ಅಕ್ರಮ ಮದ್ಯ ಮಾರಾಟ ಯತ್ನ – ಧರ್ಮಸ್ಥಳ ಪೊಲೀಸರು ದಾಳಿ, ಮದ್ಯ ಸಹಿತ ವ್ಯಕ್ತಿಯ ಬಂಧನ

ಶೇರ್ ಮಾಡಿ

ಕೊಕ್ಕಡ: ನಿಡ್ಲೆ ಗ್ರಾಮದ ಕುದ್ರಾಯ ಬಸ್ ನಿಲ್ದಾಣದ ಅಂಗಡಿ ಬಳಿ ಅಕ್ರಮವಾಗಿ ಮಧ್ಯ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಖಚಿತ ಮಾಹಿತಿ ಪಡೆದ ಧರ್ಮಸ್ಥಳ ಪೊಲೀಸರು ದಾಳಿ ಮಾಡಿ ಮದ್ಯ ಸಮೇತ ಆರೋಪಿಯನ್ನು ಸೆ.12ರಂದು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕಾಯರ್ತಡ್ಕ ಪಂಚಮಿ ಪಾದೆ ಮನೆಯ ಶಾಂತಪ್ಪ(51) ಎಂದು ಗುರುತಿಸಲಾಗಿದ್ದು. ಮಾಹಿತಿ ಪಡೆದ ಧರ್ಮಸ್ಥಳ ಪಿಎಸ್ಐ ಸಿಕಂದರ್ ಪಾಷಾ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ದಾಳಿ ನಡೆಸಿ, ಶಾಂತಪ್ಪನ ವಶದಿಂದ ಪ್ಲಾಸ್ಟಿಕ್ ಗೋಣಿ ಚೀಲದಲ್ಲಿದ್ದ 90 ML ಮೈಸೂರು ಲಾನ್ಸರ್ ವಿಸ್ಕಿ ಬ್ರಾಂಡ್‌ನ ಒಟ್ಟು 36 ಸ್ಯಾಚೆಟ್‌ಗಳು(3.240 ಲೀಟರ್ ಮದ್ಯ) ವಶಪಡಿಸಿಕೊಂಡಿದ್ದಾರೆ. ಮದ್ಯದ ಅಂದಾಜು ಮೌಲ್ಯ ರೂ.1800 ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಯಾವುದೇ ಪರವಾನಿಗೆ ಇಲ್ಲದೆ ಮದ್ಯವನ್ನು ಶೇಖರಿಸಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಕಾರಣ ಆತನ ವಿರುದ್ಧ ಕರ್ನಾಟಕ ಅಬಕಾರಿ ಕಾಯಿದೆ 1965ರ ಪ್ರಕಾರ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪೊಲೀಸ್ ಠಾಣೆಯ ಪ್ರಭಾರ ಪಿಎಸ್ಐ ಸಿಕಂದರ್ ಪಾಷಾ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಶೇಖರ ಗೌಡ ಮತ್ತು ತಂಡವು ದಾಳಿ ನಡೆಸಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  •  

Leave a Reply

error: Content is protected !!