ನೆಲ್ಯಾಡಿ: ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

ಶೇರ್ ಮಾಡಿ

ನೆಲ್ಯಾಡಿ: ಇನ್ಫೆಂಟ್ ಜೀಸಸ್ ಚರ್ಚ್, ನೆಲ್ಯಾಡಿ ಇವರ ಮುಂದಾಳತ್ವದಲ್ಲಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಕಂಕನಾಡಿ ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಸೈಂಟ್ ಜೋಸೆಫ್ಸ್ ಪ್ರಶಾಂತ್ ನಿವಾಸ್ (ಆಶ್ರಮ) ಮಾದೇರಿ ಯಲ್ಲಿ ಡಿ.11 ರಂದು ನಡೆಯಿತು.
ನೆಲ್ಯಾಡಿ ಬಾಲಯೇಸು ದೇವಾಲಯದ ಧರ್ಮ ಗುರುಗಳಾದ ಫಾ.ವಿನ್ಸೆಂಟ್ ಡಿಸೋಜಾ ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಚರ್ಮರೋಗ ತಜ್ಞರಾದ ಡಾ.ರೋಸೆಲ್ ಮಂತೆರೂ, ರೊನಾಲ್ಡ್ ಫ್ರಾನ್ಸಿಸ್, ನೆಲ್ಯಾಡಿ ಪ್ರಶಾಂತ್ ನಿವಾಸ್ ನ ಸಿಸ್ಟರ್ ತ್ರೇಜ ಜೋನ್, ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ತೋಮಸ್ ಡಿಸೋಜಾ, ಚರ್ಚಿನ ಪಾಲನಾ ಸಮಿತಿ ಕಾರ್ಯದರ್ಶಿ ಸಂದೇಶ್ ಡಿಸೋಜಾ, ಚರ್ಚಿನ ಸಂಘಟನೆಯ ಸಂಯೋಜಕಿ ಮೇರಿ ಡಿಸೋಜಾ ಉಪಸ್ಥಿತರಿದ್ದರು.
ನೆಲ್ಯಾಡಿ ಜನಜಾಗೃತಿ ವೇದಿಕೆಯ ವಲಯಾದ್ಯಕ್ಷರಾದ ಜಯಾನಂದ ಬಂಟ್ರಿಯಾಲ್ ಹಾಗೂ ಚರ್ಚಿನ ಪಾಲನ ಪದಾಧಿಕಾರಿಗಳು ಭಾಗವಹಿಸಿದ್ದರು.
ಸಂದೇಶ್ ಡಿಸೋಜಾ ಸ್ವಾಗತಿಸಿ, ಅವಿನಾಶ್ ಡಿಸೋಜಾ ವಂದಿಸಿದರು, ಜಾನ್ ಮಂತೇರೋ ಕಾರ್ಯಕ್ರಮ ನಿರೂಪಿಸಿದರು.
167 ಮಂದಿ ಕಾರ್ಯಕ್ರಮದ ಪ್ರಯೋಜನೆಯನ್ನು ಪಡೆದುಕೊಂಡರು.

Leave a Reply

error: Content is protected !!