
ಉಪ್ಪಿನಂಗಡಿ: ಜೇಸಿಐ 18 ರಿಂದ 40 ವರ್ಷದ ಯುವಕರ ವ್ಯಕ್ತಿತ್ವ ವಿಕಸನ ತರಬೇತಿ ಸಂಸ್ಥೆಯಾಗಿದೆ. ಸಂಸ್ಥೆ 9 ರಿಂದ 12ನೇ ತರಗತಿಗಳಲ್ಲಿ ಅಧ್ಯಯನ ಮಾಡುವ ಆರ್ಥಿಕವಾಗಿ ಹಿಂದುಳಿದ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತದೆ. 2022ನೇ ಸಾಲಿನಲ್ಲಿ ವಲಯಾಧ್ಯಕ್ಷ ಜೇಸಿ ರೋಯನ್ ಉದಯ ಕ್ರಾಸ್ತಾ, ವಲಯ ವಿದ್ಯಾರ್ಥಿವೇತನ ನಿರ್ದೇಶಕ ಜೇಸಿ ಉದಯ ನಾಯ್ಕ್ ಮತ್ತು ಜೇಸಿಐ ಉಪ್ಪಿನಂಗಡಿ ಘಟಕಾಧ್ಯಕ್ಷ ಜೇಸಿ ಮೋಹನ್ ಚಂದ್ರ ತೋಟದ ಮನೆಯವರ ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ವಂದನಾ, ಧನ್ಯಶ್ರೀ, ಹರ್ಷೀಣಿ, ಇಂದ್ರಪ್ರಸ್ಥ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಚೈತ್ರ, ಕಾಂಚನ ವೆಂಕಟ ಸುಬ್ರಹ್ಮಣ್ಯಂ ಸ್ಮಾರಕ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಪೂರ್ವವಿಕ, ದಿವ್ಯ,ರಕ್ಷಿತಾ,ಪವನ್, ಅಭಿಲಾಷ್, ದೀಕ್ಷಿತಾ, ಸುಜನ್, ಹೀತಾಕ್ಷಿ, ಲೋಹಿತ್, ನಿರೀಕ್ಷಾ, ಸುಪ್ರೀತ್, ಶರವಣ್, ನಂದಕುಮಾರ್, ಪ್ರಣ್ಮಯ, ನವ್ಯಶ್ರೀ, ಮೋಕ್ಷಿತಾ ಆಯ್ಕೆಗೊಂಡು ಜೇಸಿಐ ಭಾರತದ 50 ಸಾವಿರ ವಿದ್ಯಾರ್ಥಿ ವೇತನ ಪಡೆದುಕೊಂಡಿದ್ದಾರೆ. ಕಾಂಚನ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಸೂರ್ಯ ಪ್ರಕಾಶ ಉಡುಪ ಮತ್ತು ಸಿಬ್ಬಂದಿ ವರ್ಗ ವಿದ್ಯಾರ್ಥಿಗಳ ಮಾಹಿತಿ ನೀಡಿ ಸಹಕರಿಸಿದರು.




