“ವಾತ್ಸಲ್ಯ” ಮನೆ ಹಸ್ತಾಂತರ – ಬಡ ಕುಟುಂಬಕ್ಕೆ ಆಶಾಕಿರಣ

ಶೇರ್ ಮಾಡಿ

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ ವಲಯದ ಹತ್ಯಡ್ಕ ಬಿ ಕಾರ್ಯಕ್ಷೇತ್ರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ “ವಾತ್ಸಲ್ಯ” ಕಾರ್ಯಕ್ರಮದಡಿ ಪ್ರತಿ ತಿಂಗಳು ಮಾಸಾಶನ ಪಡೆಯುತ್ತಿರುವ ಕಾಳಿ ಎಂಬವರು ವಾಸಿಸಲು ತಕ್ಕ ಮನೆಯನ್ನು ಹೊಂದಿರದೆ ಪರದಾಡುತ್ತಿದ್ದರು. ಮಾತೃಶ್ರೀ ಹೇಮಾವತಿ ಅಮ್ಮನವರ ಕನಸಿನ ಕಾರ್ಯಕ್ರಮವಾದ ವಾತ್ಸಲ್ಯ ಕಾರ್ಯಕ್ರಮದಡಿ ಅವರಿಗಾಗಿ ನೂತನ ಗೃಹವನ್ನು ನಿರ್ಮಿಸಿ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿಗಳಾದ ಸುರೇಂದ್ರ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. “ವಾತ್ಸಲ್ಯ” ಮನೆಯನ್ನು ಬಿಜೆಪಿ ಧರ್ಮಸ್ಥಳ ಮಹಾಶಕ್ತಿಕೇಂದ್ರದ ಕಾರ್ಯದರ್ಶಿ ಗಣೇಶ್ ಹೊಸ್ತೋಟ ಅವರು ನಾಮಫಲಕ ಅನಾವರಣಗೊಳಿಸಿ “ಪರಮಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರು ಹಲವಾರು ಆಸಹಾಯಕರ ಪಾಲಿಗೆ ಬೆಳಕನ್ನು ನೀಡುತ್ತಿದ್ದಾರೆ.
ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿ ಕಾಳಿಯವರ ಬದುಕಿಗೆ ಹೊಸ ಬೆಳಕು ತಂದರು. ವಾಸಿಸಲು ಸರಿಯಾದ ಮನೆ ಇಲ್ಲದೆ ಜೋಪಡಿಯಲ್ಲಿ ವಾಸಿಸುತ್ತಿದ್ದ ಕಾಳಿಯವರಿಗೆ ಕ್ಷೇತ್ರದ ಸಹಕಾರದಿಂದ ಈ ಸುಸಜ್ಜಿತ ವಾತ್ಸಲ್ಯ ಮನೆ ನಿರ್ಮಾಣ ಮಾಡಲಾಗಿದ್ದು, ಇದು ಹಲವಾರು ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು.

ಸಿ.ಎ. ಬ್ಯಾಂಕ್ ನಿರ್ದೇಶಕರಾದ ಧರ್ಮರಾಜ್ ಅವರು ದೀಪ ಬೆಳಗಿಸುವ ಮೂಲಕ ಸಮಾರಂಭಕ್ಕೆ ಶುಭಾರಂಭ ಮಾಡಿ, “ವಾತ್ಸಲ್ಯ ಕಾರ್ಯಕ್ರಮದಿಂದ ನಮ್ಮ ಗ್ರಾಮಕ್ಕೆ ಮನೆ ನಿರ್ಮಾಣವಾಗಿರುವುದು ತುಂಬಾ ಅನುಕೂಲಕರವಾಗಿದೆ” ಎಂದು ತಿಳಿಸಿದರು.

ಜನಜಾಗೃತಿ ತಾಲೂಕು ವೇದಿಕೆ ಸದಸ್ಯರಾದ ಮಂಜುಳಾ ಕಾರಂತ್, ಚೆನ್ನಪ್ಪ ಗೌಡ, ಗಣ್ಯರಾದ ಮುರಳೀಧರ ಶೆಟ್ಟಿಗಾರ್, ಒಕ್ಕೂಟ ಅಧ್ಯಕ್ಷರಾದ ಸುನಂದಾ, ಪದಾಧಿಕಾರಿಗಳಾದ ಸರೋಜಿನಿ, ಮೇಲ್ವಿಚಾರಕರಾದ ಶಶಿಕಲಾ, ಸಮನ್ವಯಾಧಿಕಾರಿ ಮಧುರಾ ವಸಂತ್, ಜನಜಾಗೃತಿ ಗ್ರಾಮ ಸಮಿತಿ ಸದಸ್ಯರಾದ ನಾರಾಯಣ ಹಾಗೂ ಸೇವಾಪ್ರತಿನಿಧಿಗಳಾದ ರೂಪ, ಯಮುನಾ, ಗಾಯತ್ರಿ ಮತ್ತಿತರರು ಉಪಸ್ಥಿತರಿದ್ದರು.

  •  

Leave a Reply

error: Content is protected !!