ನೇಸರ ಆ.20: ಶ್ರೀರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿ, ಶ್ರೀ ರಾಮ ಗ್ರಾಮ ವಿಕಾಸ ಸಮಿತಿ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಆಶ್ರಯದಲ್ಲಿ ಆನಂದಾಶ್ರಮ ಸೇವಾ ಟ್ರಸ್ಟ್(ರಿ)ಪುತ್ತೂರು, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮಂಗಳೂರು, ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ, ಸಂಚಾರಿ ನೇತ್ರ ಚಿಕಿತ್ಸಾ ಘಟಕ ಮಂಗಳೂರು ಇವುಗಳ ಸಹಯೋಗದೊಂದಿಗೆ ಉಚಿತ ನೇತ್ರ ಚಿಕಿತ್ಸಾ ಶಿಬಿರ ಮತ್ತು ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮವನ್ನು ಅಶ್ವಿನಿ ಆಸ್ಪತ್ರೆಯ ವೈದ್ಯಾಧಿಕಾರಿ ಹಾಗೂ ಶ್ರೀರಾಮ ವಿದ್ಯಾಲಯ ಇದರ ಆಡಳಿತ ಸಮಿತಿ ಅಧ್ಯಕ್ಷರೂ ಆದ ಡಾ.ಮುರಳೀಧರ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಶಿಬಿರದ ಬಗ್ಗೆ ಮಾಹಿತಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಡಾ. ಶಾಂತರಾಜ್ ಮತ್ತು ಡಾ.ಅನಿಲ್ ರಾಮಾನುಜಮ್ ನೀಡಿದರು.
ನೇತ್ರಾದಾನ ಹಾಗೂ ಅಂಗಾಂಗ ದಾನಗಳ ಬಗ್ಗೆ ಡಾ.ಪದ್ಮಾವತಿ ಮಾಹಿತಿ ನೀಡಿದರು. ಶ್ರೀರಾಮ ವಿದ್ಯಾಲಯದ ಗೌರವಾಧ್ಯಕ್ಷರಾದ ಶ್ರೀಧರ ಗೊರೆ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಹಾಗೂ ಅಗತ್ಯ ಇರುವವರಿಗೆ ಉಚಿತ ಕನ್ನಡಕ ನೀಡುತ್ತಿರುವ ಡಾ.ಗೌರಿ ಪೈ ಹಾಗೂ ಹಲವಾರು ನೇತ್ರ ಶಿಬಿರಗಳನ್ನು ಆಯೋಜಿಸಿರುವ ಗಂಗಾಧರ ಶೆಟ್ಟಿ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಸೀನಿಯರ್ ಚೇಂಬರ್ ಅಧ್ಯಕ್ಷ ಆರ್ ವೆಂಕಟ್ರಮಣ ಶಿಬಿರದ ಸದುಪಯೋಗವನ್ನು ಕಣ್ಣಿನ ತೊಂದರೆ ಇರುವವರು ಎಲ್ಲರು ಪಡೆದುಕೊಳ್ಳ ಬೇಕೆಂದರು. ವೇದಿಕೆಯಲ್ಲಿ ವೆನ್ಲಾಕ್ ಡಾ. ಶ್ರೀನಿವಾಸ್, ಶ್ರೀರಾಮ ವಿದ್ಯಾಲಯದ ಮುಖ್ಯಗುರು ಗಣೇಶ್ ವಾಗ್ಲೆ, ಸೀನಿಯರ್ ಚೇಂಬರ್ ರಾಷ್ಟ್ರೀಯ ಅಧಿಕಾರಿ ಡಾ.ಸದಾನಂದ ಕುಂದರ್, ಸೀನಿಯರ್ ರವೀಂದ್ರ. ರವಿಚಂದ್ರ ಹೊಸವೊಕ್ಲು, ಗಂಗಾಧರ ಶೆಟ್ಟಿ ಹೊಸಮನೆ, ಗಂಗಾಧರ ಶೆಟ್ಟಿ ಕೊಲ್ಯೊಟು, ಸೀನಿಯರ್ ಮೋಹನ್ ಕುಮಾರ್ ಉಪಸ್ಥಿತರಿದ್ದರು. ಸೀನಿಯರ್ ಜಯಾನಂದ ಬಂಟ್ರಿಯಾಲ್ ಸೀನಿಯರ್ ಚೇಂಬರ್ ವಾಣಿ ಪಟಿಸಿದರು. ಗಂಗಾಧರ ಹೊಸಮನೆ ವಂದನಾರ್ಪಣೆಗೈದರು. 130 ಮಂದಿ ಶಿಬಿರದಲ್ಲಿ ಪಾಲ್ಗೊಂಡು 100 ಕನ್ನಡಕ ಉಚಿತವಾಗಿ ಅನಂದಾಶ್ರಮದ ಡಾ.ಗೌರಿ ಪೈ ನೀಡಿದರು.
NESARA|| WhatsApp ||GROUPS |
---|