ಡೆಂಗ್ಯೂ ಪ್ರಕರಣಗಳ ಏರಿಕೆ ಬೆನ್ನಲ್ಲೆ, ಆಸ್ಪತ್ರೆಗಳಿಗೆ ಇದೀಗ ಮತ್ತೊಂದು ರೀತಿಯ ಟೆನ್ಷನ್ ಶುರುವಾಗಿದೆ. ಡೆಂಗ್ಯೂ ಹೊಡೆತದಿಂದ ನಲುಗಿದ ರೋಗಿಗಳಲ್ಲಿ ಬಿಳಿರಕ್ತ ಕಣಗಳ ಕೊರತೆ ಉಂಟಾಗ್ತಿದ್ದು, ಇತ್ತ ಬ್ಲಡ್ ಬ್ಯಾಂಕ್‍ಗಳಿಗೂ ಸಂಕಷ್ಟ ಎದುರಾಗಿದೆ.
ಮಳೆ ನಿಂತರೂ ಮರದ ಹನಿ ನಿಲ್ಲಲ್ಲ ಅನ್ನೋ ಹಾಗೇ ರಾಜ್ಯದಲ್ಲಿ ಮಳೆ ಇಲ್ಲದಿದ್ರೂ ಡೆಂಗ್ಯೂ ಪ್ರಕರಣಗಳು ಏರಿಕೆಯಾಗ್ತಾಲೇ ಇದೆ. ಡೆಂಗ್ಯು ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗ್ತಿದ್ರೂ ಕೂಡ, ಕೆಲ ರೋಗಿಗಳಿಗೆ ಬಿಳಿರಕ್ತಕಣಗಳ ಕೊರತೆ ಇರೋದರಿಂದ ಸಮಸ್ಯೆ ಎದುರಾಗ್ತಿದೆ. ಚಿಕಿತ್ಸೆ ವೇಳೆ ವೈಟ್ ಬ್ಲಡ್ ಸೆಲ್ಸ್ ಕಡಿಮೆ ಇರೋ ರೋಗಿಗಳಿಗೆ ಚಿಕಿತ್ಸೆ ನೀಡಲಾಗದೇ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಹೈರಾಣಾಗ್ತಿದ್ದಾರೆ.
ಈ ಹಿಂದೆ ದಿನಕ್ಕೆ 10-12ರಷ್ಟು ರ್‍ಯಾಂಡಮ್ ಡೋನರ್ ಪ್ಲೇಟ್ಲೆಟ್ಸ್ ಅವಶ್ಯಕತೆ ಇತ್ತು, ಇದೀಗ ದಿನಕ್ಕೆ 150 ಯುನಿಟ್ ನಷ್ಟು ರ್‍ಯಾಂಡಮ್ ಡೋನರ್ ಪ್ಲೇಟ್ಲೆಟ್ಸ್ ಗಳ ಅವಶ್ಯಕತೆ ಎದುರಾಗಿದ್ದು, ಇದರಿಂದ ರೋಗಿಗಳಿಗೆ ಚಿಕಿತ್ಸೆ ನೀಡೋಕೆ ಸಮಸ್ಯೆ ಉದ್ಭವಿಸಿದೆ. ಅತ್ತ, ಬ್ಲಡ್ ಬ್ಯಾಂಕ್‍ಗಳಲ್ಲೂ ಬಿಳಿ ರಕ್ತದಾನಿಗಳ ಕೊರತೆ ಎದುರಾಗಿದ್ದು, ಬ್ಲಡ್ ಬಾಂಕ್‍ಗಳು ರಕ್ತದಾನ ಶಿಬಿರಗಳನ್ನ ಹೆಚ್ಚಳ ಮಾಡೋಕೆ ಸಜ್ಜಾಗಿವೆ.
ವರ್ಷದಿಂದ ವರ್ಷಕ್ಕೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರಲ್ಲೂ ಈ ಬಾರಿ ಡೆಂಗ್ಯೂ ಸಿಲಿಕಾನ್ ಸಿಟಿ ಮಂದಿಯನ್ನೇ ಹೆಚ್ಚು ಕಾಡಲು ಶುರು ಮಾಡಿದೆ. ಡೆಂಗ್ಯೂ ಕಾಣಿಸಿಕೊಂಡ ಕೆಲ ರೋಗಿಗಳಲ್ಲಿ ಮೂಗಿನಿಂದ ರಕ್ತ ಸೋರುವುದು, ಹಲ್ಲಿನ ವಸಡುಗಳಲ್ಲಿ ರಕ್ತ ಕಾಣಿಸುವುದು, ವಾಂತಿಯಲ್ಲಿ ರಕ್ತ ಬರುವುದು ಈ ರೀತಿ ಹಲವು ಲಕ್ಷಣ ಕಂಡುಬರ್ತಿದ್ದು, ಇದರಿಂದ ವೈಟ್ ಪ್ಲೇಟ್‍ಲೇಟ್ಸ್ ಕಡಿಮೆ ಇರೋ ರೋಗಿಗಳಿಗೆ ಚಿಕಿತ್ಸೆ ನೀಡೋ ಅವಶ್ಯಕತೆ ಎದುರಾಗ್ತಿದೆ.
ಡೆಂಗಿ ಕೇಸ್‍ನ ಅಂಕಿ ಅಂಶ:
ವರ್ಷ – ಕೇಸ್‍ಗಳು
2020 – 1127
2021 – 1629
2022 – 2335
2023 – 4979
ಸದ್ಯ ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದ್ರೆ ಈ ಬಾರೀ ಬೆಂಗಳೂರಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗಿರೋದು ಆತಂಕ ಸೃಷ್ಟಿಸಿದೆ. ಇತ್ತ ಡೆಂಗ್ಯೂ ರೋಗಿಗಳಿಗೆ ಪ್ಲೇಟ್ ಲೇಟ್ಸ್ ಕೊರತೆ ಕೂಡ ಎದುರಾಗ್ತಿರೋದು ಆಸ್ಪತ್ರೆಗಳ ಸಿಬ್ಬಂದಿಗೆ ತಲೆನೋವು ತಂದಿಟ್ಟಿದೆ. ಸದ್ಯ ಬ್ಲಡ್ ಬ್ಯಾಂಕ್‍ಗಳು ಕೂಡ ರಕ್ತದಾನ ಶಿಬಿರಗಳ ಮೂಲಕ ಜಾಗೃತಿಗೆ ಮುಂದಾಗ್ತಿದ್ದು, ಡೆಂಗ್ಯೂ ಅಬ್ಬರ ಯಾವಾಗ ತಗ್ಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.