ನರಮಾಂಸ ಭಕ್ಷಣೆ ಸಾಮಾನ್ಯ ಸಂಸ್ಕೃತಿಯಾಗಿತ್ತಾ? ವಿಶ್ವದಲ್ಲೇ ಅತ್ಯಂತ ಡೇಂಜರಸ್‌ ಕಮ್ಯೂನಿಟಿಗಳ ಬಗ್ಗೆ ನಿಮ್ಗೆ ಗೊತ್ತಾ?

ಶೇರ್ ಮಾಡಿ

ಆದಿವಾಸಿ ಸಮುದಾಯಗಳಿಗೆ (Dangerous Tribes) ನೂರಾರು ವರ್ಷಗಳ ಇತಿಹಾಸವಿದೆ, ಈ ಸಮುದಾಯಗಳ ಒಂದೊಂದು ಕಥೆಗಳೂ ರೋಚಕ. ಭಾರತವೂ ಸೇರಿದಂತೆ ವಿಶ್ವದ 90ಕ್ಕೂ ಹೆಚ್ಚು ದೇಶಗಳಲ್ಲಿ ವಿವಿಧ ಆದಿವಾಸಿ ಸಮುದಾಯಗಳು ಜೀವಿಸುತ್ತಿದ್ದು, ಸುಮಾರು 40 ಕೋಟಿಯಷ್ಟು ಜನಸಂಖ್ಯೆ ಹೊಂದಿದೆ ಎಂದು ಅಂದಾಜಿಸಲಾಗಿದೆ. 

ವಿಶ್ವದಲ್ಲಿ ಅನೇಕ ಬುಡಕಟ್ಟು ಸಮುದಾಯಗಳ  ಬಗ್ಗೆ ಕೇಳಿರುತ್ತೇವೆ. ಯೈಫೊ, ಕೊರೊವೂ,  ಸೂರಿ ಅಥವಾ ಸುರಮಾ, ಯಾನೋಮಾಮಿ, ಮೋಕನ್‌, ಅಯೋರಿಯೋ, ಹವಾಯ್‌ ಹೀಗೆ ಅನೇಕ ಸಮುದಾಯಗಳ ಬಗ್ಗೆ ಕೇಳಿರುತ್ತೇವೆ. ಆದ್ರೆ ಇವುಗಳಲ್ಲಿ ವಿಚಿತ್ರ ಆಚರಣೆಯನ್ನು ಹೊಂದಿರುವ ಸಮಯದಾಯವೆಂದರೆ ಕ್ಯಾನಿಬಲ್ಸ್‌ (Cannibals). ಅಂದರೆ ನರಮಾಂಸ ಭಕ್ಷಣೆ ಮಾಡುವವರು. ಸಹಜ ಜೀವನ ನಡೆಸುವವರಿಗೆ ಇದು ವಿಚಿತ್ರವೆನಿಸಿದರೂ ಅನೇಕ ಶತಮಾನಗಳ ಹಿಂದೆ ಇದು ಸಾಮಾನ್ಯ ಸಂಸ್ಕೃತಿಯೇ ಆಗಿತ್ತು ಎಂದು ಹೇಳಲಾಗುತ್ತಿದೆ. 

