ಮೊಬೈಲ್‌ ಹುಡುಕಲಿದೆ ರೊಬೋಟ್‌ !

ಶೇರ್ ಮಾಡಿ

ಮನುಷ್ಯನ ಬಹುತೇಕ ಕೆಲಸಗಳನ್ನು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ತಂತ್ರಜ್ಞಾನವು ಸುಲಭವಾಗಿಸುತ್ತಿರುವ ನಡುವೆಯೇ, ಇದೀಗ ನೀವು ಎಲ್ಲೋ ಇಟ್ಟು ಮರೆತಿರುವ ಮೊಬೈಲ್‌ ಅನ್ನೂ ಹುಡುಕಿ ಕೊಡಲು ಕೂಡ ರೊಬೋಟ್‌ ಬಂದಿದೆ!
ವಾಟರ್‌ಲೂ ಯೂನಿವರ್ಸಿಟಿಯ ಎಂಜಿನಿಯರ್‌ಗಳು ಈ ಎಐ ಆಧಾರಿತ ರೊಬೋಟ್‌ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಕಡಿಮೆ ನೆನಪಿನ ಶಕ್ತಿ ಸಮಸ್ಯೆ ಹೊಂದಿರುವವರಿಗೆ ಔಷಧಿ, ಕನ್ನಡಕ, ಫೋನ್‌ ಎಲ್ಲವನ್ನೂ ಹುಡುಕಿಕೊಡಲು ಈ ತಂತ್ರಜ್ಞಾನ ನೆರವಾಗಲಿದೆ. ಸದ್ಯಕ್ಕೆ ಇಂಥ ಸಮಸ್ಯೆ ಹೊಂದಿರುವ ಜನರನ್ನು ಗಮನದಲ್ಲಿಟ್ಟುಕೊಂಡೇ, ರೊಬೋಟ್‌ನ ಪ್ರೋಗ್ರಾಮಿಂಗ್‌ ಮಾಡಲಾಗಿದೆ.
ಇನ್ನು ಕೆಲವೇ ದಿನಗಳಲ್ಲಿ ಯಾರು ಬೇಕಾದರೂ, ತಾವು ಈಗಷ್ಟೇ ಎಲ್ಲೋ ಇಟ್ಟು ಮರೆತುಬಿಟ್ಟಿರುವ ವಸ್ತುಗಳನ್ನೆಲ್ಲಾ, ರೊಬೋ ಮೂಲಕವೇ ಹುಡುಕಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ರೊಬೋಟ್‌ನಲ್ಲಿ ನಮಗೆ ಅಗತ್ಯವಿರುವ ವಸ್ತುಗಳ ಬಗ್ಗೆ ಮೊದಲೇ ಮಾಹಿತಿಯನ್ನು ನೀಡಿರಬೇಕು. ರೊಬೋಟ್‌ ತನ್ನ ಕ್ಯಾಮೆರಾ ಮೂಲಕ ಸಂಬಂಧಪಟ್ಟ ವಸ್ತುವಿನ ಬಗ್ಗೆ ನಮಗೆ ಮಾಹಿತಿ ನೀಡುತ್ತದೆ.

Leave a Reply

error: Content is protected !!