ಧರ್ಮಸ್ಥಳ ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ರಕ್ಷಣಾ ಸಚಿವಾಲಯದಿಂದ ಟಿ-565 ಟ್ಯಾಂಕ್ ಕೊಡುಗೆ

ಶೇರ್ ಮಾಡಿ

ಧರ್ಮಸ್ಥಳ: ಭಾರತದ ರಕ್ಷಣಾ ಸಚಿವಾಲಯದಿಂದ ಪೂನಾದ ಕೇಂದ್ರೀಯ ರಕ್ಷಣಾ ಡಿಪೋದ ಮೂಲಕ ಮಂಗಳವಾರ ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ಟಿ-565 ಟ್ಯಾಂಕ್ ಕೊಡುಗೆಯಾಗಿ ನೀಡಲಾಯಿತು.
ದೇಶದ ರಕ್ಷಣಾ ಕಾರ್ಯದಲ್ಲಿ ಸುಮಾರು 40 ವರ್ಷಗಳ ಕಾಲ ಇದು ಬಳಕೆಯಾಗಿದೆ. 1971ರ ಇಂಡೋ- ಪಾಕ್ ಯುದ್ಧದಲ್ಲಿ ಮತ್ತು ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಇದು ಬಳಕೆಯಾಗಿದೆ.

ತಾಂತ್ರಿಕ ಮಾಹಿತಿ:

ಸೋವಿಯತ್ ಒಕ್ಕೂಟದ ಸಿಬ್ಬಂದಿಯಿಂದ ತಯಾರಾದ ಇದು 40 ಟನ್‍ಗಳಷ್ಟು ತೂಕ ಹೊಂದಿದೆ. ಟ್ಯಾಂಕ್ 9 ಅಡಿ ಎತ್ತರ,27.6 ಅಡಿ ಉದ್ದ ಮತ್ತು 10.8 ಅಗಲ ಹೊಂದಿದೆ. ಗಂಟೆಗೆ 51 ಕಿ.ಮೀ.ಗರಿಷ್ಠ ವೇಗ, ಸಾಮರ್ಥ್ಯ, 500 ಅಶ್ವಶಕ್ತಿ ಹೊಂದಿದೆ.
1968ರಲ್ಲಿ ಭಾರತೀಯ ಸೇನೆಗೆ ಇದನ್ನು ಸೇರಿಸಲಾಯಿತು.
100 ಎಂ ಎಂ ಕ್ಯಾಲಿಬರ್ ಗನ್, 7.62 ಸಾಮರ್ಥ್ಯದ ಕ್ಯಾಲಿಬರ್ ಮೆಷೀನ್ ಗನ್, ಆಂಟಿ ಏರ್ ಕ್ರಾಫ್ಟ್ ಗನ್ ಗಳನ್ನು ಹೊಂದಿದ್ದು ರಾತ್ರಿ ವೇಳೆಯ ಯುದ್ಧದ ಕಾರ್ಯಾಚರಣೆಗೂ ಬಳಸಲ್ಪಟ್ಟಿತ್ತು.

Leave a Reply

error: Content is protected !!