ನೇಸರ ಆ.12: ಜೇಸಿಐ ಪಂಜ ಪಂಚಶ್ರೀಯ ಪೂರ್ವಾಧ್ಯಕ್ಷರಾದ ಜೇಸಿ.ದಯಪ್ರಸಾದ್ ಚೀಮುಳ್ಳು ರವರ ನಿವಾಸದಲ್ಲಿ ಘಟಕಾಧ್ಯಕ್ಷರಾದ ಜೇಸಿ. ಶಿವಪ್ರಸಾದ್ ಹಾಲೆಮಜಲು ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೆಳ್ಳಿಹಬ್ಬ ಸಮಿತಿ ರಚನೆಗೊಂಡಿತು.
ಸಮಿತಿಯ ಅಧ್ಯಕ್ಷರಾಗಿ ಘಟಕದ ಸ್ಥಾಪಕಾಧ್ಯಕ್ಷರಾದ ದೇವಿಪ್ರಸಾದ್ ಜಾಕೆ, ಪ್ರಧಾನ ಕಾರ್ಯದರ್ಶಿಯಾಗಿ ಪೂರ್ವ ಅಧ್ಯಕ್ಷರಾದ ತೀರ್ಥಾನಂದ ಕೊಡಂಕಿರಿ, ಕೋಶಾಧಿಕಾರಿಯಾಗಿ ಸೋಮಶೇಖರ ನೇರಳ, ಕಾರ್ಯಾಧ್ಯಕ್ಷರಾಗಿ ಘಟಕದ ಅಧ್ಯಕ್ಷರಾದ ಶಿವಪ್ರಸಾದ್ ಹಾಲೆ ಮಜಲು, ಕಾರ್ಯದರ್ಶಿಯಾಗಿ ಕೌಶಿಕ್ ಕುಳ ಆಯ್ಕೆಯಾದರು.
ಸ್ಮರಣ ಸಂಚಿಕೆಯ ಮುಖ್ಯ ಸಂಯೋಜಕರಾಗಿ ಜೇಸಿ.ಸವಿತಾರ ಮುಡೂರು, ಕಾರ್ಯಕ್ರಮ ಸಂಯೋಜನ ಸಮಿತಿಯ ಮುಖ್ಯ ಸಂಯೋಜಕರಾಗಿ ಜೇಸಿ.ಶಶಿಧರ ಪಳಂಗಾಯ, ಶಾಶ್ವತ ಯೋಜನ ಸಮಿತಿಯ ಮುಖ್ಯ ಸಂಯೋಜಕರಾಗಿ ಗುರುಪ್ರಸಾದ್ ತೋಟ, ಚಂದ್ರಶೇಖರ ಇಟ್ಯಡ್ಕ, ಆರ್ಥಿಕ ಸಮಿತಿಯ ಮುಖ್ಯ ಸಂಯೋಜಕರಾಗಿ ದಯಪ್ರಸಾದ್ ಚೀಮುಳ್ಳು, ಸಂತೋಷ್ ಜಾಕೆ, ಭರತ್ ನಕ್ರಾಜೆ, ಗಣೇಶ್ ಪ್ರಸಾದ್ ನಾಯರ್, ಇಸ್ಮಾಯಿಲ್ ಪಡ್ಪಿ ನಂಗಡಿ, ರಾಜೇಶ್ ಕಂಬಳ, ರಾಜೇಶ್ ರೈ ಪಂಜ, ಸಾಂಸ್ಕೃತಿಕ ಸಮಿತಿಯ ಸಂಯೋಜಕರಾಗಿ ರಾಜೇಶ್ ಕಂಬಳ, ಚೇತನ್ ತಂಟೆಪಾಡಿ, ಕ್ರೀಡಾ ಸಮಿತಿಯ ಸಂಯೋಜಕರಾಗಿ ಸುದರ್ಶನ್ ಪಟ್ಟಾಜೆ ಹಾಗೂ ಚಂದ್ರಶೇಖರ್ ಕುಕ್ಕು ಪುಣಿ, ಸಭಾ ಕಾರ್ಯಕ್ರಮ ನಿರ್ವಹಣೆ ಸಂಯೋಜಕರಾಗಿ ಜಯರಾಮ ಕಲ್ಲಾಜೆ ಹಾಗೂ ಗಣೇಶ್ ಪ್ರಸಾದ್ ಭೀಮಗುಳಿ, ಪ್ರಚಾರ ಮತ್ತು ಆಮಂತ್ರಣ ಪತ್ರಿಕೆ ಸಮಿತಿಯ ಸಂಯೋಜಕರಾಗಿ ವಾಸುದೇವ ಮೇಲ್ಪಾಡಿ, ಪುರುಷೋತ್ತಮ ದಂಬೆಕೋಡಿ , ಆಹಾರ ಸಮಿತಿಯ ಸಂಯೋಜಕರಾಗಿ ನಾಗಮಣಿ ಕೆದಿಲ ಆಯ್ಕೆಯಾದರು. ಪೂರ್ವಾಧ್ಯಕ್ಷರಾದ ಜೇಸಿ. ದಯಪ್ರಸಾದ್ ಚೀಮುಳ್ಳು ಸ್ವಾಗತಿಸಿ ಘಟಕದ ಕಾರ್ಯದರ್ಶಿ ಕೌಶಿಕ್ ಕುಳ ಧನ್ಯವಾದ ಸಮರ್ಪಣೆ ಮಾಡಿದರು.
NESARA|| WhatsApp ||GROUPS |
---|