ಸಂತ ಜಾರ್ಜ್ ವಿದ್ಯಾಸಂಸ್ಥೆ ನೆಲ್ಯಾಡಿ ಕಾಲೇಜಿನ ವಿದ್ಯಾರ್ಥಿ ಪರಿಷತ್ ಉದ್ಘಾಟನೆ

ಶೇರ್ ಮಾಡಿ

ನೇಸರ 29: ಸಂತ ಜಾರ್ಜ್ ವಿದ್ಯಾಸಂಸ್ಥೆ ನೆಲ್ಯಾಡಿಯಲ್ಲಿ ಕಾಲೇಜು ಸಂಸತ್ತಿನ ಕಾರ್ಯಚಟುವಟಿಗಳನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕರಾದ ಅಬ್ರಹಾಂ ವರ್ಗೀಸ್ ವಹಿಸಿದರು ಚುನಾಯಿತ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಅವರ ಜವಾಬ್ದಾರಿ, ಕಾರ್ಯಚಟುವಟಿಗಳಲ್ಲಿ ನಡೆದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿ ಸಂಸತ್ತು ಎಂದರೇನು, ಕಲಿಕೆಯೊಂದಿಗೆ ನಾವು ಉತ್ತಮ ನಾಯಕರಾಗಿ ಹೇಗೆ ಬೆಳೆಯಬಹುದು, ವಿದ್ಯಾರ್ಥಿ ಸಂಘಟನೆಯನ್ನು ನಕರಾತ್ಮಕವಾಗಿ ಬಳಸಿಕೊಳ್ಳದೆ, ತನ್ನ ಹಾಗೂ ಸಂಸ್ಥೆಯ ಬೆಳವಣಿಗೆಗೆ ಗುರುಗಳ ಮಾರ್ಗದರ್ಶನದೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದಾಗಿ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಮುಖ್ಯ ಅತಿಥಿ ಗುಡ್ಡಪ್ಪ ಬಲ್ಯ ಉಪನ್ಯಾಸಕರು ಶ್ರೀ ರಾಮಕುಂಜೇಶ್ವರ ಪ.ಪೂ ಕಾಲೇಜು ರಾಮಕುಂಜ ತಿಳಿಸಿದರು.

                                     ಕಾಲೇಜು ಸಂಸತ್ತಿನ 2021 – 22 ಚುನಾಯಿತ ವಿದ್ಯಾರ್ಥಿ ಪ್ರತಿನಿಧಿಗಳು:

                        ಅಧ್ಯಕ್ಷರಾಗಿ ಮಹಮ್ಮದ್ ಸಾಬಿತ್. ಎಂ, ಪ್ರಧಾನ ಕಾರ್ಯದರ್ಶಿ ನಿತೇಶ್ ಕುಮಾರ್. ಆರ್

                          ಕನ್ನಡ ಮಾಧ್ಯಮ ವಿಭಾಗ: ಉಪಾಧ್ಯಕ್ಷ ಶರತ್ ಕುಮಾರ್, ಕಾರ್ಯದರ್ಶಿ ವೈಶಾಲಿ. ಬಿ

                   ಆಂಗ್ಲ ಮಾಧ್ಯಮ ವಿಭಾಗ: ಉಪಾಧ್ಯಕ್ಷ  ಶರೋನೆ ರೋಯಿ, ಕಾರ್ಯದರ್ಶಿ ಮಿಲನ್ ಕುಮಾರ್

ಚುನಾಯಿತ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲ ಎಲಿಯಸ್. ಎಮ್.ಕೆ ಪ್ರಮಾಣ ವಚನ ಭೋಧಿಸಿದರು, ಕಾಲೇಜಿನ ಕನ್ನಡ ವಿಭಾಗದ ಮುಖ್ಯ ಗುರು ಎಮ್. ವೈ. ತೋಮಸ್ ಸ್ವಾಗತಿಸಿದರು, ಅಂಗ್ಲ ವಿಭಾಗದ ಮುಖ್ಯ ಗುರು ಹರಿಪ್ರಸಾದ್. ಕೆ ಧನ್ಯವಾದವಿತ್ತರು. ಮೌಸಮಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಕಾರ್ಯಕ್ರಮ ನಿರೂಪಣೆ ನೆರೆವೇರಿಸಿದರು, ಸಭೆಯಲ್ಲಿ ಶಿಕ್ಷಕ, ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದರು.

Leave a Reply

error: Content is protected !!