ಭಾರಿ ಗಾಳಿ-ಮಳೆಗೆ ಬಲ್ಯ ಶಾಲೆಯ ಕಟ್ಟಡದ ಮೇಲ್ಚಾವಣಿ ಹಂಚುಗಳು ಹಾರಿ ತರಗತಿಯೊಳಗೆ ನೀರು

ಶೇರ್ ಮಾಡಿ

ಕಡಬ: ಭಾನುವಾರ ಮಧ್ಯಾಹ್ನದಂದು ಬೀಸಿದ ಭಾರಿ ಗಾಳಿ,ಮಳೆಗೆ ಬಲ್ಯ ಹಿ.ಪ್ರಾ.ಶಾಲೆಯ ಕಟ್ಟಡದ ಮೇಲ್ಚಾವಣಿ ಹಂಚುಗಳು ಹಾರಿ ಹೋಗಿ ಹಾನಿಗೊಂಡು ಅಪಾರ ನಷ್ಟ ಸಂಭವಿಸಿದ ಘಟನೆ ನಡೆದಿದೆ.

ಮಳೆಯೊಂದಿಗೆ ಹಠತ್ತನೇ ಬೀಸಿದ ಬಾರಿ ಗಾಳಿಗೆ ಕಟ್ಟಡದ ಮೇಲ್ಚಾವಣಿಯ ಹಂಚಿಗಳು ಗಾಳಿಯೊಂದಿಗೆ ಹಾರಿ ಹೋಗಿದ್ದು, ತರಗತಿಯೊಳಗೆ ನೀರು ಬೀಳುತ್ತಿದೆ. ಇಂದು ಭಾನುವಾರ ಶಾಲೆಗೆ ರಜೆ ಇದ್ದುದ್ದರಿಂದ ಯಾವುದೇ ಅನಾಹುತ ಸಂಭವಿಸಲಿಲ್ಲ. ನಾಳೆ ಶಾಲೆ ನಡೆಯಬೇಕಾದರೆ ಕೊಠಡಿಗಳ ದುರಸ್ತಿ ಅನಿವಾರ್ಯವಾಗಿದೆ.

ಕುಟ್ರುಪ್ಪಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ.ಎ, ಎಸ್ ಡಿ ಎಂ ಸಿ ಅಧ್ಯಕ್ಷ ವಿಲ್ಸನ್.ವಿ.ಟಿ, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜನಾರ್ಧನ ಗೌಡ ಆರಿಗ, ಮಾಜಿ ಅಧ್ಯಕ್ಷ ಪೂರ್ಣೇಶ್.ಬಿ.ಎಂ, ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾ.ಕೆ, ಪಂಚಾಯತ್ ಸದಸ್ಯ ಮೀನಾಕ್ಷಿ ನೆಲ್ಲ, ಎಸ್ ಡಿ ಎಂ ಸಿ ಸದಸ್ಯ ಗಣೇಶ್ ಭಟ್ ದೇವರಡ್ಕ, ಮಾಜಿ ಅಧ್ಯಕ್ಷ ಪಿ.ಟಿ.ಜೋಸೆಫ್, ಉಮಾಮಹೇಶ್ವರಿ ದೇವಸ್ಥಾನದ ಕಾರ್ಯದರ್ಶಿ ನಾರಾಯಣ.ಎನ್ ಕೊಲ್ಲಿಮಾರು ಬಲ್ಯ ಮತ್ತಿತರರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

error: Content is protected !!