ನೇಸರ ಜು.22: ಭಾರತೀಯ ಜನತಾ ಪಾರ್ಟಿಯ ಕಾರ್ಯಪದ್ಧತಿಯ ಕೇಂದ್ರ ಬಿಂದುವಾಗಿರುವ ಕಾರ್ಯಕರ್ತರನ್ನು ಪುನರ್ ನಿರ್ಮಿಸುವಂತಹ, ವೈಚಾರಿಕ ದೃಷ್ಟಿಕೋನವನ್ನು ಕೊಡುವಂತಹ, ಮೌಲ್ಯಾಧರಿತ ಬದುಕಿನ ಅಡಿಯಲ್ಲಿ ಜೀವನವನ್ನು ಮಾಡಬೇಕೆಂಬ ಉದ್ದೇಶದಿಂದ ಕೊಡುವಂತಹ ಚಿಂತನೆಯೇ ಪ್ರಶಿಕ್ಷಣ ವರ್ಗ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಹೇಳಿದರು.
ಅವರು ನಿಡ್ಲೆಯ ಆದಿತ್ಯವಿವ್ಯೂ ನಲ್ಲಿ ನಡೆದ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ವತಿಯಿಂದ ನಡೆದ ಎರಡು ದಿನಗಳ ಪ್ರಶಿಕ್ಷಣ ವರ್ಗದ ಸಮಾರೋಪದಲ್ಲಿ ಚೆನ್ನೆಮಣೆ ಆಡುವ ಮೂಲಕ ಪ್ರಶಿಕ್ಷಣಕ್ಕೆ ಮುಕ್ತಾಯ ಹಾಡಿ, ಸಮಾರೋಪ ಭಾಷಣ ಮಾಡಿದರು.
ರಾಷ್ಟ್ರೀಯ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸದಸ್ಯೆ ಅಶ್ವಿನಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರಾಮದಾಸ್ ಬಂಟ್ವಾಳ್, ಕಸ್ತೂರಿ ಪಂಜ, ಜಿಲ್ಲಾ ಪ್ರಶಿಕ್ಷಣ ಪ್ರಕೋಷ್ಠದ ಸಹ ಸಂಚಾಲಕ ಸುಧಾಕರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ಜಿಲ್ಲಾ ಮಹಿಳಾ ಮೋರ್ಚಾದ ಪ್ರಭಾರಿ ಪೂಜಾ ಪೈ, ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ತ್ರಿವೇಣಿ ಪೆರ್ವೋಡಿ, ಮಹಿಳಾ ಮೋರ್ಚಾ ಪ್ರಶಿಕ್ಷಣ ವರ್ಗದ ಸಂಚಾಲಕರಾದ ಗೀತಾ ರಾಮಣ್ಣ ಗೌಡ, ಸಹ ಸಂಚಾಲಕರಾದ ಮಮತಾ ಕೇಶವ, ಉಪಸ್ಥಿತರಿದ್ದರು.
ಮಹಿಳಾ ಮೋರ್ಚದ ಜಿಲ್ಲಾ ಅಧ್ಯಕ್ಷೆ ಧನಲಕ್ಷ್ಮಿ ಗಟ್ಟಿ ಯವರು ಸ್ವಾಗತಿಸಿದರು, ಉಪಾಧ್ಯಕ್ಷೆ ಪೂರ್ಣಿಮಾ ಎಂ ವಂದಿಸಿದರು, ಸೇವಂತಿ ಶ್ರೇಯಾನ್ ಕಾರ್ಯಕ್ರಮ ನಿರೂಪಿಸಿದರು.