Accident News: ಹಾಸನದಲ್ಲಿ ಜೀಪ್‌ ಅಪಘಾತ; ಪ್ರೊಬೇಷನರಿ ಐಪಿಎಸ್‌ ಅಧಿಕಾರಿ ಸಾವು

ಶೇರ್ ಮಾಡಿ

ಪೊಲೀಸ್‌ ಬೊಲೆರೋ ಜೀಪ್‌ ಅಪಘಾತಕ್ಕೀಡಾಗಿ ಪ್ರೊಬೇಷನರಿ ಐಪಿಎಸ್‌ ಅಧಿಕಾರಿ ಹರ್ಷವರ್ಧನ್ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ಭಾನುವಾರ (ಡಿ.1 ರಂದು) ರಾತ್ರಿ ನಡೆದಿದೆ.

ಮಧ್ಯಪ್ರದೇಶದ ಜಬಲ್‌ಪುರ ಮೂಲದ ಕರ್ನಾಟಕದ ಸೇವೆಗೆ ಆಯ್ಕೆಯಾಗಿದ್ದ 2023ನೇ ಸಾಲಿನ ಐಪಿಎಸ್‌ ಅಧಿಕಾರಿ ಹರ್ಷವರ್ಧನ್, ಮೈಸೂರಿನ ಪೊಲೀಸ್‌ ತರಬೇತಿ ಕೇಂದ್ರದಲ್ಲಿ ತರಬೇತಿ ಪೂರ್ಣಗೊಳಿಸಿ, ಹಾಸನ ಜಿಲ್ಲಾ ಎಎಸ್ಪಿಯಾಗಿ ಸೋಮವಾರ ಕಾರ್ಯಭಾರ ವಹಿಸಿಕೊಳ್ಳಬೇಕಿತ್ತು. ಅವರನ್ನು ಹಾಸನದ ಡಿಎಆರ್‌ ಕಾನ್ಸ್‌ಟೇಬಲ್‌ ಮಂಜೇಗೌಡ ಮೈಸೂರಿ ನಿಂದ ಹಾಸನಕ್ಕೆ ಕರೆತರುತ್ತಿದ್ದಾಗ ಬೊಲೆರೋ ಜೀಪ್‌ ಟೈರ್‌ ಸ್ಫೋಟಗೊಂಡು, ಪಲ್ಟಿಯಾಗಿದೆ. ಜೀಪ್‌ ನಜ್ಜುಗುಜ್ಜಾಗಿದ್ದು, ಗಂಭೀರವಾಗಿ ಗಾಯಗೊಂಡ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Leave a Reply

error: Content is protected !!