ನೇಸರ ಜು.12: ಭಾರಿ ಮಳೆ ಹಿನ್ನೆಲೆ ಕೊಕ್ಕಡ ಗ್ರಾಮದ ಎರಡು ಕಡೆಗಳಲ್ಲಿ ಜುಲೈ 12ರಂದು ಮನೆ ಕುಸಿತವಾಗಿದೆ. ಗ್ರಾಮದ ಬರಮೇಲು ನಿವಾಸಿ ಕೃಷ್ಣ ನಾಯ್ಕ ಅವರ ಮನೆಗೆ ಭಾಗಷಃ ಹಾನಿಯಾಗಿದೆ. ಹಳ್ಳಿಂಗೇರಿ ನಿವಾಸಿ ಯಮುನಾ ಮಡಿವಾಳರವರ ಮನೆಯ ಹೊರಂಗಣ ಕುಸಿತವಾಗಿದ್ದು ಚಾವಣಿ ಕೆಳಗೆ ಬಿದ್ದಿದೆ. ಮನೆಯವರೆಲ್ಲರೂ ಪ್ರಾಣಾಪಯದಿಂದ ಪಾರಾಗಿದ್ದಾರೆ.
ಯಮುನಾ ಮಡಿವಾಳರ ಮನೆಯವರು ಹಳ್ಳಿಂಗೇರಿಯ ಸಮುದಾಯ ಭವನದಲ್ಲಿ ಆಶ್ರಯವನ್ನು ಪಡೆಯುತ್ತಿದ್ದಾರೆ.
ಹಾನಿಯಲ್ಲಿ ಸುಮಾರು 8 ರಿಂದ 10 ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ವಿಪರೀತ ಮಳೆಯ ಕಾರಣ ಮನೆಯ ಗೋಡೆಗಳಿಗೆ ನೀರು ಬಿದ್ದು ಗೋಡೆಯಲ್ಲಿ ಕುಸಿತ ಉಂಟಾದ ಕಾರಣ ಮನೆಗೆ ಹಾನಿಯಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಕೊಕ್ಕಡ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಭೇಟಿ ನೀಡಿದ್ದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.