ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆ- 7 ಹಂತದಲ್ಲಿ ಮತದಾನ

ಶೇರ್ ಮಾಡಿ

ತೀವ್ರ ಕುತೂಹಲ ಕೆರಳಿಸಿರುವ 2024ರ 543 ಲೋಕಸಭಾ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಶನಿವಾರ (ಮಾರ್ಚ್‌ 16) ಘೋಷಿಸಿದೆ. ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಲೋಕಸಭಾ ಚುನಾವಣೆ ನಡೆಸಲು ಆಯೋಗ ಸಿದ್ಧವಾಗಿದೆ ಎಂದು ತಿಳಿಸಿದೆ.

ದೇಶಾದ್ಯಂತ 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ ಎಂದು ರಾಜೀವ್‌ ಕುಮಾರ್‌ ತಿಳಿಸಿದರು.

ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಅವರು ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ಲೋಕಸಭಾ ಚುನಾವಣಾ ದಿನಾಂಕದ ವಿವರವನ್ನು ತಿಳಿಸಿದರು.

ಪ್ರಸ್ತುತ ಲೋಕಸಭೆಯ ಅವಧಿ ಜೂನ್‌ 16ರಂದು ಕೊನೆಗೊಳ್ಳಲಿದ್ದು, ಅದಕ್ಕೂ ಮೊದಲು ಕೇಂದ್ರದ ನೂತನ ಸರ್ಕಾರ ರಚನೆಯಾಗಬೇಕಾಗಿದೆ. ಈ ಸಂದರ್ಭದಲ್ಲಿ ಆಂಧ್ರಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ ಮತ್ತು ಒಡಿಶಾ ವಿಧಾನಸಭೆಯ ಅವಧಿ ಕೂಡಾ ಮುಕ್ತಾಯಗೊಳ್ಳಲಿದ್ದು, ಇದರ ಚುನಾವಣೆ ಕೂಡಾ ಲೋಕಸಭೆ ಚುನಾವಣೆ ಜತೆಗೆ ನಡೆಯಲಿದೆ.

ದಿನಾಂಕ ಘೋಷಣೆ:
ಏಪ್ರಿಲ್‌ 19ರಂದು ಮೊದಲ ಹಂತದ ಮತದಾನ. ಏಪ್ರಿಲ್‌ 26 ಮತ್ತು ಮೇ 7ರಂದು ಕರ್ನಾಟಕದಲ್ಲಿ ಮತದಾನ, ಮೇ 7ರಂದು ಮೂರನೇ ಹಂತ, ಮೇ 13 4ನೇ ಹಂತದ ಮತದಾನ, ಮೇ 20 5ನೇ ಹಂತ, ಮೇ 25 6ನೇ ಹಂತ, ಜೂನ್‌ 1 7ನೇ ಹಂತದ ಮತದಾನ ನಡೆಯಲಿದೆ. ಜೂನ್‌ 4ರಂದು

ಉಪ ಚುನಾವಣೆ ದಿನಾಂಕ ಘೋಷಣೆ
26 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಆಯೋಗ ದಿನಾಂಕ ಘೋಷಿಸಿದೆ. ಏಪ್ರಿಲ್‌ 19ರಂದು ಸಿಕ್ಕಿಂ ಉಪ ಚುನಾವಣೆ. ಮೇ 13 ಆಂಧ್ರಪ್ರದೇಶ ಉಪ ಚುನಾವಣೆ. ಏಪ್ರಿಲ್‌ 19 ಅರುಣಾಚಲ ಪ್ರದೇಶ ಉಪಚುನಾವಣೆ. ಮೇ 25ರಂದು ಒಡಿಶಾ ವಿಧಾನಸಭಾ ಚುನಾವಣೆ. ಕರ್ನಾಟಕದ ಸುರಪುರ ಉಪಚುನಾವಣೆ

