ನೆಲ್ಯಾಡಿ: ಸಾಫಿನ್ಸಿಯ ಬೆಥನಿ ಪ್ರಥಮ ದರ್ಜೆ ಕಾಲೇಜಿನ ನೂತನ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳ ಪ್ರಮಾಣವಚನ ಮತ್ತು ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ನೆಲ್ಯಾಡಿಯ ಬೆಥನಿ ಕೈಗಾರಿಕಾ ಸಂಸ್ಥೆಯ ಪ್ರಾಂಶುಪಾಲರಾದ ಸಜಿ ಕೆ ತೋಮಸ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು “ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳುವುದು ಬಹಳ ಅವಶ್ಯಕ. ಆದ್ದರಿಂದ ಪ್ರತಿ ವಿದ್ಯಾರ್ಥಿ ಕೂಡ ಸೂಕ್ತ ಕೌಶಲ ಬೆಳೆಸಿಕೊಳ್ಳಬೇಕು” ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಭೋದಿಸಿದರು. ಕಾಲೇಜು ನಾಯಕನಾಗಿ ಆದಿತ್ಯ ಕೃಷ್ಣ (ತೃತೀಯ ಬಿ ಎ ), ಉಪ ನಾಯಕನಾಗಿ ಜೋಬಿನ್(ತೃತೀಯ ಬಿ ಕಾಂ ), ಕಾರ್ಯದರ್ಶಿಯಾಗಿ ಹಂಸೀಫಾ (ತೃತೀಯ ಬಿ ಕಾಂ ), ಸಾಂಸ್ಕೃತಿಕ ಸಂಘದ ಕಾರ್ಯದರ್ಶಿಯಾಗಿ ಸಮ್ಯಕ್ತ್ ಜೈನ್ (ತೃತೀಯ ಬಿಎ), ಕ್ರೀಡಾ ಕಾರ್ಯದರ್ಶಿಯಾಗಿ ಕಬೀರ್ (ದ್ವಿತೀಯ ಬಿಎ ), ಎನ್.ಎಸ್. ಎಸ್. ನಾಯಕನಾಗಿ ಅಭಿಜಿತ್ (ದ್ವಿತೀಯ ಬಿ ಎ )ಎನ್. ಎಸ್. ಎಸ್. ನಾಯಕಿಯಾಗಿ ಸಾಯಿದೃತಿ (ದ್ವಿತೀಯ ಬಿ ಎ ) ಮತ್ತು ಶ್ರೇಷ್ಠ ಜೈನ್ (ದ್ವಿತೀಯ ಬಿ ಕಾಂ ), ಮಹಿಳಾ ಸುರಕ್ಷತಾ ಸಮಿತಿ ಕಾರ್ಯದರ್ಶಿಯಾಗಿ ಜೆಸ್ನಾ (ದ್ವಿತೀಯ ಬಿಬಿಎ) ಕನ್ನಡ ಸಂಘದ ಕಾರ್ಯದರ್ಶಿಯಾಗಿ ಕಲ್ಪನ (ದ್ವಿತೀಯ ಬಿ ಕಾಂ), ಇಂಗ್ಲೀಷ್ ಸಂಘದ ಕಾರ್ಯದರ್ಶಿಯಾಗಿ ಚೈತ್ರ (ದ್ವಿತೀಯ ಬಿ ಕಾಂ ), ಸಮೂಹ ಮಾಧ್ಯಮ ಕಾರ್ಯದರ್ಶಿಯಾಗಿ ನೈಜಿನ್ (ತೃತೀಯ ಬಿ ಕಾಂ) ಪ್ರಮಾಣವಚನ ಸ್ವೀಕರಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಫಾ.ಮೆಲ್ವಿನ್ ಮಾತ್ಯು ಮಾತನಾಡಿ “ನಮ್ಮ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಚುನಾವಣೆಗೆ ಮಹತ್ವವಿದೆ. ವಿದ್ಯಾರ್ಥಿಗಳ ಪ್ರತಿನಿಧಿಯಾದ ನೀವು ಅವರ ಆಶೋತ್ತರ ಗಳನ್ನು ಈಡೇರಿಸುವುದು ನಿಮ್ಮ ಕರ್ತವ್ಯ” ಎಂದು ಹೇಳಿದರು. ವೇದಿಕೆಯಲ್ಲಿ ಉಪ ಪ್ರಾಂಶುಪಾಲರಾದ ಫಾ.ಜಿಜನ್ ಅಬ್ರಹಾಂ, ಚುನಾವಣಾಧಿಕಾರಿಗಳಾದ ಉಪನ್ಯಾಸಕ ವಿಶ್ವನಾಥ್ ಹಾಗು ಉಪನ್ಯಾಸಕಿ ಶ್ರೀಮತಿ ಡೈನಾ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಕು.ರುಕ್ಸನಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಕು.ಜೆಸ್ನಾ ಸ್ವಾಗತಿಸಿ. ಕು. ಮಸೂದ ವಂದಿಸಿದರು. ಕಾಲೇಜಿನ ಎಲ್ಲಾ ಉಪನ್ಯಾಸಕ ವರ್ಗದವರು ಉಪಸ್ಥಿತರಿದ್ದರು.