ಹೌದು. ನರಮಾಂಸ ಭಕ್ಷಣೆ ಮಾಡುವ ಕ್ಯಾನಿಬಲ್ಸ್‌ ಅಥವಾ ಕ್ಯಾನಿಬೇಲಿಸ್‌ ಬುಡಕಟ್ಟು ಸಮುದಾಯ ಮೊದಲು ಹುಟ್ಟಿಕೊಂಡದ್ದು ವೆಸ್ಟ್‌ಇಂಡೀಸ್‌ನ ಅರಣ್ಯಪ್ರದೇಶದಲ್ಲಿ. ಇವರು ನರಮಾಂಸ ಭಕ್ಷಣೆ ಮಾಡುತ್ತಿದ್ದರು. ಇದನ್ನು ಆಂತ್ರೊಪೊಫೆಜಿ ಎಂದೂ ಕರೆಯುತ್ತಾರೆ. ಆರಂಭದಲ್ಲಿ ಪ್ರಾಣಿಗಳನ್ನು ಬೇಟೆಯಾಡಿ ಕೊಂದು ತಿನ್ನುತ್ತಿದ್ದ ಈ ಸಮುದಾಯ ಕ್ರಮೇಣ ಮನುಷ್ಯರನ್ನು ಬೇಟೆಯಾಡಿ ತಿನ್ನಲು ಪ್ರಾರಂಭಿಸಿತು. ಆ ನಂತರ ಲೈಬೀರಿಯಾ ಹಾಗೂ ಕಾಂಗೋ ದೇಶಗಳಲ್ಲಿ ಹುಟ್ಟಿಕೊಂಡ ಕೊರೊವೈ, ಮಲೇಶಿಯಾ, ಇಂಡೋನೇಷ್ಯಾದಲ್ಲಿ ಹುಟ್ಟಿಕೊಂಡ ಕೆಲ ಸಮುದಾಯಗಳು ತಮ್ಮ ಸಾಂಪ್ರದಾಯಿಕ ಆಚರಣೆಯಾಗಿ ನರಮಾಂಸ ಭಕ್ಷಣೆ ಮಾಡಲು ಮಾಡಿದವು. ಪುರಾಣಗಳಲ್ಲೂ ನರಮಾಂಸಭಕ್ಷಕರ ಬಗ್ಗೆ ಅನೇಕ ಕಥೆಗಳನ್ನ ಕೇಳಿರುತ್ತೇವೆ. ಸಿನಿಮಾಗಳಲ್ಲೂ ನರಮಾಂಸ ಭಕ್ಷಕರ ಕಥೆಯನ್ನು ತೆರೆಗೆ ತಂದಿರುವುದು ವಿಶೇಷ. 

ಬರಗಾಲದ ಆಹಾರ: 

1609-1610ರ ಸಮಯದಲ್ಲಿ ಉತ್ತರ ಡಕೋಟಾದ ನಾಡಾದ ಜೇಮ್ಸ್‌ಟೌನ್‌ ನಗರ ಬರಗಾಲ ಆವರಿಸಿತ್ತು. ಊಟ, ನೀರು ಸಿಗದೇ ಜನ ಹಸಿವಿನಿಂದ ಬಳಲುತ್ತಿದ್ದರು. ಈ ಸಂದರ್ಭದಲ್ಲಿ ಕೆಲವರು ವಲಸೆ ಹೋದರು. ಇನ್ನೂ ಕೆಲವರು ನರಮಾಂಸ ಭಕ್ಷಣೆ ಆಶ್ರಯಿಸಿದರು. ಆದ್ರೆ ಸುಮಾರು 15,000 ವರ್ಷಗಳ ಹಿಂದೆಯೇ ಕ್ಯಾನಿಬಲ್ಸ್‌ ಹುಟ್ಟಿಕೊಂಡಿತ್ತು. ಅವರಲ್ಲಿ ನರಮಾಂಸಭಕ್ಷಣೆ ಸಾಮಾನ್ಯ ಸಂಸ್ಕೃತಿಯಾಗಿತ್ತು ಎಂದುಇತ್ತೀಚಿನ ಸಂಶೋಧನೆಗಳು ಹೇಳಿವೆ. ಸಹಜ ಜೀವನ ನಡೆಸುವ ಮನುಷ್ಯರು ಸತ್ತವರನ್ನ ಬೀಳ್ಕೋಡುವ (ಅಂತ್ಯಕ್ರಿಯೆ) ಆಚರಣೆಗಳು ಕಾಲದಿಂದ ಕಾಲಕ್ಕೆ ನಡೆದುಕೊಂಡು ಬಂದಿವೆ. ಆದ್ರೆ ಕ್ಯಾನಿಬಲ್ಸ್‌ಗೆ ಸೇರಿದ ಕೆಲವು ಸಮುದಾಯಗಳು ಮನುಷ್ಯರನ್ನು ಹೂಳುವುದಿಲ್ಲ. ಬದಲಾಗಿ ತಾವೇ ತಿನ್ನುತ್ತಾರೆ, ಅಲ್ಲದೇ ಮನುಷ್ಯರನ್ನು ಕೊಂದು ತಿನ್ನುವ ಸಂಸ್ಕತಿಯೂ ಇವರಲ್ಲಿದೆ. 

