ಕಡಬ ಸರಕಾರಿ ಪದವಿಪೂರ್ವ ಕಾಲೇಜಿನ 2022-23ನೇ ಸಾಲಿನ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭ

ಶೇರ್ ಮಾಡಿ

ನೇಸರ ಜು.15: ಕಡಬ ಸರಕಾರಿ ಪದವಿಪೂರ್ವ ಕಾಲೇಜಿನ 2022-23ನೇ ಸಾಲಿನ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭ ದಿನಾಂಕ 14/7/2022ರಂದು ಕಾಲೇಜಿನ ಸಭಾಂಗಣದಲ್ಲಿ ಪ್ರಾಂಶುಪಾಲರಾದ ಜನಾರ್ದನ ಕೆ.ಎನ್. ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಡಬ ತಹಸೀಲ್ದಾರರು ಮತ್ತು ದಂಡಾಧಿಕಾರಿ ಅನಂತ ಶಂಕರ ರವರು ದೀಪ ಬೆಳಗುವ ಮೂಲಕ ವಿದ್ಯಾರ್ಥಿ ಸಂಸತನ್ನು ಉದ್ಘಾಟಿಸಿ ಶುಭ ಕೋರಿದರು. ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷರಾದ ಶಿವಪ್ರಸಾದ ಮೈಲೇರಿ ಕಾರ್ಯಕ್ರಮಕ್ಕೆ ಶುಭಾಶಯ ಕೋರುವ ಜೊತೆಗೆ ಸಂಸ್ಥೆಯ ಜೊತೆಗಿನ ಒಡನಾಟ. ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಜೊತೆಗಿನ ಅವರ ಸಂಬಂಧವನ್ನು ಮೆಲುಕು ಹಾಕಿದರು.

