ನೇಸರ ಮಾ.21: ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ) ಇದರ ವತಿಯಿಂದ ಮಾ. 21ನೇ ಸೋಮವಾರ ಕಾರ್ಬನ್ ಫೈಬರ್ ದೋಟಿ ಮೂಲಕ ಅಡಿಕೆ ಕೊಯ್ಲು ಮತ್ತು ಔಷಧ ಸಿಂಪಡಣೆ ತರಬೇತಿ ಕಾರ್ಯಕ್ರಮ ಗೌರಿಜಾಲು (ಕೊಲ್ಯೊಟ್ಟು) ಗೌರಿಜಾಲು ಜಯರಾಮ ಶೆಟ್ಟಿ ಅವರ ಮನೆಯಲ್ಲಿ ನಡೆಯಿತು.
ಕ್ಯಾಂಪ್ಕೋ ಸಂಸ್ಥೆಯ ಉಪಾಧ್ಯಕ್ಷರಾದ ಶಂಕರನಾರಾಯಣ ಖಂಡಿಗ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ರೈತರಿಗೆ ಪರಿಣಿತ ಕೂಲಿಯಾಳುಗಳ ಸಮಸ್ಯೆ ಇರುವುದರಿಂದ, ಇದಕ್ಕೆ ಪರ್ಯಾಯವಾಗಿ ಹೊಸದಾಗಿ ಆವಿಷ್ಕಾರಗೊಂಡ ಕಾರ್ಬನ್ ಫೈಬರ್ ದೋಟಿ ರೈತರಿಗೆ ವರದಾನವಾಗಲಿದೆ ಎಂದರು ಹಾಗೂ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಉಮೇಶ್ ಶೆಟ್ಟಿ ಪಟ್ಟೆ ವಹಿಸಿದರು. ಗೌರಿಜಾಲು ಜಯರಾಮ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತರಬೇತುದಾರರಾಗಿ ಆರ್ ಜಿ ಹೆಗ್ಡೆ, ರಮೇಶ್ ಭಟ್ ಕಾರ್ಬನ್ ಫೈಬರ್ ದೋಟಿ ಮೂಲಕ ಅಡಿಕೆ ಕೊಯ್ಲು ಮತ್ತು ಔಷಧ ಸಿಂಪಡನೆ ಮಾಡುವ ಬಗ್ಗೆ ತರಬೇತಿಯನ್ನು ರೈತರಿಗೆ ನೀಡಿದರು.
ಕಾರ್ಯಕ್ರಮದಲ್ಲಿ ಕುಶಾಲಪ್ಪ ಉಪಾಧ್ಯಕ್ಷರು ಪ್ರಾ.ಕೃ.ಪ.ಸ.ಸಂಘ ನೆಲ್ಯಾಡಿ, ನಿರ್ದೇಶಕರಾದ ಬಾಲಕೃಷ್ಣ ಬಾಣಜಾಲು, ಪ್ರಶಾಂತ್.ರೈ ಗೋಳಿತೊಟ್ಟು, ಗುರುರಾಜ್ ಭಟ್, ಸುಮಿತ್ರ, ಸುಲೋಚನಾ ಭಟ್, ಕೃಷಿಕರಾದ ಗುಡ್ಡಪ್ಪ ಶೆಟ್ಟಿ, ಕೆ ವಿ ವ್ಯಾಸ, ಧರ್ಣಪ್ಪ ಹೆಗ್ಡೆ, ಜಿನ್ನಪ್ಪ ಗೌಡ ಪೊಸೋಲಿಕೆ, ರತ್ನಾಕರ ಶೆಟ್ಟಿ, ಸೀತಾರಾಮ ಕಾನಮನೆ, ತುಕಾರಾಮ ಶೆಟ್ಟಿ, ಅನಿಲ ಕುಶಾಲಪ್ಪ ಗೌಡ, ಪುಷ್ಪರಾಜ ಶೆಟ್ಟಿ, ಸಂಜೀವ ನಾಯ್ಕ್, ಬಾಲಕೃಷ್ಣ ಕೊಲ್ಯಸಾಗು, ಪ್ರಸನ್ನ ಹೊಸವಕ್ಲು, ಸಿಬ್ಬಂದಿಗಳಾದ ಮಹೇಶ್ ಹಾಗೂ ನಾಗೇಶ್ ಮೊದಲಾದವರು ಉಪಸ್ಥಿತರಿದ್ದರು.
ಸುಲೋಚನ ಪ್ರಾರ್ಥನೆ ನೆರವೇರಿಸಿದರು, ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಸ್ವಾಗತಿಸಿದರು, ಬಾಲಕೃಷ್ಣ ಬಾಣಜಾಲು ಧನ್ಯವಾದ ವಿತ್ತರು, ಜಯಾನಂದ ಬಂಟ್ರಿಯಲ್ ಕಾರ್ಯಕ್ರಮವನ್ನು ನಿರೂಪಿಸಿದರು.