ಕಾಡಾನೆಗಳ ದಾಳಿ: ಅಪಾರ ಕೃಷಿಹಾನಿ

ಶೇರ್ ಮಾಡಿ

ನೇಸರ ಜೂ.28: ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠದ ಮಜಲು ಎಂಬಲ್ಲಿ ಅನಂತರಾವ್, ಪ್ರಕಾಶ್ ನಾರಾಯಣ ರಾವ್, ರವೀಂದ್ರ ರಾವ್ ಇವರ ಕೃಷಿ ತೋಟಗಳಿಗೆ ಸೋಮವಾರ ರಾತ್ರಿ ದಾಳಿ ನಡೆಸಿದ ಕಾಡಾನೆಗಳು ಸುಮಾರು 130 ಅಡಕೆ ಮರ, 6 ತೆಂಗಿನ ಮರ ಹಾಗೂ ನೂರಾರು ಬಾಳೆಗಿಡಗಳನ್ನು ಧ್ವಂಸಮಾಡಿವೆ.


ಮರಿಯಾನೆ ಸಹಿತ ಆರರಿಂದ ಏಳು ಕಾಡಾನೆಗಳು ತೋಟಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು ಉಪ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

ಲಕ್ಷಾಂತರ ರೂ.ಹಾನಿ
ಈ ವರ್ಷ ಜನವರಿ ಬಳಿಕ ಇವರ ಕೃಷಿ ತೋಟಗಳಿಗೆ ಒಂಟಿಸಲಗ, ಹಿಂಡು ಸಹಿತ 10ಕ್ಕಿಂತ ಅಧಿಕ ಬಾರಿ ಆನೆಗಳು ದಾಳಿ ಇಟ್ಟಿದ್ದು ಒಂದು ಸಾವಿರದಷ್ಟು ಅಡಕೆ ಮರ, 50 ತೆಂಗಿನಮರ, ಅಪಾರ ಪ್ರಮಾಣದ ಬಾಳೆ ಕೃಷಿ ನಾಶವಾಗಿ ಲಕ್ಷಾಂತರ ರೂ.ಮೌಲ್ಯದ ಹಾನಿ ಉಂಟಾಗಿದೆ. ಈ ಪ್ರದೇಶದಲ್ಲಿ ಆನೆ ದಾಳಿ ತಡೆಗಟ್ಟಲು ಕೃಷಿಕರು ಮುಂಜಾಗ್ರತೆ ಕೈಗೊಂಡರೂ ನಿರಂತರ ದಾಳಿ ಮುಂದುವರೆಯುತ್ತಿದೆ. ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಇಲ್ಲಿನ ಕೃಷಿಕರು ಆಗ್ರಹಿಸಿದ್ದಾರೆ.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

error: Content is protected !!