ಕಡಬ ಸೈಂಟ್ ಆನ್ಸ್ ಪ್ರಾಥಮಿಕ ಪೂರ್ವ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭ ಶನಿವಾರದಂದು ಸೈಂಟ್ ಜೋಕಿಮ್ಸ್ ಸಭಾಭವನದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕ ವಂದನೆಯ ಫಾ.ಪ್ರಕಾಶ್ ಪೌಲ್ ಡಿ’ಸೋಜ ಅವರು ವಹಿಸಿ ಮಕ್ಕಳು ಎಳೆಯ ಸಸಿಗಳಂತೆ ನಾವು ಹೇಗೆ ಅವರನ್ನು ಬೆಳೆಸುತ್ತೇವೆಯೋ ಮುಂದೆ ಹಾಗೆ ಅವರು ಫಲ ನೀಡುತ್ತಾರೆ. ಪೋಷಕರು ಮತ್ತು ಶಿಕ್ಷಕರು ಮಕ್ಕಳಲ್ಲಿ ಸದಾ ಸಕಾರಾತ್ಮಕತೆ, ಪ್ರೇರಣೆ ತುಂಬುವಂತಹ ಮಾತುಗಳ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಪ್ರಫುಲ್ಲ ಗಣೇಶ್ CEO, IRCMD ಸೆಂಟರ್ ಪುತ್ತೂರು ಮತ್ತು ಸುಳ್ಯ ಇವರು ಆಗಮಿಸಿ ಯು.ಕೆ.ಜಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಮಕ್ಕಳು ನೀವು ದೊಡ್ಡ ಕೆಲಸಗಳನ್ನು ಮಾಡಲು ಸಾಧ್ಯವಾಗದಿದ್ದರೆ ಬೇಡ, ಆದರೆ ನೀವು ಮಾಡುವ ಸಣ್ಣ ಕೆಲಸಗಳನ್ನೇ ಉತ್ತಮ ರೀತಿಯಲ್ಲಿ ಮಾಡಬಹುದು ಎಂದು ಹೇಳಿ ಶುಭ ಹಾರೈಸಿದರು.
ತರಗತಿ ಶಿಕ್ಷಕಿ ಸಾರ ಎಲ್ ಡಿ’ಸೋಜ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು. ಯು.ಕೆ.ಜಿ ವಿದ್ಯಾರ್ಥಿಗಳಾದ ಕುಮಾರಿ ಅಲಿಷ ಮತ್ತು ಮಾಸ್ಟರ್ ಆದ್ಯನ್ ರವರು ತಮ್ಮ ಪೂರ್ವ ಪ್ರಾಥಮಿಕ ಶಿಕ್ಷಣದ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ನೃತ್ಯ, ಹಾಡು ಮುಂತಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಿಕ್ಷಕರು ವಿದ್ಯಾರ್ಥಿಗಳಿಗೆ ವಿದಾಯ ಗೀತೆಯ ಮೂಲಕ ಮುಂದಿನ ಜೀವನಕ್ಕೆ ಶುಭ ಹಾರೈಸಿದರು .
ವೇದಿಕೆಯಲ್ಲಿ ಸೈಂಟ್ ಜೋಕಿಮ್ಸ್ ಚರ್ಚಿನ ಪಾಲನಾ ಮಂಡಳಿಯ ಕಾರ್ಯದರ್ಶಿ ಜೆಸಿಂತಾ ವೇಗಸ್, ಶಾಲೆಯ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಸತೀಶ್ ನಾಯಕ್ , ಸೈಂಟ್ ಆನ್ಸ್ ಶಾಲೆಯ ಪ್ರಾಂಶುಪಾಲವಂ.ಫಾ.ಅಮಿತ್ ಪ್ರಕಾಶ್ ರೋಡ್ರಿಗಸ್ ಹಾಗೂ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ದಕ್ಷ ರವರು ಉಪಸ್ಥಿತರಿದ್ದರು.
ಸೈಂಟ್ ಆನ್ಸ್ ಶಾಲೆಯ ಪ್ರಾಂಶುಪಾಲ ವಂ.ಫಾ.ಅಮಿತ್ ಪ್ರಕಾಶ್ ರವರು ಸ್ವಾಗತಿಸಿ, ಸಂಧ್ಯಾ ವಂದಿಸಿದರು. ಅನುಷಾ ನಿರೂಪಿಸಿದರು.