ಕಾಂಚನ ಪ್ರೌಢಶಾಲೆ 37 ವರ್ಷದ ನಂತರ ನವೀಕರಣ

ಶೇರ್ ಮಾಡಿ

ನೇಸರ ಆ.31: ದಿವಂಗತ ಕಾಂಚನ ಸುಬ್ಬರತ್ನಂ ತಮ್ಮ ತಂದೆಯಾದ ಶ್ರೀ ಕಾಂಚನ ವೆಂಕಟ ಸುಬ್ರಹ್ಮಣ್ಯಂ ಹೆಸರಿನಲ್ಲಿ ಕಾಂಚನದಲ್ಲಿ ಪ್ರೌಢಶಾಲೆ ಯನ್ನು 1985 ರಲ್ಲಿ ಸ್ಥಾಪಿಸಿದರು. ತದನಂತರ ಶಾಲಾ ಆಡಳಿತವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನ್ ಸೊಸೈಟಿ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಲಾಗಿತ್ತು.
ಇದೀಗ ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆ 37 ವರ್ಷದ ನಂತರ ನವೀಕರಣಗೊಂಡು ವಿದ್ಯಾರ್ಥಿಗಳ ಪಾಠ ಪ್ರವಚನಗಳಿಗೆ ಸಜ್ಜುಗೊಂಡಿದೆ.

ಧರ್ಮಸ್ಥಳ ಡಾ.ವೀರೇಂದ್ರ ಹೆಗ್ಗಡೆಯವರ ಆಶಯದೊಂದಿಗೆ, ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿರುವ ಡಿ ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ಸುಮಾರು 25 ಲಕ್ಷ ರೂಪಾಯಿಗಳಿಂದ ಶಾಲೆಯ ತರಗತಿ ಕೋಣೆಗಳು, ಮುಖ್ಯೋಪಾಧ್ಯಾಯರ ಕೊಠಡಿ, ಅಧ್ಯಾಪಕರ ಕೊಠಡಿಗಳಿಗೆ, ಟೈಲ್ಸ್ ಗಳ ನೆಲಹಾಸು, ಸುಣ್ಣ ಬಣ್ಣ, ವಿದ್ಯುತ್ ವಯರಿಂಗ್ ಅಳವಡಿಸುವಿಕೆ, ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶೌಚಾಲಯಗಳ ನಿರ್ಮಾಣ, ಅಧ್ಯಾಪಕರ ಶೌಚಾಲಯ, ನೀರಿನ ಸೌಲಭ್ಯ, ಶಾಲಾ ಸಭಾಂಗಣ, ಕಂಪ್ಯೂಟರ್ ಕೊಠಡಿ, ಅಕ್ಷರ ದಾಸೋಹ ಕೊಠಡಿಗಳು ನವೀಕರಣಗೊಂಡು ವಿದ್ಯಾರ್ಥಿಗಳ ಪಾಠ ಪ್ರವಚನಗಳಿಗೆ ಸಜ್ಜುಗೊಂಡಿದೆ. ಶಾಲಾ ಮುಖ್ಯ ಗುರು ಸೂರ್ಯ ಪ್ರಕಾಶ ಉಡುಪ ಮುಂದಾಳತ್ವದಲ್ಲಿ ಶಾಲೆ ಸರ್ವ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಸೆಪ್ಟೆಂಬರ್ 1,2022 ಗುರುವಾರ ರಂದು ಗಣ ಹೋಮದೊಂದಿಗೆ ದೀಪ ಬೆಳಗಿಸಿ ವಿದ್ಯಾರ್ಥಿಗಳಿಗೆ ನವೀಕರಣಗೊಂಡ ತರಗತಿಯಲ್ಲಿ ಪಾಠ ಪ್ರವಚನಗಳಿಗೆ ಚಾಲನೆ ಸಿಗಲಿದೆ. ಕಾರ್ಯಕ್ರಮದಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರಾದ ವೇಣುಗೋಪಾಲ ಕುಳ್ಳಾಜೆ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಕೃಷ್ಣ ಪ್ರಸಾದ್ ಅಂಬಟೆಮಾರ್, ಶಾಲಾ ಶಿಕ್ಷಕರಾದ ಜ್ಞಾನೇಶ, ಜಯಲಕ್ಷ್ಮಿ, ವಿಜಯಲಕ್ಷ್ಮಿ, ಮಂಜುಳಾ, ಅಕ್ಷತಾ, ಸುಜಾತ, ಚರಣ್, ಪ್ರತಿಭಾ,ರತ್ನಕುಮಾರಿ ಮತ್ತು ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

error: Content is protected !!