ಮಕ್ಕಳಿಗೆ ಆಸ್ತಿ ಮಾಡಿಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ – ರೇ.ಫಾ.ಅರುಣ್ ವಿಲ್ಸನ್ ಲೋಬೋ

ಶೇರ್ ಮಾಡಿ

ನೇಸರ ಜು02: ನೂಜಿಬಾಳ್ತಿಲ ಬೆಥನಿ ಪದವಿ ಪೂರ್ವ ಕಾಲೇಜುನ ಸಭಾಂಗಣದಲ್ಲಿ ಪಾಲಕರಿಗಾಗಿ ಕಾರ್ಯಾಗಾರವನ್ನು ಏರ್ಪಡಿಸಲಾಯಿತು.
ಕಾರ್ಯಾಗಾರವನ್ನು ಸಂತ ಜೋಕಿಮರ ವಿದ್ಯಾ ಸಂಸ್ಥೆ ಕಡಬ ಇದರ ಸಂಚಾಲಕರಾದ ರೇ.ಫಾ.ಅರುಣ್ ವಿಲ್ಸನ್ ಲೋಬೋ ದೀಪ ಬೆಳಗಿಸಿ ಉದ್ಘಾಟಿಸಿ ಪಾಲಕರ ಜವಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು. ಮಕ್ಕಳಿಗೆ ಆಸ್ತಿ ಮಾಡಿಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕೆಂದು ಕರೆನೀಡಿದರು. ಸಂಸ್ಕಾರಯುತ ಶಿಕ್ಷಣ ಇಂದಿನ ಅವಶ್ಯಕತೆ ಎಂಬುದಾಗಿ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸದಾನಂದ ಗೌಡ ಸಾಂತ್ಯಡ್ಕ, ಅಧ್ಯಕ್ಷರು ರಕ್ಷಕ-ಶಿಕ್ಷಕ ಸಂಘ’ ನೂಜಿಬಾಳ್ತಿಲ ದಂತಹ ಗ್ರಾಮೀಣ ಭಾಗದಲ್ಲಿ ಶಿಸ್ತು ಬದ್ಧ ಶಿಕ್ಷಣವನ್ನು ನೀಡುತ್ತಿರುವ ಸಂಸ್ಥೆಯನ್ನು ಕೊಂಡಾಡಿದರು ಹಾಗು ಕಳೆದ ಶೈಕ್ಷಣಿಕ ವರ್ಷ ಉತ್ತಮ ಪಲಿತಾಂಶ ದಾಖಲಿಸಿದ ಸಂಸ್ಥೆಗೆ ಪಾಲಕರ ಪರವಾಗಿ ಕೃತಜ್ಞತೆ ಅರ್ಪಿಸಿದರು. ಸಂಸ್ಥೆಯ ಸ್ಥಳೀಯ ಸಂಚಾಲಕರಾದ ರೇ.ಫಾ.ಝಕರಿಯಾಸ್ ನಂದಿಯಾಟ್ ಅವರು ಪಾಲಕರ ಸಹಕಾರದಿಂದ ಸಂಸ್ಥೆ ಎಲ್ಲಾ ರಂಗಗಳಲ್ಲಿಯೂ ಯಶಸ್ಸನ್ನು ಗಳಿಸುತ್ತಿದ್ದು ಎಲ್ಲರ ಸಹಕಾರವನ್ನ ಮುಂದೆಯೂ ನಿರೀಕ್ಷಿಸಲಾಗುವುದು ಎಂದರು. ರಕ್ಷಕ- ಶಿಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ರೇವತಿ. ಸಂಸ್ಥೆಯ ಹಿರಿಯ ವಿಧ್ಯಾಥಿ೯ ಹಾಗು ನೂತನವಾಗಿ ಸಂಸ್ಥೆಯ ಹಣಕಾಸು ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ರೇ.ಪಾ ಡೇವಿಡ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

2022 -23 ನೇ ಸಾಲಿನ ರಕ್ಷಕ ಶಿಕ್ಷಕ ಸಂಘವನ್ನು ಪುನರ್ರಚಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗು ಸಹಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಸುಮಾರು 200 ಕ್ಕಿಂತಲೂ ಹೆಚ್ಚು ಪಾಲಕರು ಕಾರ್ಯಕ್ರಮದ ಪ್ರಯೋಜನ ಪಡೆದರು.

ಪ್ರಾಂಶುಪಾಲರಾದ ಜಾರ್ಜ್ ಟಿ ಎಸ್., ಸ್ವಾಗತಿಸಿ ಶೈಕ್ಷಣಿಕ ಮಾಹಿತಿಯನ್ನು ನೀಡಿದರು. ಹಿರಿಯ ಸಹ ಶಿಕ್ಷಕರಾದ ಸುಬ್ರಹ್ಮಣ್ಯ ಭಟ್ ಧನ್ಯವಾದ ಸಮರ್ಪಿಸಿದರು. ತೋಮಸ್ ಎ.ಕೆ. ಕಾರ್ಯಕ್ರಮ ನಿರೂಪಸಿದರು.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

error: Content is protected !!