ್ರೀಮತಿ ಲಿನ್ಸಿ ಮನೋಜ್ ಅವರ ಪುತ್ರ.

ಜಾಹೀರಾತು

Leave a Reply

error: Content is protected !!