ಭವ್ಯ ಭಾರತದ ಪರಿಕಲ್ಪನೆಯ ಸಾಕ್ಷಾತ್ಕಾರ ಯುವಕರ ಉತ್ತಮ ಮನೋಧರ್ಮದಿಂದ ಸಾಧ್ಯ – ಡಾ. ಎ. ಜಯಕುಮಾರ ಶೆಟ್ಟಿ

ಶೇರ್ ಮಾಡಿ

ನೇಸರ ಆ.04: ಧರ್ಮ ಎಂದರೆ ಕರ್ತವ್ಯ. ಮುಖ್ಯವಾಗಿ ಇದರ ಜಾಗೃತಿಯಾಗಬೇಕಾಗಿದೆ. ಇದಕ್ಕಾಗಿ ಸಾಮರಸ್ಯ ಶಿಕ್ಷಣದ ಅನಾವರಣ ಆಗಬೇಕು. ಈ ಮೂಲಕ ಮಾನವೀಯ, ಕಷ್ಟಗಳಿಗೆ ಸ್ಪಂದಿಸುವ ಗುಣ ಹಾಗೂ ಸಂವೇದನಾಶೀಲತೆಯನ್ನು ಬೆಳೆಸಿಕೊಳ್ಳಬೇಕು. ಇದು ವರ್ತನೆ, ಕೌಶಲ್ಯ ಹಾಗೂ ಪ್ರಗತಿಪರ ಚಿಂತನೆಯಿಂದ ಸಾಧ್ಯ ಮಾಡಿಕೊಳ್ಳಬಹುದು. ಇದಕ್ಕಾಗಿ ರಾಷ್ಟ್ರೀಯ ಸೇವಾ ಯೋಜನೆಯಗಳಂತಹ ಯೋಜನೆಗಳಿಂದ ಸಾಧ್ಯ. ಒಟ್ಟಾರೆ ಭವ್ಯ ಭಾರತದ ಪರಿಕಲ್ಪನೆಯ ಸಾಕ್ಷಾತ್ಕಾರ ಯುವಕರ ಉತ್ತಮ ಮನೋಧರ್ಮದಿಂದ ಸಾಧ್ಯ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಉಪ ಪ್ರಾಚಾರ್ಯ ಡಾ.ಎ.ಜಯಕುಮಾರ ಶೆಟ್ಟಿ ಅವರು ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆ ಗಳ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಹಾಗೂ ಸ್ವಯಂ ಸೇವಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದ ಪದವಿಪೂರ್ವ ಕಾಲೇಜಿನ ಉಪ ಪ್ರಾಚಾರ್ಯ ಪ್ರಮೋದ್ ಕುಮಾರ್ ಅವರು ಮಾತನಾಡಿ ಎನ್.ಎಸ್.ಎಸ್ ಸ್ವಯಂ ಸೇವಕರು ಸಾಮಾಜಿಕ ಕಳಕಳಿಯ ಕೈಂಕರ್ಯಕ್ಕೆ ಮನಮಾಡಬೇಕೆಂದು ಕರೆಕೊಟ್ಟರು.

ಇದೇ ಸಂದರ್ಭದಲ್ಲಿ ಶ್ರಮದಾನದ ಅಗತ್ಯಕ್ಕೆ ಬೇಕಾದ ಪರಿಕರಗಳನ್ನು ಕೊಡುಗೆಯಾಗಿ ನೀಡಿದ ರಾಷ್ಟ್ರೀಯ ಮಾನವ ಹಕ್ಕುಗಳ ದಕ್ಷಿಣ ವಲಯದ ಕೌನ್ಸಿಲ್ ಸದಸ್ಯರಾದ ರವೀಂದ್ರ ಪಾವಗಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಅವರು ಅತಿಥಿಗಳನ್ನು ಗೌರವಿಸಿದರು. ಸಹ ಯೋಜನಾಧಿಕಾರಿ ಚೇತನಾ ಕುಮಾರಿ ಅವರು ಸ್ವಾಗತಿಸಿದರು. ಯಶಸ್ ಪರಿಚಯಿಸಿದರು. ಉಪ ನಾಯಕಿ ಪ್ರಣಮ್ಯಾ ನಿರೂಪಿಸಿ, ನಾಯಕ ಚೇತನ್ ನಂದಿಹಳ್ಳಿ ವಂದಿಸಿದರು.

Leave a Reply

error: Content is protected !!