ಉತ್ತರ ಯುರೋಪಿನಾದ್ಯಂತ ನರಭಕ್ಷಕತೆ ಸಾಮಾನ್ಯ ಸಂಸ್ಕೃತಿಯಾಗಿತ್ತು ಅನ್ನೋದಕ್ಕೆ ಇತ್ತೀಚೆಗೆ ಪತ್ತೆಮಾಡಲಾಗಿರುವ ಪ್ರಾಚೀನ ಶಿಲಾಯುಗದ ಅವೇಶಗಳು ಸಾಕ್ಷಿಯಾಗಿವೆ. ಈ ಅವಶೇಷಗಳ ಅಧ್ಯಯನದ ನಂತರ 15,000 ವರ್ಷಗಳ ಹಿಂದೆ ಯುರೋಪ್‌ನ ಉತ್ತರ ಹಾಗೂ ವಾಯುವ್ಯ ಭಾಗದಲ್ಲಿ ಈ ಸಂಸ್ಕೃತಿ ಅಲ್ಪಾವಧಿವರೆಗೆ ಚಾಲ್ತಿಯಲ್ಲಿತ್ತು. ಇದನ್ನು ಮ್ಯಾಗ್ಡಲೇನಿಯನ್ ಕಲ್ಚರ್‌ಎಂದೂ ಕರೆಯಲಾಗುತ್ತಿತ್ತು ಎಂದು ಉಲ್ಲೇಖಿಸಲಾಗಿದೆ. ಅಲ್ಲದೇ ನರಮಾಂಸ ಭಕ್ಷಕರು ಬಳಸುತ್ತಿದ್ದ ಕಲ್ಲು, ಮೂಳೆ, ಮತ್ತು ತಮ್ಮ ಸಂಸ್ಕೃತಿಯ ಕಲಾಕೃತಿಗಳು ಪತ್ತೆಯಾಗಿವೆ. ಇಂಡೋನೇಷ್ಯಾದ ಚೆಡ್ಡಾರ್ ಗಾರ್ಜ್‌ನಲ್ಲಿರುವ ಗುಹೆಯೊಂದರಲ್ಲಿ ಅನೇಕ ಕುರುಹುಗಳು ಪತ್ತೆಯಾಗಿದ್ದು, ಇದು ಮ್ಯಾಗ್ಡಲೇನಿಯನ್ ಸಂಸ್ಕೃತಿ ಎಂದು ಪುರಾತತ್ವಶಾಸ್ತ್ರಜ್ಞ ವಿಲಿಯಂ ಮಾರ್ಷ್ ಖಚಿತಪಡಿಸಿದ್ದಾರೆ. ಈ ಮ್ಯಾಗ್ಡಲೇನಿಯನ್ ಸಂಸ್ಕೃತಿ ಎಂದರೇನು? ವಿಶ್ವದಲ್ಲಿ ಅತೀ ಭಯಾನಕ ಸ್ವಭಾವವುಳ್ಳ ಆದಿವಾಸಿ ಸಮುದಾಯಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯಬಹುದು. 

