ಶಿರಾಡಿ: ನಿಂತಿದ್ದ ಕಾರಿಗೆ ಖಾಸಗಿ ಬಸ್ಸು ಡಿಕ್ಕಿ-ಬಸ್ಸು, ಕಾರು ಜಖಂ

ಶೇರ್ ಮಾಡಿ

ನೆಲ್ಯಾಡಿ: ನಿಂತಿದ್ದ ಕಾರಿಗೆ ಖಾಸಗಿ ಬಸ್ಸೊಂದು ಡಿಕ್ಕಿಯಾದ ಪರಿಣಾಮ ಕಾರು ಹಾಗೂ ಬಸ್ಸು ಜಖಂಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಕಡಬ ತಾಲೂಕಿನ ಶಿರಾಡಿಯಲ್ಲಿ ಮೇ.10ರಂದು ಮಧ್ಯರಾತ್ರಿ ನಡೆದಿದೆ.

ಮಂಗಳೂರು ತಾಲೂಕಿನ ಸೂರಿಂಜೆ ಗ್ರಾಮದ ಕೋಟೆಮನೆ ನಿವಾಸಿ ಬರ್ಕತ್ ಅಲಿ ಎಂಬವರು ವಹಾಬ್ ಎಂಬವರನ್ನು ಬೆಂಗಳೂರಿನ ವಿಮಾನ ನಿಲ್ದಾಣದಿಂದ ಕರೆ ತರಲೆಂದು ಕಾರಿನಲ್ಲಿ ಅವರ ಗೆಳೆಯರಾದ ಸವಾದ್ ಮತ್ತು ಸ್ವರೂಫ್‌ರೊಂದಿಗೆ ಸುರತ್ಕಲ್‌ನಿಂದ ಹೊರಟು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೆಂಗಳೂರಿಗೆ ಹೋಗುತ್ತಿರುವಾಗ ಮೇ.10ರಂದು ಮಧ್ಯರಾತ್ರಿ ಶಿರಾಡಿಗೆ ತಲುಪಿದಾಗ ಮೂತ್ರಶಂಕೆಗೆಂದು ಕಾರನ್ನು ರಸ್ತೆ ಬದಿ ನಿಲ್ಲಿಸಿ ಮೂವರು ಕಾರಿನಿಂದ ಇಳಿದು ಮೂತ್ರಶಂಕೆಗೆ ಹೋದ ವೇಳೆ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಪ್ರವೀಣ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಖಾಸಗಿ ಬಸ್ ಡಿಕ್ಕಿಯಾಗಿದೆ.

ಕಾರಿನ ಹಿಂಬದಿಗೆ ಬಸ್ಸು ಡಿಕ್ಕಿಯಾದ ಪರಿಣಾಮ ಕಾರು ಜಖಂಗೊಂಡಿದ್ದು ಬಸ್ಸಿನ ಎದುರು ಭಾಗ ಸ್ವಲ್ಪ ಜಖಂ ಆಗಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಗಾಯವಾಗಿಲ್ಲ. ಈ ಬಗ್ಗೆ ಬರ್ಕತ್ ಅಲಿ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

Leave a Reply

error: Content is protected !!