ನೇಸರ 30: ಶ್ರೀರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿ ಶಾಲೆಯ ದಶಮಾನೋತ್ಸವ ನಿಮಿತ್ತ ಅಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಕಾರ್ಯಕರ್ತರ ಸಮಾವೇಶ ಇಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ಶ್ರೀಧರ ಗೋರೆ ದಶಮಾನೋತ್ಸವ ಸಮಿತಿಯ ಅಧ್ಯಕ್ಷರು ವಹಿಸಿದರು. ಶಿಶು ಮಂದಿರದ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ನೆರೆವೇರಿಸಿದರು. ಕೃಷ್ಣ ಭಟ್ ಕಾರ್ಯದರ್ಶಿಗಳು ವಿವೇಕಾನಂದ ಸಂಘ ಇವರು ದೀಪ ಬೆಳಗಿದರು. ಜಯಪ್ರಕಾಶ್ ನೆಕ್ರಾಜೆ ಪ್ರಾಸ್ತವಿಕ ಮಾತಿನೊಂದಿಗೆ ಸ್ವಾಗತಿಸಿದರು.
2009ರಲ್ಲಿ ಶಿಶು ಮಂದಿರದಿಂದ ಆರಂಭವಾದ ಈ ಸಂಸ್ಥೆಯು ಪ್ರಸ್ತುತ 7 ಎಕರೆ ಜಾಗದಲ್ಲಿ ಸುಂದರವಾದ ವಿಶಾಲವಾದ ಕಟ್ಟಡಹೊಂದಿದ್ದು. ದಶಮಾನೋತ್ಸವದ ನೆನಪಿಗಾಗಿ 6 ನೂತನ ಕೊಠಡಿಗಳ ಕಟ್ಟಡವನ್ನು ಲೋಕಾರ್ಪಣೆ ಮಾಡಲಿದೆ ಎಂದರು.
ಕರ್ನಾಟಕ ದಕ್ಷಿಣ ಪ್ರಾಂತ್ಯ ಸಹ ಸೇವಾ ಪ್ರಮುಖ್ ಎನ್. ಸೀತಾರಾಮ್ ಮಾತನಾಡುತ್ತ ಸಂಸ್ಕಾರಯುತ ಶಿಕ್ಷಣದ ಮೂಲಕ ಭಾರತೀಯ ಚಿಂತನೆಗಳನ್ನು ಸಾರುವ ಶಿಕ್ಷಣ ಪುನರುತ್ಥಾನದ ಸಂಕಲ್ಪಕ್ಕೆ ಸಮಾಜ ಕೈಜೋಡಿಸಬೇಕು, ಮುಂದಿನ ಪೀಳಿಗೆಯ ಭವಿಷ್ಯದ ಹಾದಿಗೆ ಇದು ಅತ್ಯಂತ ಮಹತ್ವದ್ದು ಎಂದರು. ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ದಶಮಾನೋತ್ಸವ ನಿಮಿತ್ತ ನೂತನವಾಗಿ ನಿರ್ಮಿಸಿದ ವಿದ್ಯಾಮಂದಿರ ಲೋಕಾರ್ಪಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು ಮತ್ತು ಐವತ್ತು ಸಾವಿರ ರೂ ದೇಣಿಗೆ ನೀಡುವುದಾಗಿ ಘೋಷಿಸಿದರು. 08/12/2021 ರ ಬುಧವಾರ ಗಣ್ಯರ ಉಪಸ್ಥಿತಿಯಲ್ಲಿ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ.
ದಶಮಾನೋತ್ಸವ ಸಮಿತಿಯ ಅಧ್ಯಕ್ಷರು ಶ್ರೀಧರ ಗೋರೆ ಐವತ್ತು ಸಾವಿರ ರೂ ದೇಣಿಗೆ ನೀಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣಭಟ್ ಶ್ರೀರಾಮ ವಿದ್ಯಾಲಯದ ಎಲ್ಲಾ ಸದುದ್ದೇಶಗಳಿಗೆ ಬೆಂಬಲವಿದೆ ಎಂದರು. ವೇದಿಕೆಯಲ್ಲಿ ಕೃಷ್ಣ ಶೆಟ್ಟಿ ಕಡಬ, ನಿರ್ದೇಶಕರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ವೆಂಕಟ್ರಮಣ ರಾವ್ ಕಡಬ ಪ್ರಾಂತ ವಿದ್ಯಾಭಾರತಿ ಪ್ರಮುಖ, ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಚೇತನ, ಎನ್.ವಿ ವ್ಯಾಸ, ರವಿಚಂದ್ರ ಹೂಸವಕ್ಲು, ಬಾಲಕೃಷ್ಣ ಬಾಣಜಾಲು, ಶಾಲಾ ಮುಖ್ಯಗುರು ಗಣೇಶ್ ವಾಗ್ಲೆ, ಸುಬ್ರಾಯ, ಪುನೀತ ಉಪಸ್ಥಿತರಿದ್ದರು.
ನಂತರ ಗ್ರಾಮ ಸಮಿತಿಗಳನ್ನು ರಚಿಸಿ ಎಲ್ಲರಿಗೂ ಆಮಂತ್ರಣ ಪತ್ರಿಕೆ ವಿತರಿಸಲಾಯಿತು. ಗ್ರಾಮದ ಪ್ರತಿಯೊಂದು ಮನೆಮನೆಗೂ ಆಮಂತ್ರಣ ಪತ್ರಿಕೆ ನೀಡುವ ಸಂಕಲ್ಪ ಮಾಡಲಾಯಿತು.
ಸಭೆಯಲ್ಲಿ ಊರ ಗಣ್ಯರು, ಶ್ರೀರಾಮ ವಿದ್ಯಾಲಯದ ಪೋಷಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಬಾಲಕೃಷ್ಣ ಬಾಣಜಾಲು ವಂದಿಸಿದರು, ಅನಿಲ್ ಅಕ್ಕ ಪಾಡಿ ಕಾರ್ಯಕ್ರಮ ನಿರೂಪಿಸಿದರು.