ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯ ವೈಯಕ್ತಿಕ ಆಹ್ವಾನ ಪತ್ರದಲ್ಲೇನಿದೆ..?

ಶೇರ್ ಮಾಡಿ

ಕೋಟ್ಯಂತರ ರಾಮಭಕ್ತರ ಕನಸು ನನಸಾಗಲು ಇನ್ನು ಒಂದು ತಿಂಗಳಷ್ಟೇ ಬಾಕಿ. ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಹಂಚಿಕೆ ಈಗಾಗಲೇ ಶುರುವಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಿಜಿಸ್ಟರ್ ಪೋಸ್ಟ್ ಮೂಲಕ ಸಾಧು ಸಂತರಿಗೆ ಹಾಗೂ ಗಣ್ಯರಿಗೆ ಆಮಂತ್ರಣ ಪತ್ರಿಕೆ ಕಳಿಸುತ್ತಿದೆ.

ಇದರಲ್ಲಿ ಕೆಲವು ಆಮಂತ್ರಣ ಪತ್ರಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಲೆಟರ್ ಹೆಡ್‍ನಲ್ಲಿ ವೈಯಕ್ತಿಕವಾಗಿ ಆಹ್ವಾನಿತರ ಹೆಸರು ಉಲ್ಲೇಖಿಸಿ ಆಮಂತ್ರಣ ಪತ್ರಿಕೆ ಕಳಿಸಲಾಗುತ್ತಿದೆ.

ಆಮಂತ್ರಣ ಪತ್ರದಲ್ಲೇನಿದೆ..?
ಶ್ರೀಚರಣಗಳಿಗೆ ವಂದನೆ.
ಪ್ರಭು ಶ್ರೀರಾಮನ ಕೃಪೆಯಿಂದ ದೇವರ ಆರಾಧನೆ ಚೆನ್ನಾಗಿ ನಡೆದು, ಎಲ್ಲ ಆಶ್ರಮವಾಸಿಗಳು ಸಂತೋಷದಿಂದಿರಬಹುದು.

ಸುದೀರ್ಘ ಹೋರಾಟದ ನಂತರ ಶ್ರೀರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿರುವುದು ನಿಮಗೆ ತಿಳಿದಿರಬಹುದು.

ಪೌಷ, ಶುಕ್ಲ ದ್ವಾದಶಿ ವಿಕ್ರಮ ಸಂವತ್ಸರ 2080, ಸೋಮವಾರ, 22 ಜನವರಿ 2024, ಗರ್ಭಗುಡಿಯಲ್ಲಿ ರಾಮ ಲಲ್ಲಾನ ನೂತನ ವಿಗ್ರಹದ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಈ ಪುಣ್ಯ ಸಂದರ್ಭದಲ್ಲಿ ನೀವು ಅಯೋಧ್ಯೆಯಲ್ಲಿ ಉಪಸ್ಥಿತರಿದ್ದು ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬೇಕು ಹಾಗೂ ಈ ದಿನದ ಘನತೆಯನ್ನು ಹೆಚ್ಚಿಸಬೇಕು ಎನ್ನುವುದು ನಮ್ಮ ಅಪೇಕ್ಷೆ.

ನೀವು ಜನವರಿ 21ರೊಳಗೆ ಅಯೋಧ್ಯೆ ತಲುಪಲು ವ್ಯವಸ್ಥೆ ಮಾಡಿಕೊಳ್ಳಿ. ಎಷ್ಟು ಬೇಗ ನೀವು ಅಯೋಧ್ಯೆ ತಲುಪುತ್ತೀರೋ, ಅದರಿಂದ ನಿಮಗೆ ಅನುಕೂಲವಾಗಲಿದೆ. ಬರುವುದು ತಡವಾದರೆ ಸಮಸ್ಯೆಗಳನ್ನು ಎದುರಿಸಬೇಕಾದೀತು. 23 ಜನವರಿ 2024ರ ನಂತರವೇ ಅಯೋಧ್ಯೆಯಿಂದ ವಾಪಸ್ ಹೊರಡಲು ಪ್ಲ್ಯಾನ್ ಮಾಡಿ.

ಈ ಶುಭ ಸಂದರ್ಭದಲ್ಲಿ ಅಯೋಧ್ಯಾ ಧಾಮದಲ್ಲಿ ನೀವು ಉಪಸ್ಥಿತರಿರಬೇಕು ಎಂದು ಮತ್ತೊಮ್ಮೆ ನಿಮ್ಮಲ್ಲಿ ವಿನಂತಿ.

ನಿಮ್ಮ ಶ್ರೀಚರಣಗಳಿಗೆ ಪ್ರಣಾಮ.
ಚಂಪತ್ ರಾಯ್,
ಮುಖ್ಯ ಕಾರ್ಯದರ್ಶಿ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ

Leave a Reply

error: Content is protected !!