ಕಡಬ : ಆಟೋ ರಿಕ್ಷಾ – ಟಾಟಾ ಏಸ್ ನಡುವೆ ಅಪಘಾತ ➤ ರಿಕ್ಷಾ ಚಾಲಕ ಗಂಭೀರ

ಶೇರ್ ಮಾಡಿ

ನೇಸರ ಜು.08: ಕಡಬ ಜು.08. ಟಾಟಾ ಏಸ್ ಹಾಗೂ ಆಟೋ ರಿಕ್ಷಾ ನಡುವೆ ಅಪಘಾತ ಸಂಭವಿಸಿದ ಪರಿಣಾಮ ರಿಕ್ಷಾ ಚಾಲಕ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪದವು ಸಮೀಪದ ಎರ್ಮಾಳ ಎಂಬಲ್ಲಿ ಶುಕ್ರವಾರ ಅಪರಾಹ್ನ ನಡೆದಿದೆ.
ಗಾಯಾಳು ಚಾಲಕನನ್ನು ಮರ್ಧಾಳ ಸಮೀಪದ ಸುಳ್ಯ ಮೇಪತ್ತಪಾಲು ನಿವಾಸಿ ಹರೀಶ್ ಎಂದು ಗುರುತಿಸಲಾಗಿದೆ. ಕುಂತೂರು ಪದವು ಸಮೀಪದ ಎರ್ಮಾಳ ಎಂಬಲ್ಲಿ ಈ ಘಟನೆ ಸಂಭವಿಸಿದ್ದು, ಗಂಭೀರ ಗಾಯಗೊಂಡ ರಿಕ್ಷಾ ಚಾಲಕನನ್ನು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವೀಕ್ಷಿಸಿ SUBSCRIBERS ಮಾಡಿ🙏🏻

Leave a Reply

error: Content is protected !!