  1. ಯೈಫೊ ಬುಡಕಟ್ಟು: 

ಒಸೆನ್ಯಾದ ಪಾಪುವಾ ನ್ಯೂಗಿನಿಯಲ್ಲಿರುವ ಯೈಫೋ ಬುಡಕಟ್ಟು ಸಮುದಾಯ 1988ರಲ್ಲಿ ಆಧುನಿಕ ಜಗತ್ತಿನ ಸಂಪರ್ಕಕ್ಕೆ ಬಂದರು. ಬ್ರಿಟಿಷ್ ಬರಹಗಾರ ಬೆನೆಡಿಕ್ಟ್ ಅಲೆನ್ ಎಂಬಾತ ಈ ಸಮುದಾಯದ ಕೆಲವು ಮುಖಂಡರನ್ನು ಭೇಟಿಯಾಗಿ ಈ ಕುರಿತು ಬರೆದಿದ್ದ. ಈ ಸಮುದಾಯವು ಸಾಮಾನ್ಯವಾಗಿ ಹೊರಗಿನ ಪ್ರಪಂಚದವರೊಂದಿಗೆ ಹೊಂದಿಕೊಳ್ಳುವುದಿಲ್ಲ. ಒಂದು ವೇಳೆ ತಾವು ಗುರುತಿಸಿಕೊಂಡ ಸೂಕ್ಷ್ಮ ಪ್ರದೇಶಗಳಿಗೆ ಪ್ರವೇಶಿಸಿದ್ರೆ ಬಿಲ್ಲು ಬಾಣಗಳನ್ನ ಬಿಟ್ಟು ಕೊಲ್ಲುತ್ತಿದ್ದರು ಎಂದು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. 

  1. ಕೊರೊವೈ ಬುಡಕಟ್ಟು: 

ಕೊರೊವೈ ಎಂಬುದು ಪಪುವಾದ ಆಗ್ನೇಯ ಪಶ್ಚಿಮ ಕಾಡಿನಲ್ಲಿ ಕಂಡುಬಂದಿದ್ದ ಸಮುದಾಯ. ಈ ಸಮುದಾಯವು ನರಭಕ್ಷಕತೆಯನ್ನು ಅವಲಂಬಿಸಿತ್ತು. ಮೊದಲು ಪ್ರಾಣಿಗಳನ್ನು ಕೊಂದು ತಿನ್ನುತ್ತಿದ್ದ ಈ ಸಮುದಾಯ ನಂತರ ಮನುಷ್ಯರ ಮೃತದೇಹವನ್ನು ಆಶ್ರಯಿಸಲು ಮುಂದಾಯಿತು. ಆದ್ರೆ ಕಳೆದ ಕೆಲವು ವರ್ಷಗಳಿಂದ ಆಧುನಿಕ ಸಮುದಾಯದ ಪರಿಚಯದ ನಂತರ ನರಭಕ್ಷಕತೆಯನ್ನು ತ್ಯಜಿಸಿದೆ. ಆದರೂ ಈ ಸಮುದಾಯವನ್ನು ಅತ್ಯಂತ ಅಪಾಯಕಾರಿ ಎಂದು ಗುರುತಿಸಲಾಗಿದೆ. 

  1. ಸೂರಿ ಜನರು: 

ನೈರುತ್ಯ ಇಥಿಯೋಫಿಯಾದಲ್ಲಿ ನೆಲೆಗೊಂಡಿರುವ ಸೂರಿ ಅಥವಾ ಸುರಮಾ ಜನರು ಇನ್ನೂ ಪುರಾತನ ಜೀವನ ವಿಧಾನಗಳನ್ನು ಪಟ್ಟುಬಿಡದೇ ಅನುಸರಿಸುತ್ತಾರೆ. ಈ ಬುಡಕಟ್ಟು ಹೊರಗಿನವರಿಗೆ ತಮ್ಮ ಜೀವನ ಕ್ರಮಗಳ ಬಗ್ಗೆ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಆದ್ರೆ ಇಲ್ಲಿ ಕೆಲವು ಹಿಂಸಾತ್ಮಕ ಆಚರಣೆಗಳು ನಡೆಯುತ್ತವೆ ಎಂದು ಹೇಳಲಾಗಿದೆ. 

