ನೇಸರ ಜು.24: ಪದ್ಮುಂಜ ಒಕ್ಕಲಿಗರ ಯಾನೆ ಗೌಡರ ಸಂಘದ ಕಣಿಯೂರು ಗ್ರಾಮ ಸಮಿತಿಯ ಪದ್ಮುಂಜ ವಲಯದ ಸಮಾಲೋಚನಾ ಸಭೆ ಜುಲೈ 24ರಂದು ಪದ್ಮುಂಜ ಸಿ. ಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅತಿಥಿಗಳಾಗಿದ್ದ ನಿವೃತ್ತ ಶಿಕ್ಷಕರಾದ ಗುಡ್ಡಪ್ಪ ಬಲ್ಯರವರು ಮಾತನಾಡಿ ನಮ್ಮ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಗೌರವಯುತ ಸಾಧನೆ ಮಾಡಲು ಪ್ರೇರೇಪಿಸುವ ನಿಟ್ಟಿನಲ್ಲಿ ಸಂಘಟನೆ ಬಲಗೊಳಿಸಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಯೋಗಾಸನದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ 2022 ದಾಖಲೆ ಮಾಡಿದ ಮುಗೆರೋಡಿ ಪುರುಷೋತ್ತಮ ಗೌಡ ಹಾಗೂ ಮಂಜುಳಾ ದಂಪತಿಯ ಪುತ್ರ ಅಕ್ಷಯ್ ನನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕಲಿಗರ ಸಂಘ ಪದ್ಮುಂಜ ವಲಯದ ಅಧ್ಯಕ್ಷರಾದ ಮಾಧವ ಗೌಡ ಉರುಂಬುತ್ತಿಮಾರ್ ವಹಿಸಿದ್ದು. ಹಿರಿಯರಾದ ತಿಮ್ಮಯ್ಯ ಗೌಡ ಪದ್ಮುಂಜ, ಬಾಬು ಗೌಡ ಪೊಯ್ಯ, ಪದ್ಮನಾಭ ಗೌಡ ಕುದ್ಮಾರ್ ಹಾಗೂ ಯುವ ವೇದಿಕೆಯ ಅಧ್ಯಕ್ಷ ಪ್ರಶಾಂತ್ ಗೌಡ ಉರುಂಬುತ್ತಿಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾರ್ಥನೆ ಮನೀಷಾ ಮುಚ್ಚೂರು ಮತ್ತು ಬಳಗ, ಸಂಘದ ಕಾರ್ಯದರ್ಶಿ ನಾರಾಯಣ ಗೌಡ ಮುಚ್ಚೂರು ಸ್ವಾಗತಿಸಿದರು. ಯುವ ವೇದಿಕೆಯ ಕಾರ್ಯದರ್ಶಿ ಕರುಣಾಕರ ಉರುಂಬುತ್ತಿಮಾರ್ ಕಾರ್ಯಕ್ರಮ ನಿರೂಪಿಸಿ, ಸಂಘದ ಜೊತೆ ಕಾರ್ಯದರ್ಶಿ ಲೋಕೇಶ್ ಅಲೆಕ್ಕಿ ವಂದಿಸಿದರು.