ಮುಖ್ಯಾಂಶಗಳು:
*ದೇಶಾದ್ಯಂತ ಈವರೆಗೆ 400 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗಿದೆ.
*ದೇಶಾದ್ಯಂತ 10.5 ಲಕ್ಷ ಮತಗಟ್ಟೆಗಳ ಸ್ಥಾಪನೆ
*ದೇಶದಲ್ಲಿ ಒಟ್ಟು 97 ಕೋಟಿ ಮತದಾರರಿದ್ದಾರೆ.
*ಈ ಬಾರಿ 1.82 ಕೋಟಿ ಜನರು ಮೊದಲ ಬಾರಿ ಮತ ಚಲಾಯಿಸಲಿದ್ದಾರೆ.
*1.5 ಕೋಟಿ ಭದ್ರತಾ ಸಿಬಂದಿ, ಅಧಿಕಾರಿಗಳ ನೇಮಕ
*ಮತದಾನಕ್ಕೆ ಒಟ್ಟು 55 ಲಕ್ಷ ಇವಿಎಂಗಳ ಬಳಕೆ
*49.7 ಕೋಟಿ ಪುರುಷ ಮತದಾರರಿದ್ದಾರೆ
*47.1 ಕೋಟಿ ಮಹಿಳಾ ಮತದಾರರಿದ್ದಾರೆ.
*85 ವರ್ಷ ಮೇಲ್ಪಟ್ಟ 82 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ.
*20ರಿಂದ 29 ವರ್ಷದೊಳಗಿನ 19.74 ಕೋಟಿ ಯುವ ಮತದಾರರು ಮತ ಚಲಾಯಿಸಲಿದ್ದಾರೆ.
*12 ರಾಜ್ಯಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚು
*48 ಸಾವಿರ ತೃತೀಯ ಲಿಂಗಿ ಮತದಾರರು ಮತ ಚಲಾಯಿಸಲಿದ್ದಾರೆ.
*ಮತಗಟ್ಟೆಗಳಲ್ಲಿ ಹೆಲ್ಫ್‌ ಡೆಸ್ಕ್‌, ವ್ಹೀಲ್‌ ಚೇರ್‌ ವ್ಯವಸ್ಥೆ.
*ಈ ಬಾರಿ 2.18 ಲಕ್ಷ ಶತಾಯುಷಿ ಮತದಾರರು ಮತ ಚಲಾಯಿಸಲಿದ್ದಾರೆ.
*ಬಾರ್ಡರ್‌ ಗಳಲ್ಲಿ ಡ್ರೋನ್‌ ಮೂಲಕ ಕಣ್ಗಾವಲು
*ಪ್ರತಿ ಜಿಲ್ಲೆಯಲ್ಲಿ ಕಂಟ್ರೋಲ್‌ ರೂಂ
*ಅಕ್ರಮವಾಗಿ ಹಣ ಸಾಗಿಸಿದರೆ ಕಠಿನ ಕ್ರಮ
*ಕುಕ್ಕರ್‌, ಮದ್ಯ, ಹಣ ಹಂಚುವುದಿಲ್ಲ
*ಚುನಾವಣಾ ಪ್ರಚಾರದ ವೇಳೆ ಹಲವಾರುಚ
*ವೈಯಕ್ತಿಕವಾಗಿ ಟೀಕೆ ಮಾಡುಂತಿಲ್ಲಾ
*ಮಕ್ಕಳನ್ನು ಚುನಾವಣಾ ಪ್ರಕಾಕ್ಕೆ
*ಅಭ್ಯರ್ಥಿಗಳು ಮತದಾರರನ್ನು ಪ್ರಚೋದಿಸುವಂತಿಲ್ಲ.
ದೇಶದ 26 ರಾಜ್ಯಗಳಲ್ಲಿ ವಿಧಾನಸಭೆಯ ಉಪಚುನಾವಣೆ ನಡೆಯಲಿದೆ.

Leave a Reply

error: Content is protected !!