ನೇಸರ ನ19: ಜಲ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆಗಳಡಿಯಲ್ಲಿ ವಿದ್ಯಾರ್ಥಿಗಳಿಗೆ ಅಂತರ್ಜಲ ಪುನರ್ಶ್ಚೇತನ ಮಾಹಿತಿ ಕಾರ್ಯಕ್ರಮ ಬೆಥನಿ ಪದವಿಪೂರ್ವ ಕಾಲೇಜು ನೂಜಿಬಾಳ್ತಿಲ-ಕಡಬದಲ್ಲಿ ನಡೆಯಿತು.
ಜಲಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ ಮಿಷನ್ ಯೋಜನೆಗಳ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಂಯೋಜಕರಾದ ಮಹಂತೇಶ್ ವಿದ್ಯಾರ್ಥಿಗಳಿಗೆ ಅಂತರ್ಜಲ ಮರುಪೂರ್ಣ, ಇಂಗು ಗುಂಡಿಗಳ ರಚನೆ ಹಾಗೂ ಸ್ವಚ್ಛತೆಯ ಬಗ್ಗೆ, ನೀರಿನ ಬಳಕೆಯ ಬಗ್ಗೆ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಸದಾನಂದಗೌಡ ಸಾಂತ್ಯಡ್ಕ. ಕಾಲೇಜಿನ ಪ್ರಾಂಶುಪಾಲ ಜಾರ್ಜ್.ಟಿ.ಎಸ್, ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್, ಹಾಗೂ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅಂತರ್ಜಲ ಪುನರ್ಶ್ಚೇತನ ಆಂದೋಲನದ ಪ್ರಯುಕ್ತ ಶಾಲಾ ಮಕ್ಕಳಿಗೆ ಭಾಷಣ, ಆಶುಭಾಷಣ, ಚಿತ್ರಕಲೆ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಅತಿಥಿಗಳ ಸಹಯೋಗದಲ್ಲಿ ಜಾಥಾ ಕಾರ್ಯಕ್ರಮವು ಬೆಥನಿ ಪದವಿಪೂರ್ವ ಕಾಲೇಜು ನೂಜಿಬಾಳ್ತಿಲದಿಂದ ಗೋಳಿಯಡ್ಕವರೆಗೆ ನಡೆಯಿತು.