ನೇಸರ ನ 27: ಶ್ರೀರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿಯಲ್ಲಿ ದಿನಾಂಕ 26/11/2021 ಶುಕ್ರವಾರದಂದು ಶಾಲಾ ಸಂಸತ್ತಿನ ಉದ್ಘಾಟನಾ ಸಮಾರಂಭವು ನಡೆಯಿತು. ಈ ಕಾರ್ಯಕ್ರಮವನ್ನು ನೆಲ್ಯಾಡಿ ಪಂಚಾಯತ್ ನ ಸದಸ್ಯ ಹಾಗು ಹಿಂದೂ ಜಾಗರಣ ವೇದಿಕೆಯ ಪ್ರಮುಖ ರವಿಪ್ರಸಾದ್ ಶೆಟ್ಟಿ ರಾಮನಗರ ಉದ್ಘಾಟಿಸಿ, ನಾಯಕತ್ವದ ಗುಣಕ್ಕೆ ಶಿಸ್ತು ಮತ್ತು ಸಂಸ್ಕಾರ ಅಡಿಪಾಯ, ಭಾರತೀಯ ಸಂಸ್ಕೃತಿಯ ಜೊತೆ ನಿಮ್ಮ ನಾಯಕತ್ವದ ವ್ಯಕ್ತಿತ್ವ ರಾರಾಜಿಸಲಿ ಎಂದು ಶುಭ ಹಾರೈಸಿದರು.
ಶಾಲಾ ಮಂತ್ರಿಮಂಡಲದ ನಾಯಕನಾಗಿ ಆಯ್ಕೆಗೊಂಡ ಚಂದನ್ ಮತ್ತು ಉಪನಾಯಕ ಗುರುಕಿರಣ್ ಅತಿಥಿಗಳ ಆರ್ಶೀವಾದ ಹಾಗು ನಾಯಕ ದೀಪವನ್ನು ಪಡೆದು ತನ್ನ ಜೊತೆ ಜವಾಬ್ದಾರಿ ಹೊತ್ತಿರುವ ಉಪನಾಯನಿಗೆ ದೀಪವನ್ನು ನೀಡಿವ ಭಾವನಾತ್ಮಕ ಕಾರ್ಯಕ್ರಮದ ಮೂಲಕ ಚಾಲನೆ ನೀಡಲಾಯಿತು. ವಿದ್ಯಾರ್ಥಿ ನಾಯಕರುಗಳಿಗೆ ಪ್ರಭು ಶ್ರೀರಾಮ ಚಂದ್ರನ ಹೆಸರಿನಲ್ಲಿ ಪ್ರತಿಜ್ಞೆಯನ್ನು ನೆಲ್ಯಾಡಿ ಪಂಚಾಯತ್ ಸದಸ್ಯ ಆನಂದರವರು ಬೋದಿಸಿದರು.
ಕಾರ್ಯಕ್ರಮದಲ್ಲಿ ನೆಲ್ಯಾಡಿ ಪಂಚಾಯತ್ ಸದಸ್ಯ ಪ್ರಕಾಶ್ ಪೂಜಾರಿ ಹಾಗು ಮುಖ್ಯಗುರು ಗಣೇಶ್ ವಾಗ್ಲೆ ಉಪಸ್ಥಿತರಿದ್ದರು.ಶಾಲಾ ಮಾತಾಜಿ ಶ್ರೀಮತಿ ರೋಹಿಣಿ ಸ್ವಾಗತಿಸಿ, ಕುಮಾರಿ ದಿವ್ಯ ಧನ್ಯವಾದವಿತ್ತರು. ಅನಿಲ್ ಅಕ್ಕಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಅನಿತ ಮಾತಾಜಿ ಕಾರ್ಯಕ್ರಮ ಸಂಘಟಿಸಿದರು.