  1. ಯಾನೋಮಾಮಿ ಬುಡಕಟ್ಟು: 

ವೆನೆಜುವೆಲಾ ಮತ್ತು ಬ್ರೆಜಿಲ್ ನಡುವಿನ ದಟ್ಟ ಅಮೆಜಾನ್‌ ಕಾಡಿನಲ್ಲಿ ನೆಲೆಸಿರುವ ಯಾನೋಮಾಮಿ ಸಮುದಾಯದ ಜನರ ಭಯಾನಕ ಬುಡಕಟ್ಟು ಸಮುದಾಯಗಳಲ್ಲಿ ಒಂದು. ಈ ಸಮುದಾಯಕ್ಕೆ ನಾಗರೀಕತೆಯ ಪರಿಚಯವಾಗಿದ್ದರೂ, ಇಂದಿಗೂ ಹಿಂಸಾಚಾರ ಮುಂದುವರಿಸಿದೆ. ಇಲ್ಲಿನ ಜನ ಹೊರಗಿನ ಪ್ರಪಂಚದಿಂದ ದೂರ ಉಳಿಯಲು ಬಯಸುತ್ತಾರೆ. 

  1. ಕೊರುಬೊ/ ಡಿಸ್ಲಾಲಾ ಬುಡಕಟ್ಟು: 

ಡಿಸ್ಲಾಲಾ ಎಂದು ಕರೆಯಲ್ಪಡುವ ಕೊರುಬೊ ಬ್ರೆಜಿಲ್‌ನಲ್ಲಿರುವ ಉಗ್ರ ಬುಡಕಟ್ಟು ಎಂದೇ ಗುರುತಿಸಿಕೊಂಡಿದೆ.  ಈ ಹಿಂದೆ ಬ್ರೆಜಿಲ್‌ ಸರ್ಕಾರವು ಅವರನ್ನು ಸಂಪರ್ಕಿಸಿದರೂ ಅದು ಸಾಧ್ಯವಾಗಲಿಲ್ಲ. ಅಮೆಜಾನ್ ಜಲಾನಯನ ಪ್ರದೇಶವನ್ನು ಪ್ರವೇಶಿಸಲು ಧೈರ್ಯಮಾಡಿದ ಒಂದೆರಡು ಸರ್ಕಾರಿ ನೌಕರರನ್ನು ಡಿಸ್ಲಾಲಾಗಳು ಭೀಕರವಾಗಿ ಹತ್ಯೆಗೈದಿದ್ದರು. 

  1. ಮಾಶ್ಕೊಪೈರೋ: 

ಆಧುನಿಕ ಮಾನವ ಜಗತ್ತಿನ ಸಂಪರ್ಕವೇ ಇಲ್ಲದ ಸಮುದಾಯ ಇದು. ಇತ್ತೀಚೆಗೆ ಪೆರುವಿನಲ್ಲಿ ಕಾಣಿಸಿಕೊಂಡಿದೆ. ಈ ಸಮುದಾಯವನ್ನು ಕುಜರೆನೋ ಎಂದೂ ಸಹ ಕರೆಯುತ್ತಾರೆ. ಈ ಸಮುದಾಯದ  ಜನ ಹೊರಗಿನವರನ್ನು ಕಂಡರೆ ಹತ್ಯೆ ಮಾಡುತ್ತಾರೆ. ಆದ್ದರಿಂದ ಪೆರುವಿನ ಕಾಡುಗಳಿಗೆ ಪ್ರವೇಶ ಮಾಡುವ ಮುನ್ನ ಎಚ್ಚರ ವಹಿಸುವಂತೆ ಸ್ಥಳೀಯ ಸರ್ಕಾರಗಳು ಸೂಚನೆ ನೀಡಿವೆ. 

