ಸರಳ ಸಂಸ್ಕೃತ ವ್ಯಾಕರಣ ಪುಸ್ತಕ ಬಿಡುಗಡೆ

ಶೇರ್ ಮಾಡಿ

ಉಜಿರೆ: ಉಜಿರೆಯ ಎಸ್.ಡಿ.ಎಂ ಕಲಾ ಕೆಂದ್ರದ ಮಾರ್ಗದರ್ಶಕಿ ಸೋನಿಯಾ ವರ್ಮ ಹಾಗೂ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಐಟಿ ಮತ್ತು ವಸತಿ ನಿಲಯಗಳ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪೂರನ್ ವರ್ಮ ಅವರು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಪ್ರಾಕ್ತನ ಕಾರ್ಯದರ್ಶಿ ಹಾಗೂ ಸಾಹಿತ್ಯ ಕಲೆಗಳ ಪೋಷಕರೂ ಆಗಿದ್ದ ದಿ.ಯಶೋವರ್ಮರವರ ಸ್ಮಾರಕದ ಎದುರು ಉಜಿರೆಯ ಎಸ್.ಡಿ.ಎಂ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ ಐತಾಳ್ ಇವರು ಬರೆದು ಪ್ರಕಟಿಸಿದ ‘ಸರಳ ಸಂಸ್ಕೃತ ವ್ಯಾಕರಣ’ ಪುಸ್ತಕವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಲೇಖಕ ಡಾ.ಪ್ರಸನ್ನಕುಮಾರ ಐತಾಳ್, ಕಲಾ ಕೇಂದ್ರದ ತೃಪ್ತ ಜೈನ್, ಯಶವಂತ್ ಬೆಳ್ತಂಗಡಿ, ವಿದುಷಿ ಚೈತ್ರಾ ಧರ್ಮಸ್ಥಳ ಇವರು ಉಪಸ್ಥಿತರಿದ್ದರು.

Leave a Reply

error: Content is protected !!