ನೇಸರ ನ26: ಜ್ಞಾನೋದಯ ಪದವಿಪೂರ್ವ ಕಾಲೇಜು ನೆಲ್ಯಾಡಿಯಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಆಶ್ರಯದಲ್ಲಿ ಆರ್ಥಿಕ ನಿರ್ವಹಣೆ ಮತ್ತು ಸಾಮೂಹಿಕ ಮಾಧ್ಯಮಗಳ ಬಳಕೆಯಿಂದ ಉಂಟಾಗುವ ಉಪಯೋಗಗಳು ಹಾಗೂ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗೆ ಮಾಹಿತಿ ಕಾರ್ಯಗಾರವನ್ನು ನ 26 ರಂದು ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಿಜಯಕುಮಾರ್ ವೈ.ಸಿ ಅವರು ತಾಂತ್ರಿಕ ನಿರ್ವಹಣೆಯನ್ನು ಹೇಗೆ ಸಮರ್ಪಕವಾಗಿ ಮಾಡಬಹುದು, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಹೇಗೆ ಹಣ ಹೂಡಿಕೆಯನ್ನು ಮಾಡಬಹುದು, ಆರ್ಥಿಕತೆಯ ಭದ್ರ ಬುನಾದಿಯನ್ನು ಹೇಗೆ ಮಾಡಬಹುದು, ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಪ್ ಗಳನ್ನು ಹೇಗೆ ಸಮರ್ಪಕವಾಗಿ ವಿದ್ಯಾರ್ಥಿಗಳು ಉಪಯೋಗಿಸಬೇಕು, ಜಾಲತಾಣಗಳಿಂದ ತಮ್ಮ ಜೀವನವನ್ನು ಹಾಳು ಮಾಡದೆ ಸಮರ್ಪಕವಾಗಿ ಬಳಸುವ ವಿಧಾನವನ್ನು ಕಾರ್ಯಕ್ರಮದ ಮೂಲಕ ತಿಳಿಸಿಕೊಡಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲ ರೇ.ಫಾ.ತೋಮಸ್ ಬಿಜಿಲಿ, ಉಪಪ್ರಾಂಶುಪಾಲ ಜೋಸ್.ಎಮ್.ಜೆ, ಪದವಿಪೂರ್ವ ವಿಭಾಗದ ಉಪಪ್ರಾಂಶುಪಾಲ ಸುನಿಲ್ ಕುಮಾರ್ ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು, ವಿದ್ಯಾರ್ಥಿಗಳಾದ ಕ್ರಿಸ್ಮ ಸ್ವಾಗತಿಸಿ, ಸಾಂದ್ರ ವಂದಿಸಿದರು, ಸುಶೀಲ್ ಕುಮಾರ್ ನಿರೂಪಿಸಿದರು.