ಮಳೆಯಿಂದ ತೀರ ಹದಗೆಟ್ಟ ಬೆಥನಿ-ಪಡ್ಡಡ್ಕ ರಸ್ತೆ ➽ ತಕ್ಷಣ ಸ್ಪಂದಿಸಿದ ಪಂಚಾಯತ್ ಸದಸ್ಯ ➽ ಅಭಿನಂದಿಸಿದ ವಾರ್ಡಿನ ಜನತೆ

ಶೇರ್ ಮಾಡಿ

ನೇಸರ ಜು.15: ನೆಲ್ಯಾಡಿ ಗ್ರಾಮದ ಬೆಥನಿ-ಪಡ್ಡಡ್ಕ ರಸ್ತೆಯು ವಿಪರೀತ ಮಳೆಯಿಂದಾಗಿ ತೀರ ಹದಗೆಟ್ಟಿತ್ತು, ವಾಹನ ಸಂಚಾರಕ್ಕಾಗಲಿ, ಶಾಲಾ ಮಕ್ಕಳಿಗೆ ನಡೆದುಕೊಂಡು ಶಾಲೆಗೆ ಹೋಗದ ಪರಿಸ್ಥಿತಿ ಉಂಟಾಗಿದ್ದು. ಕಳೆದ ಒಂದು ವಾರದಿಂದ ಈ ಭಾಗದ ಜನರು ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಈ ಸಮಸ್ಯೆಯನ್ನು ಅರಿತ ಈ ವಾರ್ಡ್ ನ ಪಂಚಾಯತ್ ನ ಸದಸ್ಯರಾದ ಜಯಾನಂದ ಬಂಟ್ರಿಯಾಲ್ ರವರು 1 ಲೋಡ್ ಕೆಂಪು ಕಲ್ಲನ್ನು ತರಿಸಿ ಸ್ವತಃ ಊರಿನವರೊಂದಿಗೆ ಸೇರಿಕೊಂಡು ಕಲ್ಲನ್ನು ಜೋಡಿಸಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನಡೆದುಕೊಂಡು ಹೋಗಲು ಅನುಕೂಲವಾಗುವ ರೀತಿಯಲ್ಲಿ ತಾತ್ಕಾಲಿಕವಾಗಿ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟರು.
ತಕ್ಷಣವಾಗಿ ಸ್ಪಂದಿಸಿ ಅನುಕೂಲ ಮಾಡಿಕೊಟ್ಟಂತಹ ಜಯನಂದ ಬಂಟ್ರಿಯಾಲ್ ರವರಿಗೆ ಬೆಥನಿ -ಪಡ್ಡಡ್ಕ ವಾರ್ಡಿನ ಜನತೆ ಅಭಿನಂದಿಸಿದರು.

Leave a Reply

error: Content is protected !!