ಕಾರಿಗೆ ಟೆಂಪೋ ಢಿಕ್ಕಿ: ಚಾಲಕನಿಗೆ ಹಲ್ಲೆ

ಶೇರ್ ಮಾಡಿ

ಉಜಿರೆ ಮೀನು ಮಾರುಕಟ್ಟೆಯಲ್ಲಿ ಮೀನು ತರುವ ಟೆಂಪೋ ಕಾರಿಗೆ ಢಿಕ್ಕಿ ಹೊಡೆದ ಕಾರಣಕ್ಕೆ ಟೆಂಪೋ ಚಾಲಕನ ಮೇಲೆ ತಂಡವೊಂದು ಹಲ್ಲೆ ನಡೆಸಿರು ವುದಾಗಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.

ಕುವೆಟ್ಟು ಗ್ರಾಮದ ಚಿಲಿಂಬಿ ನಿವಾಸಿ ಶೌಕತ್‌ ಅಲಿ(24) ಹಲ್ಲೆಗೆ ಒಳಗಾದವರು. ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವ ಶೌಕತ್‌ ಪೊಲೀಸರಿಗೆ ನೀಡಿರುವ ದೂರಿನಲ್ಲಿ, ನಾನು ಟೆಂಪೊವನ್ನು ಹಿಂದಕ್ಕೆ ತೆಗೆಯುತ್ತಿದ್ದಾಗ ಆಕಸ್ಮಿಕವಾಗಿ ಕಾರಿಗೆ ತಾಗಿದ್ದು ಇದನ್ನು ಪ್ರಶ್ನಿಸಿ ನಾಗೇಶ, ಪ್ರವೀಣ, ಹರಿ, ವಿನಯ ಹಾಗೂ ಇತರರು ತೀವ್ರವಾಗಿ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿದೂರು ನೀಡಿರುವ ನ್ಯಾಯತರ್ಪು ಗ್ರಾಮದ ನಿವಾಸಿ, ಉಜಿರೆಯ ಮಾರುಕಟ್ಟೆಯಲ್ಲಿ ಮೀನು ಕ್ಲೀನಿಂಗ್‌ ಕೆಲಸ ಮಾಡುವ ಗಿರಿಜಾ, ಮೀನು ಸಾಗಾಟದ ಟೆಂಪೋ ಚಾಲಕ ಕಾರಿಗೆ ಟೆಂಪೋವನ್ನು ತಾಗಿಸಿ ಜಖಂಗೊಳಿಸಿದ್ದಾರೆ. ಬಳಿಕ ಮಾರುಕಟ್ಟೆಗೆ ನುಗ್ಗಿ ಕತ್ತಿಯನ್ನು ತೆಗೆಯಲು ಪ್ರಯತ್ನಿಸಿದ್ದನ್ನು ವಿರೋಧಿಸಿದಾಗ ನನ್ನನ್ನು ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ. ಬೆಳ್ತಂಗಡಿ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!
%d