ರಾಮಕುಂಜ: ಐಸಿಹಾಸಿಕ ಹಿನ್ನೆಲೆ ಹೊಂದಿರುವ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಸಲುವಾಗಿ ಜ.25ರಂದು ರಾತ್ರಿ ದೇವರ ವೈಭವದ ಬ್ರಹ್ಮರಥೋತ್ಸವ ನಡೆಯಿತು.
ಜ.25ರಂದು ಬೆಳಿಗ್ಗೆ ಬಲಿ ಹೊರಟು ದೇವರ ಉತ್ಸವ ನಡೆಯಿತು. ನಂತರ 48 ತೆಂಗಿನ ಕಾಯಿಗಳ ಶ್ರೀ ಗಣಪತಿ ಹೋಮ ನಡೆದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ರಾತ್ರಿ ಶ್ರೀರಾಮ ಹಾಗೂ ಈಶ್ವರ ದೇವರ ಬಲಿ ಹೊರಟು ರಥಬೀದಿಯಲ್ಲಿ ಶ್ರೀದೇವರ ವೈಭವದ ಬ್ರಹ್ಮರಥೋತ್ಸವ ನಡೆಯಿತು. ಬಳಿಕ ಶ್ರೀಭೂತ ಬಲಿ, ಶಯನೋತ್ಸವ ನಡೆಯಿತು. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು. ಊರ ಹಾಗೂ ಪರವೂರಿನ ಸಾವಿರಾರು ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ದೇವರ ವೈಭವದ ಬ್ರಹ್ಮರಥೋತ್ಸವದ ದೃಶ್ಯವನ್ನು ಕಣ್ತುಂಬಿಸಿಕೊಂಡರು. ರಥೋತ್ಸವದ ಬಳಿಕ ಬಾಚನಕೆರೆ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಸರಪಾಡಿ ಇವರಿಂದ ‘ಗುಳಿಗ ಶಿವ ಗುಳಿಗ’ಯಕ್ಷಗಾನ ಬಯಲಾಟ ನಡೆಯಿತು.