ಜ.30ರಂದು ನೇಮೋತ್ಸವ ನಡೆಯಲಿದೆ
ಮಾಯಿಲಕೋಟೆ ಸೀಮೆ ದೈವಸ್ಥಾನ ಟ್ರಸ್ಟ್ (ರಿ) ಕೊಕ್ಕಡದಲ್ಲಿ ಕ್ಷೇತ್ರದ ತಂತ್ರಿಗಳಾದ ಕೆ.ಯು.ಪದ್ಮನಾಭ ತಂತ್ರಿಗಳು ಎಡಮನೆ, ನೀಲೇಶ್ವರ ಇವರ ನೇತೃತ್ವದಲ್ಲಿ ಜ.26ರಂದು ಸಂಜೆ 7.00 ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಪ್ರಸಾದ ಶುದ್ಧಿ, ರಾಕ್ಷೋಘ್ನ ವಾಸ್ತು ಹೋಮ, ಜಲಧಿವಾಸ, ವಾಸ್ತು ಬಲಿ, ಬಿಂಬ ಪ್ರಸಾದ, ಪಾಣಿಗ್ರಹ, ಅನ್ನಸಂತರ್ಪಣೆ ನಡೆಯಿತು.
ಜ.27ರಂದು ಬೆಳಿಗ್ಗೆ ಗಂಟೆ 7.00ರಿಂದ ಗಣಹೋಮ, ಬಿಂಬ ಶುದ್ಧಿ, ಕಲಶ ಪೂಜೆ, ಚಿತ್ರಕೂಟ ಪ್ರತಿಷ್ಠೆ, ನಾಗಪ್ರತಿಷ್ಠೆ ನಡೆಯಿತು. ಚೋರ ಶಾಂತಿ ಹೋಮ, ಜಲಾಭಿಷೇಕ, ಕ್ಷೀರಾಭಿಷೇಕ, ಬಿಂಬ ಅಭಿಷೇಕ, ಆಶ್ಲೇಷ ಬಲಿ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.
ಕೊಕ್ಕಡ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದ ಪವಿತ್ರಪಾಣಿ ರಾಧಾಕೃಷ್ಣ ಯಡಪಡಿತ್ತಾಯ, ಮಾಯಿಲಕೋಟೆ ದೈವಸ್ಥಾನ ಟ್ರಸ್ಟ್ ನ ಅಧ್ಯಕ್ಷ ರಾಮಕೃಷ್ಣ ದೇವಾಡಿಗ, ಉತ್ಸವ ಸಮಿತಿಯ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಪ್ರಧಾನ ಕಾರ್ಯದರ್ಶಿ ಶಾಂತರಾಮ ಎ.ನ್ಯೂ ಆರಿಗ, ಜಯಾನಂದ ಬಂಟ್ರಿಯಾಲ್, ಸುರೇಶ್ ಪಡಿಪಂಡ, ಜಯರಾಮ ನ್ಯೂ ಆರಿಗ, ಚಂದ್ರಹಾಸ ಪನ್ಯಾಡಿ ಇಂಜಿನಿಯರ್, ಕೊಕ್ಕಡ ವೈದ್ಯನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ಕೆದಿಲಯ, ಡಾ.ಬಿ.ಮೋಹನ್ ದಾಸ್ ಗೌಡ, ದೈವದ ಪರಿಚಾರಕರು ಮತ್ತು ಮಾಯಿಲ ವಿಭಾಗದವರು, ಟ್ರಸ್ಟ್ ನ ಸದಸ್ಯರು
ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.
ಹಾಗೂ ಜ.30ರಂದು ಬೆಳಿಗ್ಗೆ 10.00 ಗಂಟೆಗೆ ದೈವಗಳಿಗೆ ತಂಬಿಲ ಸೇವೆ, ಸಂಜೆ ಗಂಟೆ 6.00 ರಿಂದ ಶ್ರೀ ಕಲ್ಲುರ್ಟಿ, ವರ್ಣಾರ ಪಂಜುರ್ಲಿ, ಕೋಟೆ ಚಾಮುಂಡಿ ಮತ್ತು ಗುಳಿಗ ದೈವಗಳ ನೇಮೋತ್ಸವವು ಕ್ಷೇತ್ರದ ತಂತ್ರಿಗಳಾದ ಕೆ.ಯು.ಪದ್ಮನಾಭ ತಂತ್ರಿಗಳು ಎಡಮನೆ, ನೀಲೇಶ್ವರ ಇವರ ನೇತೃತ್ವದಲ್ಲಿ ಜರಗಲಿರುವುದು. ರಾತ್ರಿ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.