75,000 ರೂ. ಮೌಲ್ಯದ ಅಡಕೆ ಕಳವು

ಶೇರ್ ಮಾಡಿ

ವಿಟ್ಲಪಡ್ನೂರು ಗ್ರಾಮದ ಕಾಪುಮಜಲುವಿನಲ್ಲಿ ಸುಮಾರು 75,000 ರೂ ಮೌಲ್ಯದ 10ಗೋಣಿಚೀಲ ಅಡಕೆ ಕಳವು ಮಾಡಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಪುಮಜಲುವಿನ ಪೂವಪ್ಪಗೌಡ (60) ಅವರ ಅಂಗಳದಲ್ಲಿ ಒಣಗಲು ಹಾಕಿದ ಅಡಕೆಯನ್ನು ಶನಿವಾರ ತಡರಾತ್ರಿ ಭಾನುವಾರ ಬೆಳಗ್ಗಿನ ಜಾವದ ಅವಧಿ ಕಳವು ಆಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Leave a Reply

error: Content is protected !!