  1. ಮೋಕನ್ ಬುಡಕಟ್ಟು – ಸಮುದ್ರ ಜಿಪ್ಸಿ

ಮೊಕನ್ ಬುಡಕಟ್ಟು ಸಮುದಾಯ  ಬರ್ಮಾ ಮತ್ತು ಥೈಲ್ಯಾಂಡ್ ಗಳಲ್ಲಿ ಕಂಡುಬರುತ್ತವೆ. ಇವು ಸರ್ಕಾರದಿಂದ ಪೋಷಿತವಾದರೂ ಅಳಿವಿನ ಅಂಚಿನಲ್ಲಿರುವ ಸಮುದಾಯವೆಂದು ಗುರುತಿಸಿಕೊಂಡಿದೆ. ಅವರು ತಮ್ಮ ಬಹುತೇಕ ಜೀವನವನ್ನು ನೀರಿನಲ್ಲಿ ಸಂಚಾರ ಮಾಡುತ್ತಲೇ ಕಳೆಯುತ್ತಾರೆ. ಆದ್ದರಿಂದ ಅವರನ್ನು ಸಮುದ್ರಜೀವಿಗಳು ಎಂತಲೂ ಕರೆಯುತ್ತಾರೆ.  ಒಂದು ಕಾಲದಲ್ಲಿ ನರಭಕ್ಷಕ ಸಮುದಾಯ ಎಂದೇ ಕುಖ್ಯಾತಿ ಪಡೆದಿದ್ದ ಈ ಸಮುದಾಯ ಇಂದು ಶಾಂತಿಯುತವಾಗಿ ನೆಲೆಸಿದೆ. 

  1. ಅಯೋರಿಯೋ ಬುಡಕಟ್ಟು – ಬೇಟೆಗಾರ-ಸಂಗ್ರಹಕಾರರು

ಪರಾಗ್ವೆ ಮತ್ತು ಬೊಲಿವಿಯಾದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಅಯೋರಿಯೋ ಜನರು ಶತಮಾನ ಕಳೆದರೂ ನಾಗರಿಕ ಜಗತ್ತಿನ ಸಂಪರ್ಕಕ್ಕೆ ಬಂದಿರಲಿಲ್ಲ. ಬೇಟೆಗಾರ ಪ್ರೌವೃತ್ತಿಯನ್ನೇ ಜೀವನವಾಗಿಸಿಕೊಂಡಿದ್ದ ಈ ಸಮುದಾಯ ಅರಣ್ಯನಾಶದಿಂದ ನಗರ ಪ್ರದೇಶಗಳತ್ತ ಬರಲು ಪ್ರಾರಂಭಿಸಿತು. ಆದ್ರೆ ಈ ಸಮುದಾಯ ನಗರ ಪ್ರದೇಶಗಳತ್ತ ಮುಖಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಲ್ಲಿ ಚದುರಿಹೋಯಿತು. ಕೆಲವರು ಕಾಡಾನೆಗಳಿಂದ ದಾಳಿಗೆ ತುತ್ತಾದರು. ಇಂದು ಅಳಿವಿನ ಅಂಚಿನಲ್ಲಿರುವ ಸಮುದಾಯವೆಂದು ಗುರುತಿಸಿಕೊಂಡಿದೆ. ಸಾಮಾನ್ಯವಾಗಿ ನಗರದಲ್ಲಿ ನೆಲೆಸಿರುವವರು ಸಹಜ ಜೀವನಕ್ಕೆ ಮರಳಿದರೂ ಕಾಡಿನಲ್ಲೇ ಉಳಿದುಕೊಂಡಿರುವ ಕೆಲವರು ನರಮಾಂಸಭಕ್ಷಣೆ ಹಾಗೂ ಪ್ರಾಣಿಗಳನ್ನ ಕೊಂದು ತಿನ್ನುವ ಜೀವನ ಕಳೆಯುತ್ತಿದ್ದಾರೆ ಎಂದು ಹೇಳಲಾಗಿದೆ.

Leave a Reply

error: Content is protected !!