ಕಾಲೇಜಿನ ಆಂಗ್ಲಭಾಷೆಯ ಉಪನ್ಯಾಸಕಿ ಶ್ರೀಮತಿ ಭಾರತಿ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ರಾಜ್ಯ ಶಾಸ್ತ್ರ ಉಪನ್ಯಾಸಕರು ಮತ್ತು ಮತದಾರರ ಸಾಕ್ಷರತಾ ಕ್ಲಬ್ ನ ನೋಡಲ್ ಅಧಿಕಾರಿ ಸಲೀನ್ ಕೆ.ಪಿಪ್ರತೀಜ್ನಾ ವಿಧಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲರು ಪ್ರತೀಜ್ನಾ ವಿಧಿ ಬೋದಿಸಿದರು ಹಾಗೂ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಂಸ್ಥೆಯ ಪ್ರಗತಿಯ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣವನ್ನು ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲರಾದ ಗಣರಾಜ ಕುಂಬ್ಳೆಯವರು ಅನೇಕ ಘನ ವಿಷಯಗಳನ್ನು ತಮ್ಮ ಹಾಸ್ಯ ಚಟಾಕಿ ಮೂಲಕ ಸರಳವಾಗಿ ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸುವ ಅತ್ಯುತ್ತಮ ಸಂದೇಶ ನೀಡಿದರು.
ಕುಮಾರಿ ಉಮಾಶ್ರೀ ಸ್ಸ್ವಾಗತಿಸಿದರು, ಕುಮಾರಿ ಅಕ್ಷತಾ ವಂದಿಸಿದರು, ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ಸುಕೇಶ ಚಂದ್ರಶೇಖರ ಮತ್ತು ಕುಮಾರಿ ಮಾನಸ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಉಪನ್ಯಾಸಕರಾದ ವಾಸುದೇವ ಗೌಡ, ಜ್ನಾನೇಶ್ವರ್ ಎಸ್, ಮಹದೇವ ಶೆಟ್ಟಿ ಅತಿಥಿ ಉಪನ್ಯಾಸಕರಾದ ಲಾವಣ್ಯ ಕುಮಾರಿ ಸೀಮಾ ನವೀನ್ ಶರಣ್ಯ ಗಾಯತ್ರಿ, ರಶ್ಮಿ ಸಹಕರಿಸಿದರು.
ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ಜಯೇಶ್ ದ್ವಿತೀಯ ವಾಣಿಜ್ಯ ವಿಭಾಗ, ಕಾರ್ಯದರ್ಶಿಯಾಗಿ ವೀಕ್ಷಾ ದ್ವಿತೀಯ ವಾಣಿಜ್ಯ ವಿಭಾಗ, ಜೊತೆ ರ್ಕಾರ್ಯದರ್ಶಿಯಾಗಿ ಅಲೀನಾ ಸಿಬಿ ಪ್ರಥಮ ವಿಜ್ಞಾನ ವಿಭಾಗ, ಕ್ರೀಡಾ ರ್ಕಾರ್ಯದರ್ಶಿಯಾಗಿ ಹರ್ಷಿತ್ ಪಿ ದ್ವಿತೀಯ ಕಲಾ ವಿಭಾಗ, ಸಾಂಸ್ಕೃತಿಕ ರ್ಕಾರ್ಯದರ್ಶಿಯಾಗಿ ದೇಯಶ್ರೀ ದ್ವಿತೀಯ ವಾಣಿಜ್ಯ ವಿಭಾಗ.
ಕಲಾ ಸಂಘ:
ಸಂಚಾಲಕರಾಗಿ ವಾಸುದೇವ ಗೌಡ ಅರ್ಥ ಶಾಸ್ತ್ರ ಉಪನ್ಯಾಸಕರು, ಅಧ್ಯಕ್ಷರಾಗಿ ಚೈತ್ರಾ, ಉಪಾಧ್ಯಕ್ಷರಾಗಿ ನಿತೇಶ್ ರೈ.
ವಾಣಿಜ್ಯ ಸಂಘ:
ಸಂಚಾಲರಾಗಿ ಸುಕೇಶ ಚಂದ್ರಶೇಖರ ವಾಣಿಜ್ಯ ಶಾಸ್ತ್ರ ಉಪನ್ಯಾಸಕರು, ಅಧ್ಯಕ್ಷರಾಗಿ ಚಿತ್ರಲೇಖಾ, ಉಪಾಧ್ಯಕ್ಷರಾಗಿ ಶ್ರೀಹರಿ.
ವಿಜ್ಞಾನಸಂಘ:
ಸಂಚಾಲಕರಾಗಿ ಜ್ಞಾನೇಶ್ವರ ಎಸ್ ಜೀವಶಾಸ್ತ್ರ ಉಪನ್ಯಾಸಕರು, ಅಧ್ಯಕ್ಷರಾಗಿ ಅತುಲ್ಯ ಎಸ್,ಉಪಾಧ್ಯಕ್ಷರಾಗಿ ಅಶ್ವಿನ್ ಅನಿಲ್.
ಸಾಹಿತ್ಯ ಸಂಘ:
ಸಂಚಾಲಕರಾಗಿ ಭಾರತಿ ಜಿ ಆಂಗ್ಲಭಾಷಾ ಉಪನ್ಯಾಸಕರು, ಅಧ್ಯಕ್ಷರಾಗಿ ದೀಕ್ಷಾ ಎನ್ ಎಸ್, ಉಪಾಧ್ಯಕ್ಷರಾಗಿ ಚಿಂತನ್ ಆಯ್ಕೆಯಾದರು.
ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅವರ ಪ್ರತಿಭೆಗಳನ್ನು ಅನಾವರಣ ಮಾಡಲು ವೇದಿಕೆಯನ್ನು ಒದಗಿಸಲು ವಿವಿಧ ಸಂಘಗಳನ್ನು ಪ್ರಾರಂಭಿಸಲಾಯಿತು.

Leave a Reply

error: Content is protected !!